116 ರ್ಷಗಳಷ್ಟು ಇತಿಹಾಸವಿರುವ ಮತ್ತು ಜಗತ್ತಿನ ಐಶಾರಾಮಿ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅತ್ಯಾಧುನಿಕ ತಂತ್ರಜ್ಞಾನಗಳಿರುವ ಕಾರು ರೋಲ್ಸ್ ರಾಯ್ಸ್. ಶತಮಾನಗಳಿಂದಲೂ ತನ್ನ ಅತ್ಯದ್ಭುತ ಕಾರ್ಯಕ್ಷಮತೆ, ಬೋಲ್ಡ್ ಲುಕ್, ವೇಗ ಹಾಗೂ ಐಷಾರಾಮಿತನದಿಂದ ಗುರುತಿಸಿಕೊಂಡಿರುವ ಕಾರು ಎಷ್ಟು ಮೈಲೇಜ್ ನೀಡುತ್ತದೆ?, ಇದರಲ್ಲಿರುವ ಸೂಪರ್ ಪವರ್ ಏನು?, ಈ ಕಾರಿನ ಈಗಿನ ಬೆಲೆ ಎಷ್ಟು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಶತಮಾನದಷ್ಟು ಹಳೆಯದಾದರೂ ಇಂದಿಗೂ ಕೂಡ ವಾಹನೋದ್ಯಮದ ಅಗ್ರಜ ಎನಿಸಿಕೊಂಡಿರು ರೋಲ್ಸ್ ರಾಯ್ಸ್ ಕಾರನ್ನು ಬ್ರಿಟಿಷ್ ಕಾರು ಎಂದೂ ಕೂಡ ಕರೆಯಲಾಗುತ್ತದೆ. 2021 ರಿಂದ ರೂಲ್ಸ್ ರಾಯ್ಸ್ ಸೆಡಾನ್ ಭಾರತದಲ್ಲೂ ಲಭ್ಯವಿದೆ. ಈ ಕಾರಿನ ಆರಂಭಿಕ ಬೆಲೆ 6.98ಕೋಟಿ ರೂ. ಈ ಕಾರನ್ನು ಸೂಪರ್ ಫ್ರೇಮ್ ಆರ್ಕಿಟೆಕ್ಚರ್ ನಲ್ಲಿ ನಿರ್ಮಿಸಲಾಗಿದೆ. ಇದರ ಆಲ್ ವೀಲ್ ಡ್ರೈವ್ ಹಾಗೂ ಆಲ್ವಿಲ್ ಸ್ಟೇರಿಂಗ್ ಉತ್ತಮವಾಗಿದ್ದು, ಸುಧಾರಿತ ತಂತ್ರಜ್ಞಾನಗಳು ಈ ಕಾರಿನಲ್ಲಿದೆ.

ವಾಹನೋದ್ಯಮದಲ್ಲಿ ಮೊಟ್ಟಮೊದಲು ಪ್ಯಾನರ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಕಾರಿನಲ್ಲಿ ಅಳವಡಿಸಿದ ಕಾರು ರೋಲ್ಸ್ ರಾಯ್ಸ್. ಜೊತೆಗೆ ಈ ಕಾರಿನ ಪ್ರತಿಯೊಂದು ವಿನ್ಯಾಸವನ್ನೂ ಕೂಡ ಅತ್ಯಂತ ಹೆಚ್ಚು ಆಕರ್ಷಣಿಯವಾಗಿದೆ. ಈ ಅತ್ಯಾಧುನಿಕ ಕಾರು 30ಎಂಎಂ ಉದ್ದ ಹಾಗೂ 21ಎಂಎಂ ಅಗಲವಾಗಿದೆ. ಇದಿಷ್ಟೇ ಅಲ್ಲದೇ ಈ ಕಾರಿನಲ್ಲಿ ಸ್ವಯಂತ ಚಾಲಿತ ಬಾಗಿಲು ಅಂದರೆ ತಾವಾಗಿಯೇ ಮುಚ್ಚುವ ಮತ್ತು ತೆರೆಯುವ ಬಾಗಿಲುಗಳಿದೆ. ಈ ಕಾರಿನಲ್ಲಿ ಪವರ್ ಫುಲ್ ಹೆಡ್ ಲ್ಯಾಂಪ್ ಇದ್ದು, ಇದರ ಸಹಾಯದಿಂದ 600 ಮೀಟರ್ ದೂರದ ವರೆಗೂ ಯಾವುದೇ ಅಡಚಣೆ ಇಲ್ಲದೆ ನೋಡಬಹುದು.
ಇದರೊಂದಿಗೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಅಳವಡಿಸಲಾಗಿರುವ ಎಸಿ ಎನ್ವಿರಾನ್ಮೆಂಟ್ ಪ್ಯೂರಿಫಿಕೇಶನ್ ಕೆಲಸವನ್ನು ಮಾಡುತ್ತದೆ (ಶುದ್ಧಿಕರಿಸುತ್ತದೆ). Bose ನ 1300 ವ್ಯಾಟ್ 18 ಸ್ಪೀಕರ್ ಗಳನ್ನು ಕಾರಿನಲ್ಲಿ ಅಳವಡಿಸಲಾಗಿದ್ದು ಹಿಂದಿನ ಸೀಟಿನಲ್ಲಿ ಎಂಟರ್ಟೈನ್ಮೆಂಟ್ ಸ್ಕ್ರೀನ್ ಜೋಡಿಸಲಾಗಿದೆ. ಅಡಕ್ಟಿವ್ ಕ್ರೂಸ್ ಕಂಟ್ರೋಲ್, ಹೆಡ್ ಅಪ್ ಡಿಸ್ಪ್ಲೇ 360 ಡಿಗ್ರಿ ಕ್ಯಾಮೆರಾ ಸೆನ್ಸರ್ ಹಾಗೂ ವಾರ್ನಿಂಗ್ ಸಿಸ್ಟಮ್ ಗಳನ್ನು ಕೂಡ ಅಳವಡಿಸಲಾಗಿದ್ದು, ಅತ್ಯುತ್ತಮ ಲುಕ್ ಹೆಚ್ಚು ಸುಧಾರಿತ ತಂತ್ರಜ್ಞಾನ ಲಭ್ಯವಿದೆ.
ಹಾಗೆಯೇ ರೋಲ್ಸ್ ರಾಯ್ಸ್ ಕಾರಿನಲ್ಲಿ 6.75 ಲೀಟರ್ ಟ್ವಿನ್ ಟರ್ಬೋ V12 ಇಂಜಿನ್ ಜೋಡಿಸಲಾಗಿದ್ದು, ಇದು 571 ಪಿಎಸ್ ಪವರ್ ಹಾಗೂ 850ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಇದರ ಗರಿಷ್ಠ ವೇಗ ಗಂಟೆಗೆ 250 ಕಿಲೋ ಮೀಟರ್. ಅಲ್ಲದೆ ಕೇವಲ 4.8 ಸೆಕೆಂಡ್ಗಳಲ್ಲಿ ಜೀರೋದಿಂದ ನೂರು ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಅಂದರೆ 6.33 kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲ್ಲಾ ಕಾರಣಗಳಿಂದ ರೋಲ್ಸ್ ರಾಯ್ಸ್ ಅತ್ಯಂತ ಐಷಾರಾಮಿ ಹಾಗೂ ಅತ್ಯಾಧುನಿಕ ಕಾರಾಗಿ ಉಳಿದುಕೊಂಡಿದೆ.