ಎಕ್ಸಾಂ ಈ ಹೆಸರು ಕೇಳಿದ್ರೆ ಸಾಕು ಅದೆಷ್ಟೋ ಮಕ್ಕಳಿಗೆ ಟೆನ್ಶನ್ ಶುರುವಾಗುತ್ತೆ. ಅದರಲ್ಲಿಯೂ SSLC ಎಕ್ಸಾಂ ಅಂದ್ರೆ ಸಾಕು ಒಂದು ರೀತಿ ಕಬ್ಬಿಣದ ಕಡಲೆಕಾಯಿ ಅಂತ ಭಾವಿಸುವ ಸಾಕಷ್ಟು ಜನ ನಮ್ಮ ಮಧ್ಯೆಯೇ ಇದ್ದಾರೆ. ಅಂತಹ ಅದೆಷ್ಟೋ ಮಕ್ಕಳಿಗೆ ಈಗ ಶಿಕ್ಷಣ ಇಲಾಖೆ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿದ್ದು ಇನ್ಮುಂದೆ ಮೂರು ಮೂರು ಸಲ SSLC ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಡಲಾಗಿದೆ..

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವತಿಯಿಂದ ಎಸ್.ಎಸ್.ಎಲ್. ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ದ್ವಿತೀಯ ಪಿಯುಸಿ, SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಗಳಿಸಿದ ಅಂಕ ತೃಪ್ತಿದಾಯಕ ಅಲ್ಲ ಅಂದ್ರೆ ಬದಲಾವಣೆಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅಂದ್ರೆ ವಾರ್ಷಿಕ ಪರೀಕ್ಷೆ ಮೂರು ಸಲ ಬರೆಯಲು ಅನುಮತಿ ನೀಡಲಾಗಿದೆ.. ಇಷ್ಟು ಭಾರಿ ಒಂದು ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಅಂದ್ರೆ ಪೂರಕ ಪರೀಕ್ಷೆ ಬರೆಯುವ ಅವಕಾಶ ಇತ್ತು. ಆದ್ರೆ ಈ ಪ್ರಸಕ್ತ ವರ್ಷದಿಂದ SSLC ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಎರಡು ಪೂರಕ ಪರೀಕ್ಷೆ ಬರೆಯಲು ಅವಕಾಶ ಇದೆ.. ಆದ್ರೆ ಈ ಪೂರಕ ಪರೀಕ್ಷೆಯನ್ನ ವಾರ್ಷಿಕ ಪರೀಕ್ಷೆ ಅಂತ ಉಲ್ಲೇಖ ಮಾಡಲಾಗುತ್ತೆ.
ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ತಿರಸ್ಕರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.. ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೇ ಪೂರಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ಪರಿಗಣನೆ ಮಾಡಲಾಗುತ್ತದೆ.. ಪೂರಕ ಪರೀಕ್ಷೆ ಎಂಬ ಹೆಸರಿನ ಬದಲಿಗೆ ಇನ್ಮುಂದೆ ವಾರ್ಷಿಕ ಪರೀಕ್ಷೆ 1, 2 ಮತ್ತು 3 ಎಂದು ನಾಮಕರಣ ಮಾಡಲಾಗಿದೆ..ಮೂರು ಪ್ರಯತ್ನಗಳಲ್ಲಿ ಗಳಿಸಿದ ಅಂಕಗಳಲ್ಲಿ, ವಿಷಯವಾರು ಅತ್ಯುತ್ತಮವಾದುದನ್ನು ಆಯ್ಕೆಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಕೊಡಲಾಗಿದೆ.
