ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ನಟ ವಿಜಯ ರಾಘವೇಂದ್ರ ಅವರನ್ನು ಪತ್ನಿ ವಿಯೋಗ ಕಾಡುತ್ತಿದೆ. ಸ್ಪಂದನಾ ಅವರು ಇದೀಗ ಹೃದಯಾಘಾತದಿಂದ ಮೃತಟ್ಟಿದ್ದು ಇಡೀ ಚಿತ್ರರಂಗಕ್ಕೆ ಶಾಕ್ ನೀಡಿದೆ. ಇದೀಗ ಈ ಬಗ್ಗೆ ನಟ ವಿಜಯ ರಾಘವೇಂದ್ರ ಅವರ ಆತ್ಮೀಯ ಸ್ನೇಹಿ ನಟ ಮಾಸ್ಟರ್ ಆನಂದ್ ಮಾತನಾಡಿದ್ದು ಅವರು ಈ ಬಗ್ಗೆ ಹೇಳಿರುವ ಕೆಲವು ವಿಚಾರಗಳು ಇಲ್ಲಿವೆ.

ಸ್ಪಂದನಾ ಅವರ ಹಠಾತ್ ಸಾವಿನ ಬಗ್ಗೆ ಮಾತನಾಡಿರುವ ಮಾಸ್ಟರ್ ಆನಂದ್, ‘ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಾವಿನ ನಂತರ ಅವರ ಕುಟುಂಬದಲ್ಲಿ ಖುಷಿಯೇ ಇಲ್ಲವಾಗಿದೆ. ಯಾವುದೇ ಕಾರ್ಯಕ್ರಮ, ಪಾರ್ಟಿಗಳನ್ನೂ ಕೂಡ ಅವರು ಮಾಡುತ್ತಿಲ್ಲ. ಇದೀಗ ಸ್ಪಂದನಾ ಅವರು ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದು ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿಯಾಗಿ ಮಾತನಾಡಿದ್ದೆ’ ಎಂದಿದ್ದಾರೆ.

ಇನ್ನು ಮಾತು ಮುಂದುವರೆಸಿದ ಆನಂದ್, ‘ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಅವರದ್ದು ಆದರ್ಶಮಯ ಜೋಡಿ. ವಿಜಯ್ ಸ್ಪಂದನಾ ಅವರನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಸಿನಿಮಾ ಶೂಟಿಂಗ್ ವೇಳೆ ಪತ್ನೆಗೆ ಕರೆ ಮಾಡುವುದು ಜೊತೆಗೆ ಆನ್ಲೈನ್ ಮೂಲಕ ಐಸ್ ಕ್ರೀಮ್ ಆರ್ಡರ್ ಮಾಡುವ ಮೂಲಕ ಸ್ಪಂದನಾ ಅವರನ್ನು ಖುಷಿ ಪಡಿಸುತ್ತಿದ್ದರು. ಆದರೆ ಈ ಹಠಾತ್ ಸಾವನ್ನು ವಿಜಯ್ ಹೇಗೆ ಸಹಿಸಿಕೊಳ್ಳುತ್ತಾನೋ ಗೊತ್ತಿಲ್ಲ.
ದೇವರು ವಿಜಯ ರಾಘವೇಂದ್ರ ಅವರಂತಹ ಒಳ್ಳೆಯ ಮನುಷ್ಯನನ್ನು ಇಷ್ಟು ಕಠೋರವಾಗಿ ಪರೀಕ್ಷೆ ಮಾಡಬಾರದಿತ್ತು’ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. 2007ರಲ್ಲಿ ವಿಜಯ ರಾಘವೇಂದ್ರ ಹಾಗೂ ದಕ್ಷಿಣ ಕನ್ನಡ ಮೂಲದ ಸ್ಪಂದನಾ ಪ್ರೀತಿಸಿ ಮದುವೆಯಾಗಿದ್ದರು. ಸಿನಿಮಾರಂಗದ ಆದರ್ಶ ಜೋಡಿಯಾಗಿದ್ದ ಇವರಿಬ್ಬನ್ನು ಎಲ್ಲರೂ ಇಷ್ಟ ಪಡುತ್ತಿದ್ದರು. ಆದರೆ ಇದೀಗ ಬ್ಯಾಂಕಾಕ್ ಪ್ರವಾಸದ ವೇಳೆ ಸ್ಪಂದನಾ ಮೃತಪಟ್ಟಿದ್ದಾರೆ. ಇವರಿಗೆ ಶೌರ್ಯ ಎಂಬ ಮಗ ಇದ್ದಾನೆ.