ಬಣ್ಣದ ರಂಗ ಎಂಬುದು ಅಷ್ಟು ಸುಲಭದ ಮಾತಲ್ಲ.ಇಲ್ಲಿ ನೆಲೆ ಯೂರಲು ಸಾಕಷ್ಟು ಹರಸಾಹಸ ಪಡಬೇಕು.ತಮ್ಮ ಇಚ್ಚೆಯೆಲ್ಲವನ್ನು ಬಿಟ್ಟು ಸಿನಿಮಾ ರಂಗಕ್ಕೆ ಸಂಪೂರ್ಣ ತೊಡಗಿಸಿಕೊಂಡರು ವೊಮೊಮ್ಮೆ ಸಕ್ಸಸ್ ಗಿಟ್ಟಿಸಿಕೊಳ್ಳುವುದು ಬಹಳ ಕಷ್ಟ.ಇನ್ನು ಸಕ್ಸಸ್ ಸಿಕ್ಕಿದ ನಂತರವೂ ಕೂಡ ಅದೇ ಸ್ಥಾನವನ್ನು ಉಳಿಸಿಕೊಳ್ಳಲು ತಮ್ಮ ಪ್ರಯತ್ನ ಗಳಲ್ಲಿ ಕೊಂಚ ಎಡವಿದರು ಕೂಡ ಆಕಾಶದಲ್ಲಿ ಇರುವವರು ಕೂಡ ಪಾತಾಳಕ್ಕೆ ಇಳಿದುಬಿಡುತ್ತಾರೆ.ಇನ್ನು ಹೆಸರು ಪಡೆದವರ ಕೂಡ ತಮ್ಮ ಹೆಸರಿಗೆ ಕಳಂಕ ತರುವ ಮಂದಿ ಈ ಕಾಲದಲ್ಲಿ ಸಾಕಷ್ಟು ಮಂದಿ ಇರುತ್ತಾರೆ. ಅದೆಲ್ಲವನ್ನು ಬದಿಗಿಟ್ಟು ತಮ್ಮ ಜೀವನಕ್ಕೆ ಯಾವುದನ್ನು ತಲೆಕೆಡಿಸಿಕೊಳ್ಳದೆ ಬದುಕಬೇಕು.

ಇನ್ನು ಬಣ್ಣದ ರಂಗದಲ್ಲಿ ಕಳೆ ಕಚ್ಚಿಸಿದ ಪಾತ್ರಗಳು ಎಷ್ಟೇ ವರ್ಷಗಳು ಉರುಳಿದರು ಕೂಡ ಅದೇ ಹೆಸರಿನಿಂದ ಪ್ರಸಿದ್ದಿ ಅವರಿಗೆ ಎಷ್ಟೇ ಎತ್ತರಕ್ಕೆ ಹಾಗೆ ಇರುತ್ತದೆ.ಹೀಗೆ ಚಿಕ್ಕ ಪರದೆಯಲ್ಲಿ ಗುರುತಿಸಿಕೊಂಡವರು ಕೂಡ ಇಂದು ಉತ್ತಮ ಸ್ಥಾನದಲ್ಲಿ ಮೀನುಗುತ್ತಿದ್ದಾರೆ. ಇದೀಗ ಅಂಥದ್ದೇ ಉಧಾಹರಣೆ ನಾವು ಹೊತ್ತು ತಂದಿದ್ದೇವೆ ಅದೇನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.”ಶ್ವೇತಾ ಪ್ರಸಾದ್” ಈ ಹೆಸರು ಸದ್ಯದಲ್ಲಿ ಬಣ್ಣದ ರಂಗದಲ್ಲಿ ಚಾಲ್ತಿಯಲ್ಲಿ ಇಲ್ಲ. ಆದರೆ ಇವರ ಹೆಸರು ಕೇಳಿದರೆ ಇಂದಿಗೂ ಜನ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ.
