ಒಂದೆರಡು ವರ್ಷಗಳಿಂದ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದ್ದ ಜೋಡಿಗಳಲ್ಲಿ ಒಂದು ಮಿಲ್ಕಿ ಬ್ಯೂಟಿ ತಮನ್ನಾ ಮತ್ತು ವಿಜಯ್ ವರ್ಮಾ ಜೋಡಿ. ಇವರಿಬ್ಬರು ಒಂದು ರೀತಿ ಅಪರೂಪದ ಜೋಡಿ ಎಂದೇ ಹೇಳಬಹುದು. ಈ ಇಬ್ಬರು ವ್ಯಕ್ತಿಗಳು ಡೇಟಿಂಗ್ ಮಾಡುತ್ತಿದ್ದಾರೆ, ಲವ್ ಮಾಡುತ್ತಿದ್ದಾರೆ ಎಂದು ನಂಬುವುದಕ್ಕೆ ಸ್ವಲ್ಪ ಕಷ್ಟ ಆಗಿದ್ದಂತೂ ಹೌದು. ಆದರೆ ಅಭಿಮಾನಿಗಳು ಇವರಿಬ್ಬರ ರಿಲೇಶನ್ಷಿಪ್ ಅನ್ನು ಒಪ್ಪಿಕೊಂಡರು. ಈ ಜೋಡಿಯನ್ನು ಸೆಲೆಬ್ರೇಟ್ ಮಾಡುವುದಕ್ಕೆ ಶುರು ಮಾಡಿದರು. ಆದರೆ ಇತ್ತೀಚೆಗೆ ಈ ಜೋಡಿ ದೂರವಾಗಿದ್ದಾರೆ, ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ಬಗ್ಗೆ ವಿಜಯ್ ವರ್ಮಾ ಅವರು ಇನ್ನು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದರೆ ತಮನ್ನಾ ಅವರು ಈಗ ಬ್ರೇಕಪ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿರೋದು ಏನು ಎಂದು ತಿಳಿಯೋಣ..
ನಟಿ ತಮನ್ನಾ ಅವರಿಗೆ ಇರುವ ಜನಪ್ರಿಯತೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇವರು ಹುಟ್ಟಿ ಬೆಳೆದಿದ್ದು ಮುಂಬೈ ಮಹಾನಗರದಲ್ಲೇ ಆದರೂ ತಮನ್ನಾ ಅವರಿಗೆ ಹೆಸರು ತಂದುಕೊಟ್ಟಿದ್ದು ದಕ್ಷಿಣ ಭಾರತ ಚಿತ್ರರಂಗ. ಇಲ್ಲಿನ ಸ್ಟಾರ್ ಹೀರೋಯಿನ್ ಆಗಿ ಮೆರೆದ ತಮನ್ನಾ ಅವರು, ತಮಿಳು ಮತ್ತು ತೆಲುಗು ಭಾಷೆಯ ಎಲ್ಲಾ ಸ್ಟಾರ್ ಹೀರೋಗಳ ಕೋಟೆಗೆ ನಟಿಸಿ, ಸ್ಟಾರ್ ಹೀರೋಯಿನ್ ಅನ್ನಿಸಿಕೊಂಡರು. ಇವರ ಬ್ಯೂಟಿ ಮತ್ತು ಗ್ರೇಸ್ ಬಗ್ಗೆ ಹೇಳೋ ಹಾಗೆ ಇಲ್ಲ, ಅಷ್ಟು ಬೆಳ್ಳಗೆ, ತೆಳ್ಳಗೆ ಇರುವ ಕಾರಣಕ್ಕೆ ಇವರನ್ನು ಎಲ್ಲರೂ ಮಿಲ್ಕಿ ಬ್ಯೂಟಿ ಎಂದೇ ಕರೆಯುತ್ತಾರೆ. ನೋಡೋದಕ್ಕೆ ನಿಜಕ್ಕೂ ಅದೇ ರೀತಿ ಇದ್ದಾರೆ ಎಂದು ಹೇಳಿದರೂ ತಪ್ಪಲ್ಲ. ಬಾಹುಬಲಿ ಸಿನಿಮಾ ಇಂದ ಇವರು ಪ್ಯಾನ್ ಇಂಡಿಯಾದಲ್ಲಿ ಗುರುತಿಸಿಕೊಂಡರು. ಸ್ಟಾರ್ ಹೀರೋಯಿನ್ ತಮನ್ನಾ ಬಾಲಿವುಡ್ ಗೆ ಕೂಡ ಎಂಟ್ರಿ ಕೊಟ್ಟರು..

