ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಲ್ಲಿ ಸುಂದರ್ ರಾಜ್ ಅವರು ಕೂಡ ಒಬ್ಬರು. ಇವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. 80ರ ದಶಕದಿಂದ ಇಲ್ಲಿಯವರೆಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಕೆಲವು ಸಿನಿಮಾಗಳಲ್ಲಿ ಎರಡನೇ ನಾಯಕನಾಗಿ, ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ, ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಪ್ರತಿಭಾನ್ವಿತ ಕಲಾವಿದರಲ್ಲಿ ಇವರು ಕೂಡ ಒಬ್ಬರು. ಸುಂದರ್ ರಾಜ್ ಅವರು ಹಲವು ಒಳ್ಳೆಯ ಪಾತ್ರಗಳಲ್ಲಿ, ಹಾಗೆಯೇ ನೆಗಟಿವ್ ಆದ ಪಾತ್ರಗಳಲ್ಲಿ ಸಹ ನಟಿಸಿದ್ದಾರೆ. ಸುಂದರ್ ರಾಜ್ ಅವರು ಒಂದು ರೀತಿ ಎಲ್ಲಾ ಥರದ ಪಾತ್ರಗಳಲ್ಲಿ ಸಹ ನಟಿಸಿ, ಸೈ ಎನ್ನಿಸಿಕೊಂಡಿರುವ ಕಲಾವಿದ. ಇವರ ಮದುವೆ ವಿಚಾರ ಬಹಳ ಸ್ವಾರಸ್ಯಕರವಾಗಿದೆ..

ಸುಂದರ್ ರಾಜ್ ಅವರು ಇದುವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ, ಬಹುತೇಕ ಕನ್ನಡದ ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಸುಂದರ್ ರಾಜ್ ಅವರು ನಟಿಸಿದ್ದಾರೆ. ಇವರು ಈಗ ಕನ್ನಡದ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದು, ಅನೇಕ ವಿಚಾರಗಳು ಸಮಸ್ಯೆಗಳು ಎಲ್ಲವೂ ಸಹ ಇವರಿಂದ ಬಗೆ ಹರಿಸಲ್ಪಟ್ಟಿದೆ ಎಂದು ಹೇಳಿದರು ತಪ್ಪಲ್ಲ, ಚಿತ್ರರಂಗದ ಹಲವು ಕಷ್ಟದ ಪರಿಸ್ಥಿತಿಗಳಲ್ಲಿ, ಸಮಸ್ಯೆಗಳು ಎದುರಾದಾಗ, ಇವರು ಬಗೆಹರಿಸಿದ್ದಾರೆ. ಹೀಗೆ ಕನ್ನಡದ ಹಿರಿಯ ನಟನಾಗಿ ಇವರ ಇನ್ಪುಟ್ ತುಂಬಾ ಇದೆ. ಪ್ರಸ್ತುತ ಇವರು ನಟಿಸುವುದು ಕಡಿಮೆ ಆಗಿದ್ದರೂ ಸಹ ಬಹಳ ಆಕ್ಟಿವ್ ಆಗಿದ್ದಾರೆ. ಮಗಳನ್ನು ಮತ್ತು ಮೊಮ್ಮಗನನ್ನು ನೋಡಿಕೊಳ್ಳುವುದರಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಹಾಗೆಯೇ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಸಹ ನಟಿಸುತ್ತಾರೆ.

