ಸ್ಯಾಂಡಲ್ ವುಡ್ ನ ಅನೇಕ ನಾಯಕರು ಮಲ್ಟಿ ಟ್ಯಾಲೆಂಟೆಡ್ ಪರ್ಸನಾಲಿಟಿ ಎಂದು ಹೇಳಿದರೆ ತಪ್ಪಲ್ಲ. ನಟನೆಯ ಜೊತೆಗೆ ನಿರ್ದೇಶನ, ನಿರ್ಮಾಣ ಇದೆಲ್ಲದರಲ್ಲೂ ತೊಡಗಿಸಿಕೊಂಡಿರುವ ನಟರು ನಮ್ಮಲ್ಲಿದ್ದಾರೆ. ಶಿವಣ್ಣ ಇತ್ತೀಚೆಗೆ ತಮ್ಮದೇ ಪ್ರೊಡಕ್ಷನ್ ಶುರು ಮಾಡಿದ್ದಾರೆ, ಸುದೀಪ್ ಅವರ ಪ್ರೊಡಕ್ಷನ್ ಕಂಪನಿ ಇದೆ, ದರ್ಶನ್ ಅವರ ಪ್ರೊಡಕ್ಷನ್ ಕಂಪನಿ ಇದೆ, ಡಾಲಿ ಧನಂಜಯ್ ನಿರ್ಮಾಪಕರಾಗಿದ್ದಾರೆ. ಹೀಗೆ ಸಾಕಷ್ಟು ಹೀರೋಗಳು ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದಾರೆ. ನಮ್ಮ ಮೆಚ್ಚಿನ ಹೀರೋಗಳ ಪೈಕಿ ಕೆಲವರು ಕಿರುತೆರೆಯಲ್ಲಿ ಧಾರಾವಾಹಿಯನ್ನು ಸಹ ನಿರ್ಮಾಣ ಮಾಡಿ ಗೆದ್ದಿದ್ದಾರೆ, ಅವರ ಬಗ್ಗೆ ಇಂದು ತಿಳಿಯೋಣ..

ಮೊದಲಿಗೆ ಶಿವಣ್ಣ ಅವರು, ಶಿವಣ್ಣ ಅವರು ಶ್ರೀ ಮುತ್ತು ಕ್ರಿಯೇಶನ್ಸ್ ಶುರು ಮಾಡಿದ್ದಾರೆ, ಇದನ್ನು ಶಿವಣ್ಣ ಅವರ ಮಗಳು ನಿವೇದಿತಾ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯ ಮೂಲಕ ಈಗಾಗಲೇ ಒಂದೆರಡು ವೆಬ್ ಸೀರೀಸ್ ನಿರ್ಮಾಣ ಆಗಿದೆ, ಫೈರ್ ಫ್ಲೈ ಸಿನಿಮಾ ಕೂಡ ನಿರ್ಮಾಣ ಆಗಿದೆ..ಇದಷ್ಟೇ ಅಲ್ಲದೇ ಶಿವಣ್ಣ ಅವರು ಒಂದು ಧಾರಾವಾಹಿಯನ್ನು ಸಹ ನಿರ್ಮಾಣ ಮಾಡಿದ್ದಾರು. ಉದಯ ಟಿವಿ ಚಾನೆಲ್ ಗೆ ಮಾನಸ ಸರೋವರ ಎನ್ನುವ ಧಾರಾವಾಹಿಯನ್ನು ತಮ್ಮ ಪ್ರೊಡಕ್ಷನ್ ಕಂಪನಿಯ ಮೂಲಕ ನಿರ್ಮಾಣ ಮಾಡಿದ್ದರು ಶಿವಣ್ಣ. ಇದು ಶಿವಣ್ಣ ನಿರ್ಮಾಣ ಮಾಡಿದ ಒನ್ ಅಂಡ್ ಓನ್ಲಿ ಧಾರಾವಾಹಿ ಆಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇನ್ನು ಕಿಚ್ಚ ಸುದೀಪ್ ಅವರ ಪ್ರೊಡಕ್ಷನ್ ಕಿಚ್ಚ ಕ್ರಿಯೇಷನ್ಸ್, ಈ ಕಂಪನಿಯಲ್ಲಿ ಈಗಾಗಲೇ ಸುದೀಪ್ ಅವರು ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಹಾಗೆಯೇ ಒಂದು ಧಾರಾವಾಹಿಯನ್ನು ಸಹ ಸುದೀಪ್ ಅವರು ನಿರ್ಮಾಣ ಮಾಡಿದ್ದರು, ಅದು ಜೀಕನ್ನಡ ವಾಹಿನಿಗೆ ನಿರ್ಮಾಣ ಮಾಡಿದ್ದ ವಾರಸ್ದಾರ ಧಾರಾವಾಹಿ ಆಗಿದೆ. ಇದು ಕಿಚ್ಚ ಸುದೀಪ್ ಅವರು ನಿರ್ಮಾಣ ಮಾಡಿದ ಧಾರಾವಾಹಿ ಆಗಿದೆ. ಇನ್ನು ನಟ ಪ್ರಮೋದ್ ಶೆಟ್ಟಿ ಹಾಗೂ ಅವರ ಪತ್ನಿ ಸಹ ಕಿರುತೆರೆಯಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈಗಲೂ ಸಹ ಇವರು ನಿರ್ಮಾಣ ಮಾಡುತ್ತಿರುವ ಧಾರಾವಾಹಿ ಆನ್ ಗೋಯಿಂಗ್ ಇದೆ..

ಜೀಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಅಣ್ಣಯ್ಯ ಧಾರಾವಾಹಿಯನ್ನು ನಿರ್ಮಾಣ ಮಾಡಿರುವುದು ಪ್ರಮೋದ್ ಶೆಟ್ಟಿ ಅವರ ಸಂಸ್ಥೆ. ಇನ್ನು ನಟ ದಿಲೀಪ್ ರಾಜ್ ಅವರು ಸಹ ಕಿರುತೆರೆಯಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ದಿಲೀಪ್ ರಾಜ್ ಅವರು ಜೀಕನ್ನಡ ವಾಹಿನಿಯಲ್ಲಿ ಈಗಾಗಲೇ ಕೆಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಮೊದಲು ವಿದ್ಯಾ ವಿನಾಯಕ, ಪಾರು ಧಾರಾವಾಹಿಗಳನ್ನು ದಿಲೀಪ್ ರಾಜ್ ಅವರು ನಿರ್ಮಾಣ ಮಾಡಿದ್ದಾರೆ. ನಿರ್ಮಾಣ ಮಾಡುವುದರ ಜೊತೆಗೆ ತಾವೇ ನಟಿಸಿದ್ದು ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ. ಈ ಎಲ್ಲಾ ನಟರು ನಿರ್ಮಾಣ ಮಾಡಿರುವ ಧಾರಾವಾಹಿಗಳು ಒಳ್ಳೆಯ ಹೆಸರನ್ನು ಗಳಿಸಿದೆ.
ಇನ್ನು ಸ್ಯಾಂಡಲ್ ವುಡ್ ನ ಹಿರಿಯನಟ ರಮೇಶ್ ಅರವಿಂದ್ ಅವರು ಸಹ ಕಿರುತೆರೆಯಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಹಲವಾರು ಶೋಗಳನ್ನು ನಿರೂಪಣೆ ಮಾಡಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ. ಆದರೆ ಹೆಚ್ಚಿನ ಜನರಿಗೆ ರಮೇಶ್ ಅರವಿಂದ್ ಅವರು ನಿರ್ಮಾಣ ಕೂಡ ಮಾಡಿದ್ದಾರೆ ಎನ್ನುವ ವಿಷಯ ಗೊತ್ತಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನೀನಾದೆ ನಾ ಮತ್ತು ಆಸೆ ಧಾರಾವಾಹಿಯನ್ನು ರಮೇಶ್ ಅರವಿಂದ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ರಮೇಶ್ ಅರವಿಂದ್ ಅವರ ನಿರ್ಮಾಣದ ಧಾರಾವಾಹಿಗೆ ಜನರಿಂದ ಮೆಚ್ಚುಗೆ ಸಿಗುತ್ತಿದೆ.