ಬಾಲಿವುಡ್ ನಲ್ಲಿ ಕೂಡ ಒಂದರ ನಂತರ ಒಂದು ಸೂಪರ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಸ್ಪೆಷಲ್ ಸಾಂಗ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಇತ್ತೀಚೆಗೆ ಇವರು ಜೈಲರ್ ಸಿನಿಮಾ ಹಾಡಿನಲ್ಲಿ ನಟಿಸಿದ್ದು, ಆ ಹಾಡು ದೊಡ್ಡದಾಗಿ ಸದ್ದು ಮಾಡಿತು. ಹೀಗೆ ತಮನ್ನಾ ಅವರು ಒಂದೊಂದು ಸಿನಿಮಾ ಇಂದಲೂ ಹೆಸರು ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇವರು ಬಾಲಿವುಡ್ ನಟ ವಿಜಯ್ ವರ್ಮಾ ಅವರ ಜೊತೆಗೆ ಡೇಟಿಂಗ್ ಮಾಡುತ್ತಿರುವ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದರು. 2 ವರ್ಷಗಳ ಹಿಂದೆ ಈ ಜೋಡಿ ಆಗಾಗ ಒಟ್ಟಿಗೆ ಕಾಣಿಸಿಕೊಂಡಿದ್ದರು, ಇಬ್ಬರೂ ಡೇಟಿಂಗ್ ಮಾಡುತ್ತಿರಬಹುದು ಎಂದು ಸುದ್ದಿಗಳು ಗುಲ್ಲಾಗಿದ್ದವು. ಇಬ್ಬರು ಒಟ್ಟಿಗೆ ಹೊಸ ವರ್ಷದ ಆಚರಣೆ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ವಿಜಯ್ ವರ್ಮಾ ಅವರು ತಮನ್ನಾ ಅವರಿಗೆ ಮುತ್ತು ಕೊಡುತ್ತಿರುವ ವಿಡಿಯೋ ಸಹ ವೈರಲ್ ಆಗಿತ್ತು. ಬಳಿಕ ಇಬ್ಬರೂ ಕೂಡ ತಾವು ರಿಲೇಶನ್ಷಿಪ್ ನಲ್ಲಿ ಇರುವುದಾಗಿ ಒಪ್ಪಿಕೊಂಡಿದ್ದರು. ಆಗಿನಿಂದ ಈ ಜೋಡಿ ಎಲ್ಲೇ ಹೋದರೂ, ಎಲ್ಲೇ ಬಂದರೂ ಸುದ್ದಿ ಆಗುತ್ತಿತ್ತು. ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಇಬ್ಬರೂ ಕೂಡ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ವಿಜಯ್ ವರ್ಮಾ ತಮನ್ನಾ ಅವರನ್ನು ಬಹಳ ಪ್ರೀತಿಯಿಂದ ಕಾಳಜಿ ಇಂದ ನೋಡಿಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತಿತ್ತು. ಜೋಡಿಯಾಗಿ ಇಬ್ಬರು ಕಾಣಿಸಿಕೊಂಡಾಗ, ತಮನ್ನಾ ಅವರ ಪರ್ಸ್ ಅನ್ನು ವಿಜಯ್ ವರ್ಮಾ ಹಿಡಿದು ಬರುತ್ತಿದ್ದರು, ಫೋಟೋಗಳಲ್ಲಿ ಪೋಸ್ ಕೊಡೋದಕ್ಕೆ ತಮನ್ನಾ ಅವರಿಗೆ ಸ್ಪೇಸ್ ಕೊಡುತ್ತಿದ್ದರು. ಇದೆಲ್ಲವನ್ನು ನೋಡಿ ತಮನ್ನಾ ಅವರಿಗೆ ವಿಜಯ್ ವರ್ಮಾ ಅವರು ಸರಿಯಾದ ಜೋಡಿ, ಬಹಳ ಕ್ಯೂಟ್ ಜೋಡಿ ಎಂದಿದ್ದರು ನೆಟ್ಟಿಗರು.
