ನಟ ದರ್ಶನ್ ಅವರಿಗೆ ಈ ವರ್ಷ ವನವಾಸ ಇದ್ದ ಹಾಗಿದೆ. ಮೊದಲ 6 ತಿಂಗಳು ಒಂದು ರೀತಿಯಾದರೆ, 2024ರ ದ್ವಿತೀಯಾರ್ಧದಲ್ಲಿ ಯಾರು ಊಹಿಸದ ಹಾಗೆ ಕಷ್ಟಗಳೇ ಕಂಡುಬಂದಿದೆ. ದರ್ಶನ್ ಅವರು 6 ತಿಂಗಳು ಎರಡು ಜೈ*ಲುಗಳಲ್ಲಿ ಇದ್ದ ನಂತರ ಅವರಿಗೆ ಪೂರ್ಣ ಪ್ರಮಾಣದಲ್ಲಿ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ದರ್ಶನ್ ಅವರು ಕೋರ್ಟ್ ಇಂದ ಸ್ಪೆಷಲ್ ಪರ್ಮಿಶನ್ ಪಡೆದು ಮೈಸೂರಿನ ಫಾರ್ಮ್ ಹೌಸ್ ಗೆ ಶಿಫ್ಟ್ ಆಗಿದ್ದಾರೆ..ಅಲ್ಲಿಯೇ ಕುಟುಂಬದ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಅದರ ಜೊತೆಗೆ ಈಗ ದರ್ಶನ್ ಅವರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಸಿಕ್ಕಿದೆ, ಮೈಸೂರಿನ ವೈದ್ಯರು ದರ್ಶನ್ ಅವರ ಆರೋಗ್ಯ ಸುಧಾರಿಸಲು ಬೇರೆಯದೇ ಸಲಹೆ ನೀಡಿದ್ದಾರೆ..

ದರ್ಶನ್ ಅವರೊಡನೆ ಮೈಸೂರಿನಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ, ಮಗ ವಿನಿಷ್, ನಟ ಧನವೀರ್ ಸೇರಿದಂತೆ ಅವರ ಆತ್ಮೀಯರ ಬಳಗ ದರ್ಶನ್ ಅವರ ಜೊತೆಯಲ್ಲಿದೆ. ಡಿಸೆಂಬರ್ 24ರಂದು ದರ್ಶನ್ ಅವರು ಧನವೀರ್ ಅವರ ಜೊತೆಗೆ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ಚೆಕಪ್ ಮಾಡಿಸಲು ಹೋಗಿದ್ದರು. ಆ ವೇಳೆ ದರ್ಶನ್ ಅವರಿಗೆ ಚೆಕಪ್ ಮಾಡಿದ ವೈದ್ಯರು, ದರ್ಶನ್ ಅವರ ಬೆನ್ನು ಮೂಳೆ ಸ್ವಲ್ಪ ಜರುಗಿದೆ ಎಂದು ಮಾಹಿತಿ ನೀಡಿದ್ದಾರೆ, ಹಾಗೆಯೇ ನರಗಳು ಸ್ವಲ್ಪ ಒತ್ತಿಕೊಂಡಿರುವ ಕಾರಣ, ದರ್ಶನ್ ಅವರಿಗೆ ಕಾಲು ನೋವು ಬರುತ್ತಿರುವುದು ಎಂದು ತಿಳಿಸಿದ್ದಾರೆ. ಈ ಎರಡು ಕಾರಣಕ್ಕೆ ಅವರಿಗೆ ವಿಪರೀತ ಕಾಲು ನೋವು ಮತ್ತು ಬೆನ್ನು ನೋವು ಉಂಟಾಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ದರ್ಶನ್ ಅವರ ಆರೋಗ್ಯ ಈ ರೀತಿ ಇರುವಾಗ ಅವರಿಗೆ ಸರ್ಜರಿ ಮಾಡುವುದು ಒಳ್ಳೆಯದಲ್ಲ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲಿ ಮಾಡಿರುವ ಟೆಸ್ಟ್ ರಿಪೋರ್ಟ್ ಗಳನ್ನು ನೋಡಿ ಸಲಹೆ ನೀಡಿದ್ದು, ಫಿಸಿಯೋಥೆರಪಿ ಮಾಡಿಸುವುದು ಜೊತೆಗೆ ಮೆಡಿಸಿನ್ ತೆಗೆದುಕೊಳ್ಳುವುದು ಈ ಎರಡು ಕೆಲಸ ಮಾಡುವುದರಿಂದ ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಹಾಗೆಯೇ ಸ್ವಲ್ಪ ವ್ಯಾಯಾಮ ಮಾಡಬೇಕು ಎಂದು ಸಹ ಹೇಳಿದ್ದಾರೆ. ಡಾಕ್ಟರ್ ಕೊಟ್ಟಿರುವ ಸಲಹೆಯ ಮೇರೆಗೆ ದರ್ಶನ್ ಅವರು ನಡೆದುಕೊಳ್ಳುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ದರ್ಶನ್ ಅವರಿಗೆ ಸಧ್ಯಕ್ಕೆ ಸರ್ಜರಿ ಅಂತೂ ಆಗುವುದಿಲ್ಲ ಎಂದು ತಿಳಿದುಬಂದಿದೆ.

