ಕನ್ನಡ ಮಾತ್ರವಲ್ಲದೇ ಎಲ್ಲಾ ಭಾಷೆಯ ಖಾಸಗಿ ವಾಹಿನಿಗಳಲ್ಲೂ ಕೂಡ ಧಾರವಾಹಿಗಳದ್ದೇ ಕಾರುಬಾರು. ಧಾರವಾಹಿ, ಅದರಲ್ಲಿನ ಕತೆ ಹಾಗೂ ಪಾತ್ರಗಳನ್ನು ಜನರು ಹೆಚ್ಚಾಗಿ ಇಷ್ಟ ಪಡುತ್ತಾರೆ. ಅದೇ ರೀತಿ ಕನ್ನಡದ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿ ಎನಿಸಿಕೊಂಡಿದ್ದ ‘ಲಕ್ಷ್ಮೀ ಬಾರಮ್ಮ’ ಧಾರವಾಹಿಗೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ. ಧಾರವಾಹಿಯ ಪ್ರಮುಖ ಪಾತ್ರಧಾರಿ ಕೀರ್ತಿ ಸದ್ಯ ತಂಡದಿಂದ ಹೊರಬಂದಿದ್ದಾರೆ.

ಸದ್ಯ, ‘ಲಕ್ಷ್ಮಿ ಬಾರಮ್ಮ’ ಧಾರವಾಹಿಯಲ್ಲಿ ಕೀರ್ತಿ ಮತ್ತು ವೈಷ್ಣವ್ ಬಹುವಾಗಿ ಪ್ರೀತಿಸುತ್ತಿದ್ದರು. ಆದರೆ ವೈಷ್ಣವ್ ತಾಯಿ ಕಾವೇರಿಗೆ ಈ ಪ್ರೀತಿ ಇಷ್ಟವಿರಲಿಲ್ಲ. ಆ ಕಾರಣ ತಮ್ಮ ಮಗನಿಗೆ ಲಕ್ಷ್ಮಿ ಎಂಬ ಮದ್ಯಮ ಕುಟುಂಬದ ಹುಡುಗಿಯೊಂದಿಗೆ ಮದುವೆ ಮಾಡಿಸುತ್ತಾರೆ. ಇನ್ನೊಂದೆಡೆ ಕೀರ್ತಿ ವೈಷ್ಣವ್ ಗಾಗಿ ಹಂಬಲಿಸುತ್ತಿರುತ್ತಾಳೆ. ವೈಷ್ಣವ್ ನನ್ನು ಪಡೆಯಲು ಹಲವು ಪ್ಲಾನ್ ಮಾಡುತ್ತಾಳೆ. ಆದರೆ ಈಗ ಕೀರ್ತಿ ಪಾತ್ರದಲ್ಲಿ ನಟಿಸಿದ್ದ ನಟಿ ತನ್ವಿ ರಾವ್ ತಂಡದಿಂದ ಹೊರ ಬಂದಿದ್ದಾರೆ.
ಆಕೃತಿ ಮತ್ತು ರಾಧೆ ಶ್ಯಾಮ್ ಎಂಬ ಕನ್ನಡ ಧಾರವಾಹಿಗಳ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದ ನಟಿ ತನ್ವಿ ರಾವ್ ಇದೀಗ ‘ಲಕ್ಷ್ಮೀ ಬಾರಮ್ಮ’ ಧಾರವಾಹಿ ತಂಡದಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಸೀರಿಯಲ್ ಟೀಂ ಅಥವಾ ಚಾನೆಲ್ ಯಾವುದೇ ಸ್ಪಷ್ಟನೆ ನೀಡಿಲ್ಲ. ತನ್ವಿ ರಾವ್ ಕೂಡ ತುಟಿ ಬಿಚ್ಚಿಲ್ಲ.