ರಿಯಲ್ ಸ್ಟಾರ್ ಉಪೇಂದ್ರ ಅವರು ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ ಅಂದ್ರೆ ಆ ಸಿನಿಮಾದಲ್ಲಿ ಯಾರು ಊಹೆ ಮಾಡದ ವಿಶೇಷತೆ ಇರುತ್ತದೆ ಅಂತ ಅರ್ಥ. ಇದೀಗ ಉಪೇಂದ್ರ ಅವರು 10 ವರ್ಷಗಳ ನಂತರ ನಿರ್ದೇಶನ ಮಾಡಿರುವ ಯುಐ ಸಿನಿಮಾ ಡಿಸೆಂಬರ್ 20ರಂದು ಕಳೆದ ಶುಕ್ರವಾರ ತೆರೆಕಂಡಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಯುಐ ಸಿನಿಮಾ ತೆರೆಕಂಡಿದ್ದು, ಈ ಸಿನಿಮಾ ನೋಡಿದ ಜನರು ಮಿಶ್ರ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಎಲ್ಲರಿಗೂ ಸಂಪೂರ್ಣವಾಗಿ ಸಿನಿಮಾ ಅರ್ಥ ಆಗಿಲ್ಲ. ಕೆಲವು ದೃಶ್ಯಗಳು ಅರ್ಥವಾಗದೇ, ತಲೆ ಕೆಡಿಸಿಕೊಂಡವರು ಸಾಕಷ್ಟು ಜನರಿದ್ದಾರೆ.

ಒಂದಷ್ಟು ಜನರು ಉಪೇಂದ್ರ ಅವರ ಸಿನಿಮಾ ಅಂದ್ರೆ ತಲೆಗೆ ಹುಳ ಬಿಡೋದೇ ಆಯ್ತು ಎಂದು ಹೇಳುತ್ತಿದ್ದಾರೆ. ಸತ್ಯ, ಕಲ್ಕಿ ಅವತಾರ, ಪ್ರಕೃತಿ ಮಾತೆ ಹೀಗೆ ಅನೇಕ ವಿಚಾರಗಳು ಸಿನಿಮಾದಲ್ಲಿವೆ, ಫೋಕಸ್ ಮಾಡಿ ನೋಡಿದರೆ ಸಿನಿಮಾ ಅರ್ಥ ಆಗೋದು ಪಕ್ಕಾ ಆಗಿದೆ. ಸಿನಿಮಾ ಕಥೆ ಎಲ್ಲರಿಗೂ ಸಹ ಪೂರ್ತಿಯಾಗಿ ಅರ್ಥ ಆಗದೇ ಹೋದರು ಸಹ ಸಿನಿಮಾದಲ್ಲಿ ಕೆಲವು ಡೈಲಾಗ್ ಗಳು ಜನರಲ್ಲಿ ಆಳವಾಗಿ ಬೇರೂರಿದೆ. ಸಿನಿಮಾ ನೋಡಿದೋರು ರಿವ್ಯೂ ಹೇಳೋಕು ಆಗದೇ ಇರೋ ರೇಂಜ್ ಗೆ ತಲೆ ಕೆಡಿಸಿಕೊಂಡಿದ್ದಾರೆ ಅಂದ್ರೆ ನೀವೇ ಅರ್ಥ ಮಾಡಿಕೊಳ್ಳಿ… ಉಪೇಂದ್ರ ಅವರ ಸಿನಿಮಾ ಹೇಗಿರಬಹುದು ಅಂತ…
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಸಿನಿಮಾದಲ್ಲಿ ಉಪೇಂದ್ರ ಅವರ ಎರಡು ಶೇಡ್ ಪಾತ್ರ ಸತ್ಯ ಮತ್ತು ಕಲ್ಕಿ ಭಗವಾನ್, ವಾಮನ ಪಾತ್ರ, ಹೀರೋಯಿನ್, ಉಪೇಂದ್ರ ಅವರ ತಾಯಿ ಪಾತ್ರ ಹೀಗೆ ಕೆಲವು ಪಾತ್ರಗಳು ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಉಪೇಂದ್ರ ಅವರ ತಾಯಿಯ ಪಾತ್ರವನ್ನು ಪ್ರಕೃತಿಗೆ ಹೋಲಿಕೆ ಮಾಡಲಾಗಿದೆ. ಈ ಪಾತ್ರದಲ್ಲಿ ಇಡೀ ಸಿನಿಮಾದಲ್ಲಿ ಒಂದೇ ಒಂದು ಡೈಲಾಗ್ ಅನ್ನು ಸಹ ಹೇಳದೇ ಜನರನ್ನು ಆಕರ್ಷಿಸಿದ್ದಾರೆ ಎಂದರೆ ತಪ್ಪಲ್ಲ. ಇವರ ಪಾತ್ರಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ತಾಯಿಯ ಪಾತ್ರವನ್ನು ಸಾಮಾನ್ಯವಾಗಿ ರಚಿಸದೇ ವಿಭಿನ್ನವಾಗಿ ಸಿನಿಪ್ರಿಯರ ಎದುರು ಪ್ರಸ್ತುತಪಡಿಸಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ.

