ಬಿಗ್ ಬಾಸ್ ಶೋ ನಮ್ಮ ದೇಶದಲ್ಲಿ ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ಹಾಲಿವುಡ್ ನ ಬಿಗ್ ಬ್ರದರ್ ಶೋನ ಕನ್ನಡದ ಅವತರಣಿಕೆಯೇ ಬಿಗ್ ಬಾಸ್. ಮೊದಲಿಗೆ ಈ ಶೋ ಶುರುವಾಗಿದ್ದು ಹಿಂದಿಯಲ್ಲಿ. ಬಳಿಕ ಕನ್ನಡದಲ್ಲಿ ಶುರುವಾಯಿತು. ನಂತರ ತೆಲುಗು, ತಮಿಳು, ಮಲಯಾಳಂ ಹಾಗೂ ಉತ್ತರ ಭಾರತದ ಇನ್ನಿತರ ಭಾಷೆಗಳಲ್ಲಿ ಕೂಡ ಬಿಗ್ ಬಾಸ್ ಶೋ ನಡೆಯುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಹಲವು ವರ್ಷಗಳಿಂದ ಈ ಶೋ ನಿರೂಪಣೆ ಮಾಡುತ್ತಿದ್ದಾರೆ. ಕನ್ನಡದಲ್ಲಿ ಬಿಗ್ ಬಾಸ್ ಶುರು ಆದಾಗಿನಿಂದಲೂ ನಿರೂಪಣೆ ಮಾಡುತ್ತಿರುವುದು ಕಿಚ್ಚ ಸುದೀಪ್ ಅವರು.
ಪ್ರಸ್ತುತ ಕನ್ನಡದಲ್ಲಿ ಬಿಗ್ ಬಾಸ್ 11ನೇ ಸೀಸನ್ ನಡೆಯುತ್ತಿದೆ. ಇದು ಕಿಚ್ಚ ಸುದೀಪ್ ಅವರ ಕೊನೆಯ ಸೀಸನ್ ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ಖುದ್ದು ಸುದೀಪ್ ಅವರು ಟ್ವೀಟ್ ಮಾಡಿ, ಸ್ಪಷ್ಟನೆ ಕೊಟ್ಟಿದ್ದರು. ಕಳೆದ ಸೀಸನ್ 10ನೇ ಸೀಸನ್ ಮುಗಿದಾಗಲೇ ಇದು ಸುದೀಪ್ ಅವರು ನಿರೂಪಣೆ ಮಾಡುವ ಕೊನೆಯ ಸೀಸನ್ ಇರಬಹುದೇನೋ ಎನ್ನುವ ಊಹಾಪೋಹಗಳು ಶುರುವಾಗಿದ್ದವು. 11ನೇ ಸೀಸನ್ ಮೊದಲ ಪ್ರೊಮೋ ಬಂದಾಗ ಸುದೀಪ್ ಅವರು ನಿರೂಪಣೆ ಮಾಡ್ತಾರೋ ಇಲ್ಲವೋ ಎನ್ನುವುದೇ ಎಲ್ಲರಲ್ಲಿ ಮೂಡಿದ್ದ ಪ್ರಶ್ನೆ ಆಗಿತ್ತು.

ಆದರೆ ಸುದೀಪ್ ಅವರು 11ನೇ ಸೀಸನ್ ನಿರೂಪಣೆ ಮಾಡುತ್ತಿದ್ದಾರೆ. ಆದರೆ ಶೋ ಶುರುವಾಗಿ ಮೊದಲ ವಾರದ ಟಿಆರ್ಪಿ ರೇಟಿಂಗ್ ಬಂದು, ಭರ್ಜರಿ ದಾಖಲೆ ಸೃಷ್ಟಿಸಿದ ಸಂತೋಷದ ದಿವಸ ಕಿಚ್ಚ ಸುದೀಪ್ ಅವರು ಈ ವಿಚಾರವನ್ನು ಟ್ವೀಟ್ ಮಾಡಿದರು. ಇದು ನನ್ನ ಕೊನೆಯ ಸೀಸನ್ ಆಗಿರುತ್ತದೆ, ನಾನು ಬೇರೆ ವಿಚಾರಗಳ ಬಗ್ಗೆ ಗಮನ ಹರಿಸಬೇಕಿದೆ, ಇಷ್ಟು ವರ್ಷಗಳು ನೀವೆಲ್ಲರೂ ಕೊಟ್ಟ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದ ಎಂದು ಬರೆದಿದ್ದರು. ಇದನ್ನು ಕಂಡು ಕನ್ನಡ ಕಿರುತೆರೆ ವೀಕ್ಷಕರು ಮತ್ತು ಸುದೀಪ್ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ಎಲ್ಲರಿಗೂ ಒಂದೇ ಆಸೆ, ಸುದೀಪ್ ಅವರೇ ಈ ಶೋ ನಿರೂಪಣೆ ಮಾಡಬೇಕು ಎನ್ನುವುದು..
