ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಸಮಂತಾ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಮಂತಾ ಅವರು ಹಲವು ಶೋಗಳು ಇಂಟರ್ವ್ಯೂಗಳಲ್ಲಿ ಪಾಲ್ಗೊಳ್ಳುತ್ತಾರೆ, ಇವರ ಸಿಟಾಡೆಲ್ ವೆಬ್ ಸೀರೀಸ್ ಸೂಪರ್ ಹಿಟ್ ಆಗಿ, ಸಮಂತಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಇದೆಲ್ಲ ಒಂದು ಕಡೆಯಾದರೆ, ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಆಗುವ ಚರ್ಚೆಗಳು ಮತ್ತೊಂದು ಕಡೆ. ಸಮಂತಾ ಅವರು ವಿಚ್ಛೇದನ ಪಡೆದು 3 ವರ್ಷದ ಮೇಲಾಗಿದೆ. ಅವರ ಮಾಜಿ ಪತಿ ನಾಗಚೈತನ್ಯ ಈಗಾಗಲೇ ಮತ್ತೊಂದು ಮದುವೆ ಆಗಿದ್ದಾರೆ. ಆದರೆ ಇವರಿಬ್ಬರ ಬಗ್ಗೆ ಈಗಲು ಚರ್ಚೆಗಳು ನಡೆಯುತ್ತದೆ.

ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಸಹ ಪ್ರೀತಿಸಿ ಮದುವೆಯಾದರು. ಐದಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿ, ಹೆಚ್ಚು ಸಮಯ ಜೊತೆಯಾಗಿ ಇರಲಿಲ್ಲ. ಮದುವೆಯಾಗಿ 4 ವರ್ಷ ತುಂಬುವುದರ ಒಳಗೆ ಇಬ್ಬರು ವಿಚ್ಛೇದನ ಪಡೆದರು. ಇವರಿಬ್ಬರು ದೂರವಾಗಲು ಕಾರಣ ಏನು ಎಂದು ಅವರಿಗೆ ಮಾತ್ರ ಗೊತ್ತಿರುತ್ತದೆ. ಆದರೆ ನೆಟ್ಟಿಗರು ಮತ್ತು ಅವರ ಅಭಿಮಾನಿಗಳು ಇದಕ್ಕೆ ಕಾರಣ ಏನಿರಬಹುದು ಎಂದು ಚರ್ಚೆ ಮಾಡುತ್ತಲೇ ಇರುತ್ತಾರೆ. ನಾಗಚೈತನ್ಯ ಸಮಂತಾ ಅವರ ಜೊತೆಗೆ ಇದ್ದಾಗಲೇ ಶೋಭಿತಾ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದರು, ಅದೇ ಕಾರಣಕ್ಕೆ ಇಬ್ಬರು ದೂರ ಆಗಿರೋದು ಎನ್ನಲಾಗುತ್ತಿದೆ.
ಆದರೆ ಅಸಲಿ ವಿಷಯ ಏನು ಎನ್ನುವುದು ಅವರಿಗೆ ಮಾತ್ರ ಗೊತ್ತಿರುತ್ತದೆ. ಇಬ್ಬರು ಬೇರೆ ಆಗಿದ್ದು ಆಯಿತು, ಶೋಭಿತಾ ಅವರ ಜೊತೆಗೆ ನಾಗಚೈತನ್ಯ ಮದುವೆ ಆಗಿದ್ದು ಆಯಿತು. ಅವರಿಬ್ಬರು ಈಗ ಚೆನ್ನಾಗಿಯೇ ಇದ್ದಾರೆ. ಆದರೆ ಸಮಂತಾ ಅವರು ನೋವಿನಲ್ಲೇ ಇದ್ದಾರೆ. ಸಮಂತಾ ಅವರು ತಂದೆಯನ್ನು ಕಳೆದುಕೊಂಡರು, ಅವರ ಆರೋಗ್ಯದಲ್ಲಿ ಕೂಡ ಕೆಲ ಸಮಸ್ಯೆ ಇದೆ. ಏನೇ ಆದರು ಅವರವರ ಜೀವನವನ್ನು ಅವರವರೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಸಮಂತಾ ಅವರ ಹಳೆಯ ವಿಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ.