ಹೌದು! ಈ ನಟಿ ಬಣ್ಣದ ಲೋಕಕ್ಕೆ ಬಂದು ದಶಕಗಳು ಕಳೆದಿವೆ.ಹೀಗಿದ್ದರೂ ಈ ನಟಿ ಇನ್ನು ಟ್ರೆಂಡ್ ನಲ್ಲಿ ಇದೆ.ಈ ನಟಿ ಪರಿಚಯಿಸಿಕೊಂಡಿದ್ದು ‘ಜಿ ಕನ್ನಡದಲ್ಲಿ’ ಬಂದ ಆರು ಅತ್ತೆಯಂದಿರ ಕಥೆ ಅದಾರಿತವಾದ “ಶ್ರೀ ರಸ್ತು ಶುಭಮಸ್ತು” ಎಂಬ ದಾಖಲೆಗಳನ್ನು ಬರೆದ ಧಾರಾವಾಹಿಯ ಮೂಕಾಂತರ ಆರು ಅತ್ತೆಯಂದಿರ ಸೊಸೆಯಾಗಿ ಪರಿಚಯಿಸಿಕೊಂಡು ಎಲ್ಲರ ಮನೆ ಮಗಳು ಆದರೂ.ಇದೊಂದೇ ಧಾರಾವಾಹಿ ಇವರ ಜನಪ್ರಿಯತೆ ಹೆಚ್ಚಿಸಿತು.ಆ ನಂತರ ಇವರಿಗೆ ಅವಕಾಶಗಳು ಹುಡುಕಿಕೊಂಡು ಬರಲು ಆರಂಬಿಸಿತು.
ಇದಾದ ಬಳಿಕ ಕಲರ್ಸ್ ಕನ್ನಡದಲ್ಲಿ ಮತ್ತೊಂದು ಜನಪ್ರಿಯತೆ ಧಾರವಹಿಯಾದ “ರಾಧಾ ರಮಣ” ಧಾರಾವಾಹಿಯ ರಾಧಾ ಮಿಸ್ ಆಗಿ ಕೂಡ ಜನರ ಮೆಚ್ಚುಗೆಗೆ ಪಾತ್ರವಾದರು.ಈಗಲೂ ಕೂಡ ಈ ನಟಿಯನ್ನು ‘ರಾಧಾ ಮಿಸ್’ ಎಂಬ ಹೆಸರು ಹೆಚ್ಚು ಜನಪ್ರಿಯತೆ ಪಡೆದಿದೆ.’ಕಳ್ಬೆಟ್ಟದ ದರೋಡೆಕೋರರು’ ಸಿನಿಮಾದ ಮೂಲಕ ಸಿಲ್ವರ್ ಸ್ಕ್ರೀನ್ಗೂ ಎಂಟ್ರಿ ಕೊಟ್ಟಿದ್ದಾರೆ.ಇದೀಗ ಈ ನಟಿ ಬಹಳ ಚರ್ಚೆಗೆ ಕರಣವಾಗಿದ್ದಾರೆ.ಕಾರಣ ಏನೆಂದರೆ ಶ್ವೇತಾ ಪ್ರಸಾದ್ರನ್ನು ಇತ್ತೀಚೆಗೆ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರ ಆಹ್ವಾನಿಸಿ ವಿಶೇಷ ಆತಿಥ್ಯ ನೀಡಿದೆ.ಅಂದ್ಹಾಗೆ ಕರ್ನಾಟಕದಿಂದ ಈ ಆಹ್ವಾನ ಪಡೆದ ಶ್ವೇತಾ ಪ್ರಸಾದ್ ಮೊದಲ ಕನ್ನಡಿಗರಾಗಿದ್ದಾರೆ.
ಇನ್ನು ಹೆಚ್ಚು ಕಾಲ ಪ್ರವಾಸ ಮಾಡಿ ಅವರ ಆತಿಥ್ಯ ಮುಗಿಸಿ ಬಂದ ಶ್ವೇತಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಮೆಚ್ಚುಗೆಯ ಮಾತುಗಳಿಂದ ಬರೆದುಕೊಂಡಿದ್ದಾರೆ.’ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದಿಂದ ಆಹ್ವಾನ ನೀಡಿದ್ದು ಬಹಳ ಖುಷಿ ನೀಡಿದೆ. ಕರ್ನಾಟಕದಿಂದ ಈ ಆಹ್ವಾನ ಪಡೆದವವರಲ್ಲಿ ನಾನು ಮೊದಲಿಗಳು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಅಲ್ಲಿನ ಪ್ರವಾಸೋಧ್ಯಮ ಪ್ರಾಧಿಕಾರ ಈ ಕೆಲಸ ಮಾಡುತ್ತಿದೆ. ಆರು ದಿನಗಳ ಕಾಲ ಸೌದಿ ಅರೇಬಿಯಾದಲ್ಲಿ ಕಳೆದ ದಿನಗಳು ಮರೆಯಲಾಗದು. ಒಂದು ಹೊಸ ಅನುಭವವನ್ನು ಈ ಪ್ರವಾಸ ನೀಡಿದೆ.’ ಎಂದು ಶ್ವೇತಾ ಪ್ರಸಾದ್ ಹೇಳಿದ್ದಾರೆ.