ಏಷ್ಯಾ ಕಪ್ 2023 ಯನ್ನು ಪಾಕಿಸ್ತಾನ ಮತ್ತು ಶ್ರೀಲಂಕಾವು ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ಹೋಸ್ಟ್ ಮಾಡಿದೆ . ಈ ವರ್ಷ ODI ವರ್ಲ್ಡ್ ಕಪ್ ಹೋಸ್ಟ್ ಮಾಡಿರುವುದರಿಂದ , ಏಷ್ಯಾ ಕಪ್ 2023 ಸಹ ODI ಫಾರ್ಮ್ಯಾಟ್ ನಲ್ಲಿ ಆಡಲಾಗುತ್ತದೆ. ಏಷ್ಯಾ ಕಪ್ನಂತಹ ಟೊರ್ನಾಮೆಂಟ್ ನ ವಿಷಯಕ್ಕೆ ಬಂದರೆ, ಒಂದು ಟೀಮ್ ಭಾರತಕ್ಕೆ ದೊಡ್ಡ ಅಪಾಯವಾಗಿ ಕಾಣುತ್ತಿದೆ . ಈ ಟೀಮ್ ಟೀಮ್ ಇಂಡಿಯಾ ಗೆ ಪಾಕಿಸ್ತಾನಕ್ಕಿಂತ ಹೆಚ್ಚು ಡೇಂಜರ್ . ಏಷ್ಯಾ ಕಪ್ 2023 ಟೊರ್ನಾಮೆಂಟ್ ನಲ್ಲಿ 6 ಟೀಮ್ ಗಳು ಭಾಗವಹಿಸುತ್ತವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ , ಅಫ್ಘಾನಿಸ್ತಾನ, ಬಾಂಗ್ಲಾದೇಶ, ತಂಡಗಳು ಭಾಗವಹಿಸಲಿವೆ.

ಭಾರತ ತಂಡ ಏಷ್ಯಾಕಪ್’ನಲ್ಲಿ ಒಂದು ತಂಡದೊಂದಿಗೆ ವಿಶೇಷವಾಗಿ ಕೇರ್ ಫುಲ್ ಆಗಬೇಕಿದೆ . ಈ ಟೀಮ್ ಬೇರಾವುದೂ ಅಲ್ಲ, ಅದುವೇ ಬಾಂಗ್ಲಾದೇಶ. ತನ್ನ ಬಲಿಷ್ಠ ಸಾಮಾರ್ಥ್ಯದಿಂದಲೇ ಬೇರೆ ತಂಡವನ್ನು ನೆಲಕಚ್ಚಿಸುವ ಕ್ಯಾಪಾಸಿಟಿ ಹೊಂದಿದೆ. ಬಾಂಗ್ಲಾದೇಶವು ಪ್ರತಿಯೊಂದು ಪ್ರಮುಖ ಟೊರ್ನಾಮೆಂಟ್ ಗಳಲ್ಲಿ ಅನೇಕ ಬಿಗ್ ಟೀಮ್ ಗಳ ಟ್ರೋಫಿ ಎತ್ತಿಹಿಡಿಯುವ ಕನಸುಗಳನ್ನು ಹಾಳು ಮಾಡಿದೆ ಎಂದರೆ ನಂಬಲೇಬೇಕು.

ಒಂದು ವೇಳೆ ಭಾರತ ತಂಡದಿಂದ ಕೊಂಚ ಎಡವಟ್ಟಾದರೂ ಬಾಂಗ್ಲಾ ದೇಶ ಟೀಮ್ ನಾಯಕ ರೋಹಿತ್ ಶರ್ಮಾಗೆ ಅಪ್ಸೆಟ್ ಮಾಡಿ ಟ್ರೋಫಿ ಗೆಲ್ಲುವ ಕನಸನ್ನು ಹಾಳು ಮಾಡಬಹುದು. 2007 ರ ಏಕದಿನ ವಿಶ್ವಕಪ್’ನಲ್ಲಿ ಟೀಮ್ ಇಂಡಿಯಾ ವನ್ನು ಸೋಲಿಸಿದ ನಂತರ ಬಾಂಗ್ಲಾದೇಶ ಭಾರತವನ್ನು ಟೊರ್ನಾಮೆಂಟ್ ನಿಂದ ಹೊರಹಾಕಿತ್ತು. ನಂತರ ಸಚಿನ್ ತೆಂಡೂಲ್ಕರ್ನಿಂದ ರಾಹುಲ್ ದ್ರಾವಿಡ್’ ಮತ್ತು ವೀರೇಂದ್ರ ಸೆಹ್ವಾಗ್ ನಂತಹ ಟಾಪ್ ಬ್ಯಾಟ್ಸಮನ್ ಗಳು ನಿರಾಶೆಗೊಂಡಿದ್ದರು.
2015ರ ವರ್ಲ್ಡ್ ಕಪ್ ’ನಿಂದ ಇಂಗ್ಲೆಂಡ್ ಟೀಮ್ ಅನ್ನು ನಾಕೌಟ್ ಮಾಡಿದ್ದು ಕೂಡ ಬಾಂಗ್ಲಾದೇಶ. 2016 ರ T-20 ವರ್ಲ್ಡ್ ಕಪ್ ’ನಲ್ಲಿಯೂ ಸಹ, ಬಾಂಗ್ಲಾದೇಶವು ಭಾರತ ತಂಡವನ್ನು ಬಹುತೇಕ ಟೊರ್ನಾಮೆಂಟ್ ಇಂದ ಹೊರಹಾಕಿತು. ಆದರೆ ಧೋನಿ ಅವರ ಹಿಸ್ಟಾರಿಕಲ್ ರನ್ ಔಟ್ ಭಾರತವನ್ನು ಉಳಿಸಿತು. ಆ ಮ್ಯಾಚ್ ಅನ್ನು ಭಾರತ 1 ರನ್’ನಿಂದ ಗೆದ್ದು ಟೂರ್ನಿಯಲ್ಲಿ ತನ್ನನ್ನು ಉಳಿಸಿಕೊಂಡಿತು. ಇದುವರೆಗೆ ತನ್ನ 15 ಸೀಸನ್ ಗಳಲ್ಲಿ ಇಂಡಿಯಾ ಮ್ಯಾಕ್ಸಿಮಮ್ 7 ಬಾರಿ ಏಷ್ಯಾ ಕಪ್ ಗೆದ್ದಿದೆ. ಇಂಡಿಯಾ ನಂತರ ಅತಿ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ರೆಕಾರ್ಡ್ ಶ್ರೀಲಂಕಾ ಹೆಸರಿನಲ್ಲಿ ಇದೆ . ಶ್ರೀಲಂಕಾ 6 ಬಾರಿ ಕಪ್ ಗೆದ್ದಿದೆ .
ಏಷ್ಯಾ ಕಪ್ 2023 ಪೂರ್ತಿ ಶೆಡ್ಯೂಲ್ ಹೀಗಿದೆ
30 ಆಗಸ್ಟ್ ರಿಂದ – 17 ಸೆಪ್ಟೆಂಬರ್ 2023 ರ ವರೆಗೆ ನಡೆಯಲಿದೆ
ಗ್ರೂಪ್ ಸ್ಟೇಜ್
ಪಾಕಿಸ್ತಾನ vs ನೇಪಾಳ, ಆಗಸ್ಟ್ 30: ಮುಲ್ತಾನ್
ಬಾಂಗ್ಲಾದೇಶ vs ಶ್ರೀಲಂಕಾ,31 ಆಗಸ್ಟ್: ಕ್ಯಾಂಡಿ
ಪಾಕಿಸ್ತಾನ vs ಭಾರತ, ಸೆಪ್ಟೆಂಬರ್ 2: ಕ್ಯಾಂಡಿ
ಭಾರತ vs ನೇಪಾಳ, ಸೆಪ್ಟೆಂಬರ್ 4: ಕ್ಯಾಂಡಿ
ಅಫ್ಘಾನಿಸ್ತಾನ vs ಶ್ರೀಲಂಕಾ, ಸೆಪ್ಟೆಂಬರ್ 5: ಲಾಹೋರ್
ಸೂಪರ್-ಫೋರ್ ಸ್ಟೇಜ್
A1 vs B2, 6 ಸೆಪ್ಟೆಂಬರ್: ಲಾಹೋರ್
B1 vs B2, ಸೆಪ್ಟೆಂಬರ್ 9: ಕೊಲಂಬೊ
A1 vs A2, 10 ಸೆಪ್ಟೆಂಬರ್: ಕೊಲಂಬೊ
A2 vs B1, 12 ಸೆಪ್ಟೆಂಬರ್: ಕೊಲಂಬೊ
A1 vs B1, 14 ಸೆಪ್ಟೆಂಬರ್: ಕೊಲಂಬೊ
A2 vs B2, 15 ಸೆಪ್ಟೆಂಬರ್: ಕೊಲಂಬೊ
ಫೈನಲ್, ಸೆಪ್ಟೆಂಬರ್ 17: ಕೊಲಂಬೊ