ವಿಚ್ಛೇದನ ಪಡೆಯುವುದಕ್ಕಿಂತ ಮೊದಲೇ ನಡೆದ ಸಂದರ್ಶನ ಇದು, ಇದರಲ್ಲಿ ನಾಗಚೈತನ್ಯ ಅವರು ಹೇಳಿದ್ದ ಒಂದು ಮಾತಿನ ಬಗ್ಗೆ ಸಮಂತಾ ತಿಳಿಸಿದ್ದು, “ನೀನು ಕೆಲಸ ಮಾಡುವಾಗ ಮಾತ್ರ ನಟಿ, ಸ್ಟಾರ್.. ಮನೆಯಲ್ಲಿ ಇದ್ದಾಗ ನೀನು ಒಬ್ಬ ಗೃಹಿಣಿ, ಮನೆಯಲ್ಲಿ ಏನಿದೆ ಏನಿಲ್ಲ ಎನ್ನುವುದನ್ನೆಲ್ಲಾ ನೀನು ನೋಡಿಕೊಳ್ಳಬೇಕು. ವೀಕೆಂಡ್ ನಲ್ಲಿ ಎಲ್ಲವನ್ನು ಪ್ಲಾನ್ ಮಾಡಿಕೊಳ್ಳಬೇಕು..” ಎಂದು ನಾಗಚೈತನ್ಯ ಹೇಳಿದ್ದರಂತೆ. ಈ ಮಾತುಗಳನ್ನು ಸಮಂತಾ ಹೇಳಿರುವುದು ಈಗ ವೈರಲ್ ಆಗುತ್ತಿದೆ. ಇದರಲ್ಲಿ ತಪ್ಪು ಇದೆ ಎಂದು ಅನ್ನಿಸುತ್ತಿಲ್ಲ. ಆದರೆ ಇವರಿಬ್ಬರು ದೂರ ಆಗಿರುವುದು ಇಂಥ ಕಾರಣ ಗಳಿಗೆ ಇರಬಹುದಾ ಎನ್ನುವ ಚರ್ಚೆ ಶುರುವಾಗಿದೆ.

ಸಮಂತಾ ಅವರು ನಾಗಚೈತನ್ಯ ಅವರು ತಮ್ಮ ತಮ್ಮ ಲೈಫ್ ನೋಡಿಕೊಂಡು ಖುಷಿಯಾಗಿ ಇದ್ದಾರೆ. ಆದರೆ ಇಲ್ಲಿ ನೆಟ್ಟಿಗರು ಹಾಗೂ ಅಭಿಮಾನಿಗಳು ತಮ್ಮ ಸಮಯವನ್ನೆಲ್ಲ ಇಂಥ ಸುದ್ದಿಗಳಿಗೆ ನೀಡಿ, ಸಮಯವನ್ನು ಹಾಳು ಮಾಡುತ್ತಿದ್ದಾರೆ. ಇವರ ಬಗ್ಗೆ ತಲೆ ಕೆಡಿಸಿಕೊಂಡು ಇವರ ಜೀವನವನ್ನು ಅನಲೈಸ್ ಮಾಡುವುದಕ್ಕಿಂತ ನಮ್ಮ ಜೀವನದ ಬಗ್ಗೆ ನಾವು ಗಮನ ಕೊಟ್ಟರೆ, ಬಹುಶಃ ನಮ್ಮ ಜೀವನವೇ ಬದಲಾಗಬಹುದು. ನಾವು ಇನ್ನು ಒಳ್ಳೆಯ ಹಂತಕ್ಕೆ ತಲುಪಬಹುದು. ಹಾಗಾಗಿ ಮೊದಲಿಗೆ ನಾವು ನಮ್ಮ ಜೀವನದ ಬಗ್ಗೆ ಗಮನ ಕೊಡಬೇಕು.