ಒಂದು ಗ್ರಾಮದಲ್ಲಿ ಸರಿಯಾದ ರಸ್ತೆಯಿಲ್ಲ, ಬೀದಿ ದೀಪವಿಲ್ಲ, ಕುಡಿಯಲು ನೀರಿಲ್ಲ ಎಂದರೆ ನಂಬಬಹುದು ಆದರೆ ಗ್ರಾಮದಲ್ಲಿ ಎಲ್ಲೂ ಗಂಡಸರೇ ಇಲ್ಲ ಎಂದರೆ ಯಾರಾದರೂ ನಂಬುತ್ತಾರ. ಖಂಡಿತ ನಂಬುವುದಿಲ್ಲ ಆದರೆ ಅಂತಹದ್ದೊಂದು ಗ್ರಾಮವಿದೆ ಎಂಬ ಸತ್ಯವನ್ನು ನೀವು ನಂಬಲೇ ಬೇಕು. ಆಶ್ಚರ್ಯ ಅನಿಸಿದ್ರೂ ಇದು ಸತ್ಯ. ಆ ಗ್ರಾಮದಲ್ಲಿ ಗಂಡಸರೇ ಇಲ್ಲ. ಅಲ್ಲಿರುವ ಸುಂದರ ಹುಡುಗಿಯರು ಮದುವೆಯಾಗಲು ಗಂಡಸರಿಗಾಗಿ ಹಂಬಲಿಸುತ್ತಿದ್ದಾರೆ. ಆದರೆ ಗಂಡು ಸಿಗುತ್ತಿಲ್ಲ.

ಹೌದು, ಇಂತಹದ್ದೊಂದು ಕೌತುಕದ ವಿಚಾರವನ್ನು ನಂಬದೆ ವಿಧಿಯಿಲ್ಲ. ಯಾಕೆಂದರೆ ಬ್ರೆಜಿಲ್ ದೇಶದ ಬೆಟ್ಟದ ಮೇಲೆ ನೋಯ್ವಾ ಎಂಬ ಗ್ರಾಮವಿದೆ. ಇಲ್ಲಿ ಮದುವೆ ವಯಸ್ಸಿಗೆ ಬಂದಿರುವ ನೂರಾರು ಸುಂದರ ಹುಡುಗಿಯರಿದ್ದಾರೆ. ಇಲ್ಲಿರುವ ಹುಡುಗಿಯರಿಗೆ ಮದುವೆಯಾಗಲು ಹುಡುಗರೇ ಸಿಗುತ್ತಿಲ್ಲ. ಮದುವೆ ವಯಸ್ಸಿನ ಸುಮಾರು 600 ಚೆಲುವೆಯರು ವರನಿಗಾಗಿ ನೋಯ್ವಾದಲ್ಲಿ ಹಂಬಲಿಸುತ್ತಿದ್ದಾರಂತೆ.
ಮದುವೆಯಾಗಲು ಹುಡುಗರಿಗಾಗಿ ಕಾದು ಕಾದು ಬೇಸತ್ತಿರುವ ಹುಡುಗಿಯರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮನ್ನು ಮದುವೆಯಾಗುವ ಹುಡುಗರಿಗೆ ವಧು ದಕ್ಷಿಣೆ ಕೊಡುವುದಕ್ಕೂ ಸಿದ್ಧರಾಗಿದ್ದಾರೆ. ಆದರೂ ಕೂಡ ಯಾವೊಬ್ಬ ಗಂಡಸು ಅಥವಾ ಯುವಕರು ಈ ಮಹಿಳೆಯರನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ. ಈ ಗ್ರಾಮದಲ್ಲಿ ಹುಟ್ಟಿದ ಯುವಕರೆಲ್ಲ ಪಟ್ಟಣಗಳತ್ತ ಹೋಗುವ ಕಾರಣ ಇಲ್ಲಿನ ಹುಡುಗಿಯರಿಗೆ ವಿವಾಹವಾಗಲು ವರನ ಕೊರತೆ ಉಂಟಾಗಿದೆ.
ನೋಯ್ವಾ ಗ್ರಾಮದಿಂದ ವಲಸೆ ಹೋಗಿ ಪಟ್ಟಣಗಳಲ್ಲಿ ಬದುಕಿವ ಯುವಕರು ಆ ಗ್ರಾಮದ ಹುಡುಗಿಯರನ್ನು ವಿವಾಹವಾಗದಿರಲು ಕಾರಣವಿದೆ. ಅದೇನೆಂದರೆ ನೋಯ್ವಾ ಗ್ರಾಮದಲ್ಲಿ ಮಹಿಳಾ ಪ್ರಾಭಲ್ಯ ಹೆಚ್ಚಿದೆ ಜೊತಗೆ ಅಲ್ಲಿ ಅನಾದಿ ಕಾಲದಿಂದಲೂ ಕೆಲವು ಕಟ್ಟುಪಾಡುಗಳಿದ್ದು ಅವುಗಳನ್ನು ಪಾಲಿಸಲು ಯುವಕರು ತಯಾರಿಲ್ಲ. ಹಾಗೆಯೇ ಅಲ್ಲಿನ ಪ್ರಮುಖ ಕಸುಬು ಪಶು ಸಂಗೋಪನೆ. ಇದೆಲ್ಲವುಗಳಿಂದ ಬೇಸತ್ತಿರುವ ಯುವಕರು ಹಳ್ಳಿ ತೊರೆದು ಪೇಟೆಯತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ ನೋಯ್ವಾದ ಮಹಿಳೆಯರು ಗಂಡಸರಿಗಾಗಿ ಕಾಯುತ್ತಲೇ ಇದ್ದಾರೆ.