ಉದಯ ಟಿವಿಯ ಸೂರ್ಯವಂಶ ಧಾರಾವಾಹಿಯಲ್ಲಿ ಸಹ ನಟಿಸಿದರು. ಇನ್ನು ಸುಂದರ್ ರಾಜ್ ಅವರು ಮದುವೆ ಆಗಿರುವುದು ಕನ್ನಡದ ಮತ್ತೊಬ್ಬ ಪ್ರತಿಭಾನ್ವಿತ ಕಲಾವಿದೆ ಪ್ರಮೀಳಾ ಜೋಷಾಯ ಅವರನ್ನು, ಇವರಿಬ್ಬರ ಮುದ್ದಿನ ಮಗಳು ಮೇಘನಾ ರಾಜ್, ಮೊಮ್ಮಗ ರಾಯನ್ ರಾಜ್ ಸರ್ಜಾ. ಇತ್ತೀಚಿನ ಸಂದರ್ಶನ ಒಂದರಲ್ಲಿ ಸುಂದರ್ ರಾಜ್ ಅವರು ತಮ್ಮ ಮದುವೆಯ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ಇವರ ಮದುವೆಯ ವಿಚಾರ ಬಹಳ ಸ್ವಾರಸ್ಯಕರವಾಗಿದೆ, ಕ್ರಿಶ್ಚಿಯನ್ ಆಗಿದ್ದ ಪ್ರಮೀಳಾ ಜೋಷಾಯ್ ಅವರನ್ನು ಅಯ್ಯಂಗಾರ್ ಮನೆತನದ ಸುಂದರ್ ರಾಜ್ ಅವರು ಮದುವೆಯಾದ ಆ ಕಥೆಯ ಬಗ್ಗೆ ಇಂದು ಪೂರ್ತಿ ಮಾಹಿತಿ ತಿಳಿಸುತ್ತೇವೆ..

ಸುಂದರ್ ರಾಜ್ ಅವರು ಮತ್ತು ಪ್ರಮೀಳಾ ಜೋಷಾಯ್ ಅವರು 1983 ರಿಂದ 1993 ರವರೆಗು ಕೂಡ ನಾಟಕಗಳಲ್ಲಿ ಆಕ್ಟ್ ಮಾಡುತ್ತಿದ್ದರಂತೆ. ಇಬ್ಬರು ಜೊತೆಯಾಗಿ 1 ಲಕ್ಷಕ್ಕಿಂತ ಹೆಚ್ಚು ಕಿಮೀ ವರೆಗು ಟ್ರಾವೆಲ್ ಮಾಡಿದ್ದಾರಂತೆ. ಉತ್ತರ ಕರ್ನಾಟಕದಲ್ಲಿ ರಾತ್ರಿ 10:30 ರಿಂದ ಬೆಳಗ್ಗಿನ ಜಾವ 4:30ರ ವರೆಗು ನಾಟಕಗಳಲ್ಲಿ ಅಭಿನಯಿಸುತ್ತಿದ್ದರಂತೆ. ಇವರಿಬ್ಬರದ್ದು ಲವ್ ಮ್ಯಾರೇಜ್ ಕೂಡ ಅಲ್ಲ, ಅರೇಂಜ್ಡ್ ಮ್ಯಾರೇಜ್ ಕೂಡ ಅಲ್ಲ ಎಂದು ಹೇಳಿದ್ದಾರೆ. ಇವರಿಬ್ಬರ ಸ್ನೇಹಿತರು ನೀವಿಬ್ಬರೂ ಮದುವೆ ಆದ್ರೆ ಚೆನ್ನಾಗಿರುತ್ತೆ ಅಂತ ಹೇಳಿದರಂತೆ, ಅವರ ಸ್ನೇಹಿತರೇ ಇಬ್ಬರ ತಂದೆ ತಾಯಿ ಜೊತೆಗೆ ಮಾತನಾಡಿದರಂತೆ. ಸುಂದರ್ ರಾಜ್ ಅವರ ಮನೆಯಲ್ಲಿ ಸುಲಭವಾಗಿ ಒಪ್ಪಿಗೆ ಸಿಕ್ಕಿತಂತೆ. ಆದರೆ ಪ್ರಮೀಳಾ ಜೋಶಾಯ್ ಅವರ ಮನೆಯಲ್ಲಿ ಸುಲಭವಾಗಿ ಒಪ್ಪಲಿಲ್ಲವಂತೆ.

