ರಾಜ್ಯದಲ್ಲಿ ಪೆನ್ ಡ್ರೈವ್ ಅಂತ ಹೇಳಿದ ತಕ್ಷಣ ನೆನಪಾಗೋದೆ ರೇವಣ್ಣ ಕುಟುಂಬ. ಲೋಕಸಭಾ ಚುನಾವಣಾ ಹೊತ್ತಲ್ಲಿ ಈ ಪೆನ್ ಡ್ರೈವ್ ವಿಚಾರವಾಗಿ ದೊಡ್ಡದಾಗಿ ಸದ್ದು ಮಾಡಿದ್ದ ರೇವಣ್ಣ ಕುಟುಂಬ ತನ್ನ ಮಾನಹಾನಿಯನ್ನು ಕೂಡ ಮಾಡಿಕೊಂಡಿತು. ಮೊಮ್ಮಕ್ಕಳು ಮಾಡಿದ ಮಣ್ಣು ತಿನ್ನೋ ಕೆಲಸಕ್ಕೆ ದೇವೇಗೌಡ್ರು ಕೂಡ ತಲೆತಗ್ಗಿಸುವಂತಾಯ್ತು. ಇಂದಿಗೂ ಕೂಡ ಆ ನೋವಿನಿಂದ ಆಚೆ ಬರಲು ರೇವಣ್ಣಂಗಾಗಲಿ ಅಥವಾ ದೇವೇಗೌಡ್ರಿಗಾಗಲಿ ಆಗುತ್ತಿಲ್ಲ. ಮೊಮ್ಮಕ್ಕಳು ರೇವಣ್ಣ ಎಲ್ಲರೂ ಕೂಡ ಜೈಲುವಾಸ ಮಾಡುವಂಗಾಯ್ತು. ಮಾಜಿ ಪ್ರಧಾನಿಗಳ ಕುಟುಂಬ ಇಂತಹದೊಂದು ದಿನಗಳು ಬರುತ್ತವೆ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ.
ರೇವಣ್ಣ ಕುಟುಂಬ ಮನೆಯಿಂದ ಹೊರ ಬರೋದಕ್ಕೂ ಆಗದೇ ಇರೋ ಸ್ಥಿತಿ ತಲುಪಿದ್ದೂ ಇದೆ. ಸದ್ಯ ಇನ್ನೂ ಕೂಡ ಜೈಲುವಾಸದಲ್ಲೇ ಇರೋ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇನ್ಯಾವಾಗ ಹೊರ ಬರ್ತಾರೋ ಗೊತ್ತಿಲ್ಲ. ಈಗೀಗ ಸೂರಜ್ ರೇವಣ್ಣ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸುತ್ತಿದ್ದಾರೆ. ತಾವು ಮಾಡದ ತಪ್ಪಿಗೆ, ಮೊಮ್ಮಕ್ಕಳು ಮಾಡಿದ ತಪ್ಪಿಗೆ ದೇವೇಗೌಡರು ಇಳಿ ವಯಸ್ಸಿನಲ್ಲಿ ಪರಿತಪಿಸುವಂತಾಗಿದೆ. ಇತ್ತ ರೇವಣ್ಣ ಕೂಡ ಯಾರು ಏನೇ ಕೇಳಿದರೂ ಕಾಲ ಬರುತ್ತೆ ಆಗ ಮಾತನಾಡ್ತೀನಿ ಅನ್ನೋ ಮಾತುಗಳನ್ನ ಹೇಳುತ್ತಲೇ ಇದ್ದಾರೆ.

ಇತ್ತ ರೇವಣ್ಣ ಕುಟುಂಬ ಕೂಡ ಓದಲ್ಲಿ ಬಂದಲ್ಲಿ ಸಮಯದ ಜಪ ಮಾಡ್ತಾ ಇದ್ದಾರೆ. ಒಳ್ಳೆಯ ಸಮಯ ಬಂದೇ ಬರುತ್ತದೆ ಆಗ ಮಾತಾಡ್ತೀವಿ ಎನ್ನುತ್ತಿದ್ದಾರೆ. ಇದರ ಮಧ್ಯೆ ಸೂರಜ್ ರೇವಣ್ಣ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಜೈಲಿಗೆ ಸೇರಿದ್ದ ಪ್ರಜ್ವಲ್ ಇನ್ನೂ ಬಿಡುಗಡೆಯಾಗಿಲ್ಲ. ಸಾಕಷ್ಟು ಕೇಸ್ ಗಳು ಆತನ ಮೇಲೆ ಇವೆ. ಒಂದಲ್ಲ ಒಂದು ಕೇಸ್ ನಂತೆ ಜೈಲುವಾಸ ಅನುಭವಿಸುತ್ತಿದ್ದಾರೆ.
