ನಟಿ ಮಿಲ್ಕಿಬ್ಯೂಟಿ ತಮನ್ನಾ ಭಾರತೀಯ ಸಿನಿರಂಗದಲ್ಲಿ ಸಕ್ಕತ್ ಫೇಮಸ್. ಸದ್ಯ, ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದಲ್ಲಿ ‘ಕಾವಾಲಯ್ಯ’ ಹಾಡಿಗೆ ಸ್ಟೆಪ್ ಹಾಕಿರುವ ತಮನ್ನಾ ಟ್ರೆಂಡಿಂಗ್ ನಲ್ಲಿದ್ದಾರೆ. ಈ ಹಾಡಿನ ನೃತ್ಯಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಇದೀಗ ತಮನ್ನಾ ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಜಗತ್ತಿನ 5 ದುಬಾರಿ ಡೈಮಂಡ್ ಧರಿಸಿ ಮಿಂಚಿರುವ ತಮನ್ನಾಗೆ ಈ ದುಬಾರಿ ಉಡುಗೊರೆ ನೀಡಿದ್ಯಾರು ಎಂಬ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ದುಬಾರಿ ವಜ್ರದ ಉಂಗುರ ಧರಿಸಿ ಕ್ಯಾಮರಾಗೆ ಫೋಸ್ ಕೊಟ್ಟಿರುವ ತಮನ್ನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ಈ ಉಂಗುರ ಅವರಿಗೆ ಉಡುಗೊರೆಯಾಗಿ ಸಿಕ್ಕಿದ್ದಂತೆ. ಈ ಉಂಗುರದ ಬೆಲೆ ಬರೋಬ್ಬರಿ 2 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಜೊತೆಗೆ ಈ ಉಂಗುರ ಜಗತ್ತಿನ 5ನೇ ದುಬಾರಿ ವಜ್ರದ ಉಂಗುರವಂತೆ.
ಈ ದುಬಾರಿ ಗಿಫ್ಟ್ ಕೊಟ್ಟದ್ದು ಯಾರು?
ತಮನ್ನಾ ವಜ್ರದ ಉಂಗುರ ತೊಟ್ಟ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು, ‘ಇದು ತಮನ್ನಾಗೆ ಬಾಯ್ ಫ್ರೆಂಡ್ ಕೊಟ್ಟಿರುವ ಉಡುಗೊರೆ’ ಎಂದಿದ್ದಾರೆ. ಆದರೆ ಈ ಉಡುಗೊರೆ ಕೊಟ್ಟಿದ್ದು ರಾಮ್ ಚರಣ್ ಪತ್ನಿ ಎನ್ನಲಾಗಿದೆ. ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ಅದ್ಭುತವಾಗಿ ನಟಿಸಿದ್ದರು. ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಖುಷಿಗೆ ರಾಮ್ ಚರಣ್ ಪತ್ನಿ ಉಪಾಸನ ಅವರು ತಮನ್ನಾಗೆ ಈ ದುಬಾರಿ ಉಡುಗೊರೆ ನೀಡಿದ್ದಾರೆ.