ಪ್ರಮೀಳಾ ಜೋಷಾಯ್ ಅವರ ಮನೆಯಲ್ಲಿ ಸುಲಭಕ್ಕೆ ಒಪ್ಪದೇ, ಕನ್ವರ್ಟ್ ಆಗಬೇಕು ಎಂದು ಹೇಳಿದರಂತೆ, ಆದರೆ ಸುಂದರ್ ರಾಜ್ ಅವರು ಒಪ್ಪಲಿಲ್ಲ, ಕನ್ವರ್ಟ್ ಆಗುವುದಿಲ್ಲ ಎಂದು ಹೇಳಿದರಂತೆ. ನಂತರ ಸ್ನೇಹಿತರೇ ಸೇರಿ ಮದುವೆ ಮಾಡಿಸಿದರಂತೆ, ನಂತರ ಅವರ ಮಗಳು ಮೇಘನಾ ರಾಜ್ ಹುಟ್ಟಿದರು. ಮಗಳು ಹುಟ್ಟಿದ ನಂತರ ಕೂಡ ಇವರಿಬ್ಬರು ನಾಟಕಗಳಲ್ಲಿ ಅಭಿನಯಿಸಿದ್ದರಂತೆ. ಹಾಗೆಯೇ ಇವರ ಮನೆಯಲ್ಲಿ, ದೇವರ ಮನೆಯಲ್ಲಿ ನಾರಾಯಣ ಸ್ವಾಮಿಯ ಫೋಟೋ ಜೊತೆಗೆ ಏಸು ಕ್ರಿಸ್ತನ ಫೋಟೋ ಸಹ ಇದೆಯಂತೆ. ಎಲ್ಲಾ ದೇವರಿಗೂ ಪೂಜಿಸುತ್ತಾರಂತೆ. ಕುಟುಂಬದಲ್ಲಿ ಅದೇ ಕಾರಣಕ್ಕೆ ಎಲ್ಲರೂ ಬಹಳ ಸಂತೋಷವಾಗಿ ಇದ್ದಾರೆ. ಇವರ ಕುಟುಂಬ ಒಂದು ರೀತಿ ಎಲ್ಲರಿಗೂ ಮಾದರಿ ಎಂದು ಹೇಳಿದರೂ ತಪ್ಪಲ್ಲ..
ನಮಗೆಲ್ಲ ಗೊತ್ತಿರುವ ಹಾಗೆ, ಇವರ ಮಗಳು ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರ ಜೊತೆಗೆ ಮದುವೆಯಾದರು, ದುರಾದೃಷ್ಟ ಈ ಜೋಡಿ ಹೆಚ್ಚು ವರ್ಷಗಳ ಕಾಲ ಜೊತೆಯಾಗಿ ಇರುವುದಕ್ಕೆ ಸಾಧ್ಯ ಆಗಲಿಲ್ಲ. ಬಹಳ ಬೇಗ ಚಿರಂಜೀವಿ ಸರ್ಜಾ ಅವರು ವಿಧಿವಶರಾದರು, ನಂತರ ಮೇಘನಾ ರಾಜ್ ಅವರು ತಂದೆ ತಾಯಿಯ ಜೊತೆಯಲ್ಲೇ ಇದ್ದಾರೆ, ಮೇಘನಾ ರಾಜ್ ಅವರ ಮಗ ರಾಯನ್ ರಾಜ್ ಸರ್ಜಾ ಅವರನ್ನು ನೋಡಿಕೊಳ್ಳುವುದಕ್ಕೆ, ಮಗಳನ್ನು ಸಪೋರ್ಟ್ ಮಾಡುವುದಕ್ಕೆ ತಂದೆ ತಾಯಿಯಾಗಿ ಇವರು ಜೊತೆಯಲ್ಲೇ ಇದ್ದಾರೆ. ಇವರಿಬ್ಬರು ಈಗಿನ ಪೀಳಿಗೆಯವರಿಗೆ ಸ್ಪೂರ್ತಿ ಆಗುವ ಜೋಡಿ, ಅಂತರ್ ಧರ್ಮೀಯ ವಿವಾಹವಾಗಿ ಸಂತೋಷವಾಗಿ ಜೀವನ ನಡೆಸುತ್ತಿರುವ ಜೋಡಿ..