ಇನ್ನೂ ಶಿಕ್ಷಣ ಇಲಾಖೆ ಇಂದ SSSLC ಸಂಭವನೀಯ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದ್ದು,
ಪರೀಕ್ಷೆಯ ಹೆಸರು ದಿನಾಂಕ ಫಲಿತಾಂಶ
ಪರೀಕ್ಷೆ 1: ಮಾ 1- ಮಾ. 25 ಏ. 22
ಪರೀಕ್ಷೆ 2 ಮೇ15-ಜೂ.5 ಜೂನ್ 21
ಪರೀಕ್ಷೆ 3 ಜು.12 -ಜು.30 ಆಗಸ್ಟ್16
ಪಿಯುಸಿ ಸಂಭವನೀಯ ಪರೀಕ್ಷಾ ವೇಳಾಪಟ್ಟಿ
ಪರೀಕ್ಷೆ 1 ಮಾ 30- ಏ.15 ಮೇ 8
ಪರೀಕ್ಷೆ 2 ಜೂ. 12-ಜೂ.19 ಜೂನ್ 29
ಪರೀಕ್ಷೆ 3 ಜು.29 -ಆ.5 ಆಗಸ್ಟ್ 19 ಎಂದು ಸದ್ಯ ರಿಲೀಸ್ ಮಾಡಲಾಗಿದೆ.
ವಾರ್ಷಿಕವಾಗಿ ಮೂರು ಸಲ ಪರೀಕ್ಷೆ ಬರೆಯಲು ಅವಕಾಶ ಅಂದ್ರೆ ಮೊದಲನೇ ಸಲ ವಿದ್ಯಾರ್ಥಿ ಪರೀಕ್ಷೆ ಬರೆಯಲು ಅವಕಾಶ ಇರುತ್ತೆ, ಅದರಲ್ಲಿ ಪಡೆದ ಅಂಕ ಸಮಾಧಾನ ತಂದಿಲ್ಲ ಅಂದ್ರೆ ಎರಡನೇ ಬಾರಿ ಪರೀಕ್ಷೆ ಮಾಡಬಹುದು, ಅದು ಸಮಾಧಾನ ತಂದಿಲ್ಲ ಅಂದ್ರೆ ಅಥವಾ ತಯಾರಿ ನಡೆಸಿಲ್ಲ ಅಂದ್ರೆ ಮೂರು ಸಲ ಕೂಡ ಪರೀಕ್ಷೆ ಬರೆಯಲು ಅನುಮತಿ ಇರುತ್ತೆ. ವಿಷಯವಾರು ಯಾವ ಪರೀಕ್ಷೆಯಲ್ಲಿ ಅಂಕ ಜಾಸ್ತಿ ಬರುತ್ತೋ ಅದನ್ನ ಪರಿಗಣನೆ ಮಾಡಲು ಅವಕಾಶ ಇದೆ.
ಒಟ್ಟಿನಲ್ಲಿ ಮಕ್ಕಳ ಮೇಲೆ ಎಕ್ಸಾಂ ಎನ್ನುವ ಒತ್ತಡ ಹೇರಿ ಪೋಷಕರು ಅವರ ಮಾನಸಿಕ ಧೈರ್ಯ ಕುಗ್ಗಿಸುವ ಕೆಲಸ ಮಾಡಬಾರದು , ಮಕ್ಕಳು ಓದೋದಕ್ಕೆ ತಯಾರಿ ಆಗಿಲ್ಲ ಅಂದ್ರೆ ಮೂರು ಸಲ ಅವಕಾಶ ಕಲ್ಪಿಸಿ ಕೊಡಬೇಕುಅನ್ನೋ ದೃಷ್ಟಿಯಿಂದ ಈ ವಾರ್ಷಿಕ ಪರೀಕ್ಷೆ 1,2,3 ಪರಿಕಲ್ಪನೆ ತಂದಿದ್ದು ಇದು ಇನ್ಯಾವ ಮಟ್ಟಕ್ಕೆ ಅನುಷ್ಠಾನಕ್ಕೆ ಬರುತ್ತೆ ಅನ್ನೋದನ್ನ ಕಾದು ನೋಡಬೇಕು..