ಇತ್ತ ಸೂರಜ್ ರೇವಣ್ಣ, ಪ್ರಜ್ವಲ್ ಆದಷ್ಟು ಬೇಗ ಹೊರ ಬರ್ತಾನೆ ಅಂತ ಮಾತನಾಡಿದ್ದಾರೆ. ಹಾಸನದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿರುವ ಅವರು, ಪ್ರಜ್ವಲ್ರೇವಣ್ಣ ಅವರು ಇನ್ನೊಂದು ತಿಂಗಳಲ್ಲಿ ಹೊರಗೆ ಬರ್ತಾರೆ, ಏನು ತಲೆಕೆಡೆಸಿಕೊಳ್ಳಬೇಡಿ. ನಾವು, ನೀವು ಎಲ್ಲರೂ ಒಟ್ಟಿಗೆ ಸ್ವಾಗತ ಮಾಡೋಣ.ಇವತ್ತಿಗೆ ಪ್ರಪಂಚ ಮುಗಿದು ಹೋಗಿಲ್ಲ. ಮುಂದಕ್ಕೂ ರಾಜಕೀಯ ಏನು ಅನ್ನೋದು ನನಗೂ ಗೊತ್ತಿದೆ ಅಂತ ತಮ್ಮ ರಾಜಕೀಯ ಶತ್ರುಗಳಿಗೆ ಕುಟುಕಿದ್ದಾರೆ.
ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಚಾಕೇನಹಳ್ಳಿಕಟ್ಟೆ ಗ್ರಾಮದಲ್ಲಿ ಮಾತನಾಡಿರೋ ಸೂರಜ್, ಸಹೋದರ ಮಾಜಿ ಸಂಸದ ಪ್ರಜ್ವಲ್ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯಿಂದ ಎನು ಕಲಿತೀರಾ. ಒಂದು ಸಂಘಟನೆ ಮನೋಭಾವ ನಿಮ್ಮಲ್ಲಿ ಬರಲ್ಲ. ಏನು ಕೆಲಸ ಮಾಡ್ದಲೆ ಹಳ್ಳಿಗಳಲ್ಲಿ ಕೈಬೀಸ್ಕಂಡು ಹೋಗ್ತಾರೆ. ನಾವು ದಿನ ಬೆಳಿಗ್ಗೆ ಆದರೆ ನಿಮ್ಮ ಜೊತೆ ಎಲ್ಲಾ ಕಾರ್ಯಕ್ರಮಗಳನ್ನು ಭಾಗವಹಿಸುತ್ತೇವೆ. ರೇವಣ್ಣ ಅವರು ಎಲ್ಲಾ ಹಳ್ಳಿಗಳಿಗೂ ರಸ್ತೆಗಳನ್ನು ಮಾಡಿದ್ರು. ಈಗೀನ ಜನರೇಷನ್ನಲ್ಲಿ ಎಲ್ಲಾ ಹಳ್ಳಿಗಳಲ್ಲೂ ದೇವಾಲಯ ನಿರ್ಮಾಣ ಮಾಡ್ತಿದ್ದಾರೆ. ನಮ್ಮ ಗ್ರಾಮಕ್ಕೆ ಯಾರು ಹಿತ, ಯಾರು ಅಹಿತ ಅಂತ ಯೋಚನೆ ಮಾಡಬೇಕು ನೀವು. ಶಾಶ್ವತವಾಗಿ ನಿಮ್ಮ ಗ್ರಾಮದ ಕೆಲಸ ಮಾಡಿದವರನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ. ಯುವಕರು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಒಂದು ಕಡೆ ಇರಬೇಕು. ಇನ್ನೊಂದು ನಾಲ್ಕೈದು ತಿಂಗಳಲ್ಲಿ ಸರ್ಕಾರ ಚೇಂಜ್ ಆಗುತ್ತೆ. ಆ ಕಡೆ ಹೋಗಿರುವವರ ಕಥೆ ಏನು ಎಂದು ಕಾಂಗ್ರೆಸ್ ಕಡೆ ಹೋಗುತ್ತಿರೋ ಕಾರ್ಯಕರ್ತರಿಗೆ ಪ್ರಶ್ನೆ ಮಾಡಿದ್ದಾರೆ.
ನಾಲ್ಕೈದು ತಿಂಗಳಲ್ಲಿ ಸರ್ಕಾರ ಬದಲಾವಣೆ ಆಯ್ತು ಅಂದುಕೊಳ್ಳಿ ಆಗ ಬಂದು ಹೆಚ್.ಡಿ.ರೇವಣ್ಣಗೆ ಜೈ ಅಂತಾರೆ, ಇದೇ ಕಥೆ. ಕೆಲವೇ ತಿಂಗಳಲ್ಲಿ ಸರ್ಕಾರ ಬರಲಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ ಸೂರಜ್. ಸದ್ಯ ಅವರ ಮಾತಿನ ಅಷ್ಟೂ ಸಾರಾಂಶ ಸರ್ಕಾರ ಉರುಳುತ್ತದೆ. ತಕ್ಷಣವೇ ಪ್ರಜ್ವಲ್ ಜೈಲಿನಿಂದ ಬರ್ತಾನೆ ಅನ್ನೋದೆ ಆಗಿತ್ತು. ಈ ಮೂಲಕ ಪೆನ್ ಡ್ರೈವ್ ಹಂಚಿದವರಿಗೆ ಮುಂದೆ ಇದೆ ಮಾರಿ ಹಬ್ಬ ಅನ್ನೋ ರೀತಿ ಮಾತನಾಡಿದ್ದಾರೆ.