ಅಷ್ಟೇ ಅಲ್ಲದೇ ತಮ್ಮಿಬ್ಬರ ಪ್ರೀತಿಯ ಬಗ್ಗೆ ತಮನ್ನಾ ಅವರು ಕೂಡ ಮಾಧ್ಯಮದವರ ಎದುರು ಮಾತನಾಡಿ ತಾವಿಬ್ಬರು ಶೀಘ್ರದಲ್ಲೇ ಮದುವೆ ಆಗುತ್ತೇವೆ ಎಂದಿದ್ದರು. ಇನ್ನು ತಮನ್ನಾ ಅವರ ತಂದೆ ತಾಯಿಗೆ ವಿಜಯ್ ವರ್ಮಾ ತುಂಬಾ ಇಷ್ಟವಾಗಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬಂದಿತ್ತು, ಶೀಘ್ರದಲ್ಲೇ ಈ ಜೋಡಿ ಮದುವೆ ಆಗಬಹುದು ಎನ್ನುವ ಸುದ್ದಿಗಳು ಕೇಳಿಬರುತ್ತಿದ್ದ ಬೆನ್ನಲ್ಲೇ ಇದೀಗ ಇವರಿಬ್ಬರು ದೂರ ಆಗಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿತ್ತು. ಹೌದು, ತಮನ್ನಾ ಹಾಗೂ ವಿಜಯ್ ವರ್ಮಾ ಬ್ರೇಕಪ್ ಮಾಡಿಕೊಂಡಿದ್ದಾರೆ, ಇಬ್ಬರು ಇನ್ನುಮುಂದೆ ಜೊತೆಯಾಗಿ ಇರುವುದಿಲ್ಲ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಸದ್ದು ಮಾಡುತ್ತಿತ್ತು. ಕಳೆದ ತಿಂಗಳು ಸಿನಿಮಾ ವೊಂದರ ಪ್ರೀಮಿಯರ್ ಶೋನಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಅದಾದ ಬಳಿಕ ಇವರಿಬ್ಬರು ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಹಾಗೆಯೇ ಇಬ್ಬರು ಜೊತೆಯಾಗಿ ಇರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಖಾತೆಗಳಿಂದ ಡಿಲೀಟ್ ಮಾಡಿದ್ದಾರೆ, ಈ ಕಾರಣಕ್ಕೆ ಇವರಿಬ್ಬರು ಬ್ರೇಕಪ್ ಮಾಡಿಕೊಂಡಿರಬಹುದು ಎನ್ನುವ ಸುದ್ದಿಯೊಂದು ಕೇಳಿಬರುತ್ತಿದೆ. ಆದರೆ ತಮನ್ನಾ ಅವರ ಖಾತೆಯಲ್ಲಿ ವಿಜಯ್ ವರ್ಮಾ ಜೊತೆಗಿರುವ ಕೆಲವು ವಿಡಿಯೋಗಳು ಇನ್ನು ಕೂಡ ಇದೆ. ಹಾಗಾಗಿ ಈ ವಿಷಯದ ಬಗ್ಗೆ ಸಂಪೂರ್ಣವಾಗಿ ಸ್ಪಷ್ಟನೆ ಸಿಕ್ಕಿರಲಿಲ್ಲ. ಆದರೆ ಹೋಳಿ ಹಬ್ಬದ ದಿವಸ ಬಾಲಿವುಡ್ ನಟಿ ರವೀನಾ ಟಂಡನ್ ಅವರ ಮನೆಯಲ್ಲಿ ನಡೆದ ಹೋಳಿ ಪಾರ್ಟಿಗೆ ಇಬ್ಬರು ಬೇರೆ ಬೇರೆಯಾಗಿ ಬಂದಿದ್ದರು, ಜೊತೆಯಾಗಿ ಕಾಣಿಸಿಕೊಳ್ಳಲು ಇಲ್ಲ. ಹಾಗಾಗಿ ಬ್ರೇಕಪ್ ಬಗೆಗಿನ ಗಾಸಿಪ್ ಜಾಸ್ತಿಯೇ ಆಗಿತ್ತು. ಇದೀಗ ತಮನ್ನಾ ಅವರು ಕೊನೆಗು ಬ್ರೇಕಪ್ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ತಮನ್ನಾ ಅವರು, “ನನ್ನ ಖಾಸಗಿ ವಿಚಾರಗಳನ್ನು ಖಾಸಗಿ ಆಗಿಯೇ ಇಟ್ಟುಕೊಳ್ಳಲು ಬಯಸುತ್ತೇನೆ. ಆ ವಿಚಾರ ನನಗೆ ಓಕೆ ಅನ್ನಿಸಿದರೆ ಮಾತ್ರ, ಅದನ್ನು ಎಲ್ಲರ ಜೊತೆಗೂ ಶೇರ್ ಮಾಡಿಕೊಳ್ಳುತ್ತೇನೆ. ಯಾವ ವಿಷಯವನ್ನು ಎಲ್ಲಿ ಹೇಗೆ ಹೇಳಬೇಕೋ, ಆ ರೀತಿ ಹೇಳುತ್ತೇನೆ. ಯಾರ ಬಗ್ಗೆಯೂ ನನಗೆ ಕಂಪ್ಲೇಂಟ್ಸ್ ಇಲ್ಲ. ನಾನು ಜನರ ಜೊತೆಗಿರುವ ವ್ಯಕ್ತಿ, ಅವರ ಜೊತೆ ಮಾತಾಡೋದು ಅಂದ್ರೆ ನನ್ಗೆ ತುಂಬಾ ಇಷ್ಟ. ಏರ್ಪೋರ್ಟ್ ನಲ್ಲಿ ಪಾಪಾರಾಜಿಗಳನ್ನ ನಗುನಗುತ್ತಾ ಪ್ರೀತಿಯಿಂದ ಮಾತನಾಡಿಸುತ್ತೇನೆ, ಅಭಿಮಾನಿಗಳು ಜನರು ಮಾತನಾಡಿಸಿ ಸೆಲ್ಫಿ ಕೇಳಿದಾಗ, ನಗುತ್ತಲೇ ಸೆಲ್ಫಿ ಕೊಡುತ್ತೇನೆ. ಮನಸ್ಸಿನಿಂದ ಇದೆಲ್ಲಾ ಮಾಡ್ತೀನಿ, ಇದರಿಂದ ನನಗೆ ತುಂಬಾ ಖುಷಿ ಇದೆ. ನನ್ನ ಚಾಯ್ಸ್ ನನಗೆ ಖುಷಿ ಕೊಟ್ಟಿದೆ, ಅಪರಿಚಿತ ವ್ಯಕ್ತಿಗಳ ಜೊತೆಗೆ ಮಾತನಾಡುವುದರಿಂದ ಸಾಕಷ್ಟು ವಿಚಾರಗಳನ್ನು ತಿಳಿಯಬಹುದು..” ಎಂದು ಹೇಳುವ ಮೂಲಕ, ಬ್ರೇಕಪ್ ಸುದ್ದಿ ನಿಜ ಎನ್ನುವುದನ್ನ ಪರೋಕ್ಷವಾಗಿ ಹೇಳಿದ್ದಾರೆ ತಮನ್ನಾ.