ದರ್ಶನ್ ಅವರಿಗೆ ಪೂರ್ಣ ಪ್ರಮಾಣದಲ್ಲಿ ಜಾಮೀನು ಸಿಗುವುದಕ್ಕಿಂತ ಮೊದಲು ಅವರು ಬಳ್ಳಾರಿ ಜೈಲಿನಲ್ಲಿ ಇದ್ದಾಗ ಇದ್ದಕ್ಕಿದ್ದಂತೆ ತೀವ್ರವಾದ ಬೆನ್ನು ನೋವು ಹಾಗೂ ಕಾಲು ನೋವು ಕಾಣಿಸಿಕೊಂಡಿದ್ದಕ್ಕೆ ಮಧ್ಯಂತರ ಜಾ*ಮೀನು ಪಡೆದು ಹೊರಬಂದಿದ್ದರು. ದರ್ಶನ್ ಅವರಿಗೆ ಸರ್ಜರಿ ಅವಶ್ಯಕತೆ ಇದೆ ಎಂದು ಹೇಳಲಾಗಿತ್ತು. ಆದರೆ ಈಗ ದರ್ಶನ್ ಅವರ ಬೆನ್ನು ಮೂಳೆ ಜರುಗಿರುವ ಕಾರಣ ಅವರಿಗೆ ಸರ್ಜರಿ ಮಾಡಲು ಆಗುವುದಿಲ್ಲ ಎಂದು ತಿಳಿಸಿ, ಬೇರೆಯದೇ ಸಲಹೆ ನೀಡಲಾಗಿದೆ. ಹಾಗೆಯೇ ದರ್ಶನ್ ಅವರು ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಬಗ್ಗೆ ಕೂಡ ಚರ್ಚೆಗಳು ನಡೆಯುತ್ತಿದೆ.
ದರ್ಶನ್ ಅವರ ಸಹೋದರ ದಿನಕರ್ ಅವರು ಈ ಬಗ್ಗೆ ಮಾತನಾಡಿ, ಪೂರ್ತಿ ಸರಿ ಹೋಗುವುದಕ್ಕೆ ಎರಡು ತಿಂಗಳ ಸಮಯ ಬೇಕಾಗಬಹುದು ಎಂದು ಹೇಳಿದ್ದಾರೆ. ಈ ಮಾಹಿತಿಯ ಅನುಸಾರ ದರ್ಶನ್ ಅವರು ಮತ್ತೆ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ಮುಂದಿನ ವರ್ಷ ಫೆಬ್ರವರಿ ತಿಂಗಳಿನಿಂದ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾಟೇರಾ ನಂತರ ದರ್ಶನ್ ಅವರು ಮುಂದಿನ ವರ್ಷ ಡೆವಿಲ್ ಸಿನಿಮಾ ಮೂಲಕ ಅಭಿಮಾನಿಗಳಿಗೆ ಥಿಯೇಟರ್ ನಲ್ಲಿ ದರ್ಶನ ಕೊಟ್ಟು, ಬ್ಲಾಕ್ ಬಸ್ಟರ್ ಸಿನಿಮಾ ನೀಡುವ ಸೂಚನೆ ಇದೆ. ಎಲ್ಲವೂ ಅಂದುಕೊಂಡ ಹಾಗೆ ನಡೆಯುತ್ತದೆಯೇ ಎಂದು ಕಾದು ನೋಡಬೇಕಿದೆ..