ಹೌದು, ಸುದೀಪ್ ಅವರು ಇದ್ದರೇನೇ ಬಿಗ್ ಬಾಸ್ ಶೋಗೆ ಒಂದು ಘನತೆ, ಕಳೆ ಎಂದು ಹೇಳಿದರೆ ತಪ್ಪಲ್ಲ. ಸುದೀಪ್ ಅವರ ಜಾಗದಲ್ಲಿ ಮತ್ತೊಬ್ಬರು ನಿರೂಪಣೆ ಮಾಡುವುದನ್ನು ಊಹಿಸಿಕೊಳ್ಳುವುದಕ್ಕೆ ಕೂಡ ಸಾಧ್ಯವಿಲ್ಲ ಎನ್ನುತ್ತಾರೆ ಅಭಿಮಾನಿಗಳು. ಅಷ್ಟರ ಮಟ್ಟಿಗೆ ಸುದೀಪ್ ಅವರು ಜನರ ಜೊತೆಗೆ ಬಿಗ್ ಬಾಸ್ ಮೂಲಕ ಕನೆಕ್ಟ್ ಆಗಿದ್ದಾರೆ. ಒಂದು ವೇಳೆ ಸುದೀಪ್ ಅವರು ಹೇಳಿದ ಹಾಗೆಯೇ ಅವರು ನಿರೂಪಣೆ ಮಾಡುವ ಕೊನೆಯ ಸೀಸನ್ ಇದೇ ಆಗಿದ್ದರೆ, ಮುಂದಿನ ನಿರೂಪಕ ಯಾರು ಎನ್ನುವ ಪ್ರಶ್ನೆ ಇದೆ, ಇದಕ್ಕೆ ವೇದಿಕೆ ಮೇಲೆ ಸುದೀಪ್ ಅವರೇ ಉತ್ತರ ಕೊಟ್ಟಿದ್ದಾರೆ..
ಕಳೆದ ವಾರಾಂತ್ಯದ ಸಂಚಿಕೆ ನಡೆಸಿಕೊಡುವಾಗ, ನಾನು ಕೆಲವು ವರ್ಷಗಳಿಂದ ಇದು ನನ್ನ ಕೊನೆಯ ಸೀಸನ್ ಅಂತ ಹೇಳುತ್ತಾ ಬಂದಿದ್ದೀನಿ, ಆದರೆ ವಾಹಿನಿಯವರು ಇನ್ನೊಂದು ಸೀಸನ್, ಇನ್ನೊಂದು ಸೀಸನ್ ಎಂದು ಇಷ್ಟು ಸೀಸನ್ ಗಳವರೆಗೂ ಬಂದಿದ್ದಾರೆ. ನಾನು ಕೊನೆಯ ಸೀಸನ್ ಎಂದು ಹೇಳಿದೊಡನೆಯೇ ಬೇರೆಯವರ ಹೆಸರುಗಳು ಕೇಳಿ ಬರ್ತಿದೆ, ಬೇರೆಯವರನ್ನ ಊಹೆ ಮಾಡೋಕು ಆಗಲ್ಲ ಅನ್ನೋ ಮಾತು ಕೇಳಿಬರುತ್ತಿದೆ. ವಾಹಿನಿಯವರು ನನ್ನನ್ನು ಬಿಡ್ತಿಲ್ಲ. ಏನ್ ಮಾಡೋಣಾ ಎಂದಿದ್ದಾರೆ ಸುದೀಪ್. ಈ ಮೂಲಕ ತಾವು ನಿರ್ಧಾರ ಬದಲಾಯಿಸಿರಬಹುದು ಎಂದು ಸೂಚನೆ ನೀಡಿದ್ದಾರೆ. ಒಂದು ವೇಳೆ ಇದು ನಿಜವೇ ಆದರೆ, ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ.