ಇಂದಿನಿಂದ ಹಾಸನಾಂಬೆ ದೇವಿಯ ತಾಯಿಯ ಗರ್ಭಗುಡಿ ಇವತ್ತು ತೆರೆಯಲಿದೆ. ತಾಯಿಯ ದರ್ಶನಕ್ಕೆ ಅಪಾರ ಪ್ರಮಾಣದ ಭಕ್ತರು ಭೇಟಿ ನೀಡಲು ಸಜ್ಜಾಗಿದ್ದಾರೆ.. ದೇವಿಯ ದರ್ಶನ ಮಾಡಲು ರಾಜ್ಯದ ಜನರು ಕಾತರರಾಗಿದ್ದಾರೆ
ಆದ್ರೆ, ಇವತ್ತು ಗರ್ಭಗುಡಿ ತೆರೆದರೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿಲ್ಲ.. ಸಾರ್ವಜನಿಕ ದರ್ಶನ ನಾಳೆಯಿಂದ ಆರಂಭವಾಗಲಿದೆ..

ಅಕ್ಟೋಬರ್ 9 ರಂದು ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12 ಗಂಟೆ ನಂತರ ಹಾಸನಾಂಬ ದೇಗುಲದ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದೆ. ಹಾಸನಾಂಬೆಯ ದರ್ಶನ ಪಡೆಯೋ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಭಕ್ರತ ನಿಯಂತ್ರಣಕ್ಕೆ ಬೇಕಾದ ಭದ್ರತೆ, 100 ಕ್ಕೂ ಹೆಚ್ಚು ಸಂಚಾರಿ ಶೌಚಾಲಯಗಳ ಅಳವಡಿಕೆ, ಕುಡಿಯುವ ನೀರು ಇತ್ಯಾದಿ ಮೂಲಭೂತ ಸೌಕರ್ಯ, ಪ್ರಸಾದ ವಿತರಣೆ ಹೀಗೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನ ಜಿಲ್ಲಾಡಳಿತ ಕೈಗೊಂಡಿದೆ. ಜೊತೆಗೆ ನೂಕು ನುಗ್ಗಲು ತಡೆಯಲು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಲು ತಯಾರಿ ನಡೆಸಿದೆ
ಸರ್ವ ಮಂಗಳ ಮಾಂಗಲ್ಯೇ ಶಿವೆ ಸರ್ವಾರ್ಥ ಸಾಧಿಕೆ.. ಶರಣ್ಯೇ ತ್ರಯಂಬಕೆ ದೇವಿ ಹಾಸನಾಂಬೆ ನಮೋಸ್ತುತೆ.. ಶಕ್ತಿ ದೇವಿ ಹಾಸನಾಂಬೆ, ವರ್ಷಕ್ಕೊಮ್ಮೆ ಭಕ್ತರನ್ನ ದರ್ಶನ ನೀಡಲಿದ್ದಾಳೆ.. ವಿಶೇಷ ಪೂಜಾ ಕೈಂಕರ್ಯಗಳ ಮೂಲಕ ಇವತ್ತು ದೇವಾಲಯ ಗರ್ಭಗುಡಿ ತೆರೆಯುತ್ತಿದೆ.. ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನದ ಅಧಿದೇವತೆಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಕಾದಿದ್ದಾರೆ..