ಯುಐ ಸಿನಿಮಾದ ಈ ತಾಯಿಯ ಪಾತ್ರದ ಬಗ್ಗೆ ಹಲವರಿಗೆ ಕುತೂಹಲ ಇದೆ. ಈ ಪಾತ್ರದಲ್ಲಿ ನಟಿಸಿರುವವರು ಮೇದಿನಿ ಕೆಳಮನಿ. ಇವರು ಈ ಮೊದಲು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು ಸಹ, ಯುಐ ಸಿನಿಮಾ ಇಂದ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಮೇದಿನಿ ಅವರು ಈ ಮೊದಲು ನಾನು ಲೇಡಿಸ್, ಪೆಪೇ, ದೊಬ್ರಾ ಹಾಗೂ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯುಐ ಸಿನಿಮಾದಲ್ಲಿ ಇವರದ್ದು ವಯಸ್ಸಿಗೆ ಮೀರಿದ ಪಾತ್ರ. ಮೇದಿನಿ ಅವರಿಗೆ ಇನ್ನು ಅಷ್ಟು ವಯಸ್ಸಾಗಿಲ್ಲ, ನೋಡೋದಕ್ಕೆ ಇನ್ನು ಕೂಡ ಬಹಳ ಯಂಗ್ ಆಗಿದ್ದಾರೆ ಮೇದಿನಿ. ಇನ್ಸ್ಟಾಗ್ರಾಮ್ ನಲ್ಲಿ ಇವರನ್ನು ನೋಡಬಹುದು..
ಮೇದಿನಿ ಅವರನ್ನು ನಿಜ ಜೀವನದಲ್ಲಿ ನೋಡಿದರೆ ನಿಮಗೆ ಗುರುತು ಹಿಡಿಯುವುದಕ್ಕೆ ಕಷ್ಟ ಅಗಬಹುದು. ಏಕೆಂದರೆ ಅಷ್ಟು ಮಾಡರ್ನ್ ಆಗಿದ್ದಾರೆ. ಬಹಳ ಬೋಲ್ಡ್ ಆಗಿ ಮತ್ತು ಹಾಟ್ ಆಗಿಯೂ ಫೋಟೋಸ್ ಗಳಿಗೆ ಪೋಸ್ ನೀಡಿದ್ದಾರೆ. ಮೇದಿನಿ ಉತ್ತಮ ಕಲಾವಿದೆ ಆಗಿದ್ದು, ಯುಐ ಸಿನಿಮಾ ಅವರಿಗೆ ದೊಡ್ಡ ಬ್ರೇಕ್ ನೀಡಿದೆ. ಮುಂದಿನ ದಿನಗಳಲ್ಲಿ ಅಪ್ಪಟ ಕನ್ನಡದ ಇವರಂಥ ಪ್ರತಿಭೆಗಳಿಗೆ ಇನ್ನು ಒಳ್ಳೆಯ ಅವಕಾಶಗಳು ಸಿಕ್ಕರೆ, ಕನ್ನಡ ಚಿತ್ರರಂಗಕ್ಕೆ ಹೊರ ಭಾಷೆಯಿಂದ ಭಾಷೆ ಬರದ ನಟಿಯರನ್ನು ಕರೆತರುವ ಅವಶ್ಯಕತೆಯೇ ಇರುವುದಿಲ್ಲ.