ಭಾರತ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ಒಬ್ಬರಾದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇದೀಗ ಮತ್ತೊಮ್ಮೆ ಅಭಿಮಾನಿಗಳು ಫಿದಾ ಅಗುವಂಥ ಕೆಲಸ ಮಾಡಿದ್ದಾರೆ. ಹೌದು, ವರ್ಲ್ಡ್ ಚಾಂಪಿಯನ್ ಆಗಿರುವ ಗುಕೇಶ್ ಅವರನ್ನು ಮನೆಗೆ ಕರೆಸಿ, ಅವರ ಕುಟುಂಬದ ಜೊತೆಗೆ ಕೆಲ ಸಮಯ ಕಳೆದಿದ್ದಾರೆ. ಇದೀಗ ರಜನಿಕಾಂತ್ ಅವರು ಗುಕೇಶ್ ಕುಟುಂಬದ ಜೊತೆಗಿರುವ ಫೋಟೋಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಜನಿಕಾಂತ್ ಅವರು ಮಾಡಿರುವ ಈ ಒಂದು ಕೆಲಸಕ್ಕೆ ಅಭಿಮಾನಿಗಳಿಂದ, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಷಯದ ಬಗ್ಗೆ ತಿಳಿಯೋಣ..

ಸೂಪರ್ ಸ್ಟಾರ್ ರಜನಿಕಾಂತ್ ಅವರು ನಮ್ಮೂರಿನವರು ಎನ್ನುವುದು ನಮಗೆ ಹೆಮ್ಮೆಯ ವಿಷಯ. ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಅವರು ಎಂದಿಗೂ ಮರೆತಿಲ್ಲ. ರಜನಿಕಾಂತ್ ಅವರು ಸರಳತೆ ಇಂದಲೇ ಹೆಚ್ಚು ಜನರಿಗೆ ಇಷ್ಟ ಆಗುವ ವ್ಯಕ್ತಿ. ವಿಶ್ವದ ಶ್ರೇಷ್ಠ ನಟರಲ್ಲಿ ಒಬ್ಬರು ಎಂದು ಹೆಸರು ಮಾಡಿದ್ದರು ಸಹ, ಆ ಅಹಂಕಾರ ಅವರಲ್ಲಿ ಸ್ವಲ್ಪವೂ ಇಲ್ಲ. ಜನರ ಜೊತೆಗೆ ಅಷ್ಟೇ ಪ್ರೀತಿಯಿಂದ ಮಾತನಾಡುತ್ತಾರೆ ರಜನಿಕಾಂತ್ ಅವರು. ಹಾಗಾಗಿ ಜನರಿಗೆ ಅವರನ್ನು ಕಂಡರೆ ತುಂಬಾ ಇಷ್ಟ. ಕೆಲವೇ ದಿನಗಳ ಹಿಂದೆ ಭಾರತಕ್ಕೆ ಇನ್ನು ಹೆಸರು ತಂದುಕೊಟ್ಟ ಯುಗಪ್ರತಿಭೆ ಗುಕೇಶ್. ವರ್ಲ್ಡ್ ಚೆಸ್ ಚಾಂಪಿಯನ್ ಆಗಿದ್ದಾರೆ..
ಗುಕೇಶ್ ವಿಶ್ವದ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಆಗಿದ್ದು, ಇದು ಆ ಪುಟ್ಟ ಬಾಲಕನ ಜೀವನದ ಗುರಿ ಆಗಿತ್ತು, ಆ ಗುರಿಯನ್ನ ಸಾಧಿಸಿದ್ದಾನೆ. ಮನಸ್ಸಲ್ಲಿ ಛಲ, ಗುರಿ ಹಾಗೂ ಗುರಿಯ ಕಡೆಗೆ ಪಯಣ ಇದ್ದರೆ, ಬದುಕಿನ ಎಲ್ಲಾ ಕನಸುಗಳು ನನಸಾಗುತ್ತದೆ ಎನ್ನುವುದಕ್ಕೆ ಈ ಹುಡುಗ ಸಾಕ್ಷಿ. ಗುಕೇಶ್ ಮಾಡಿರುವ ಸಾಧನೆ ಈಗಿನ ಮಕ್ಕಳಿಗೆ ಸ್ಪೂರ್ತಿ ಎಂದರೆ ತಪ್ಪಲ್ಲ. ಗುಕೇಶ್ ಬಗ್ಗೆ ಕೆಲವು ದಿನಗಳಿಂದ ಬಹಳಷ್ಟು ಸುದ್ದಿಗಳು ಕೇಳಿಬರುತ್ತಿದೆ. ಈ ಬಾಲಕ ದೇಶಕ್ಕೆ ಹೆಮ್ಮೆ ತಂದು, ತವರಿಗೆ ಮರಳಿದ್ದಾನೆ. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ಗುಕೇಶ್ ಅನ್ನು ಮನೆಗೆ ಕರೆಸಿ, ಶುಭಾಶಯ ತಿಳಿಸಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೌದು, ಇಂದು ರಜನಿಕಾಂತ್ ಅವರ ಮನೆಗೆ ಗುಕೇಶ್ ಭೇಟಿ ನೀಡಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಸ್ ವೈರಲ್ ಆಗಿದೆ. ಗುಕೇಶ್ ಹಾಗೂ ಅವರ ತಂದೆ ತಾಯಿಯನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರು ಚೆನ್ನೈನಲ್ಲಿ ಇರುವ ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ಅವರ ಜೊತೆಗೆ ಸ್ವಲ್ಪ ಸಮಯ ಕಳೆದು, ಮಾತನಾಡಿಸಿ, ಗುಕೇಶ್ ಗೆ ಶಾಲ್ ಹೊದಿಸಿ, ಸನ್ಮಾನ ಮಾಡಿ, ಒಂದು ಆಧ್ಯಾತ್ಮಿಕ ಪುಸ್ತಕವನ್ನು ಸಹ ನೀಡಿದ್ದಾರೆ. ಇದುವರೆಗೂ ಬೇರೆ ಯಾವ ನಟ ಕೂಡ ಮಾಡದ ಈ ಒಂದು ಒಳ್ಳೆಯ ಕೆಲಸವನ್ನು ರಜನಿಕಾಂತ್ ಅವರು ಮಾಡಿದ್ದಾರೆ. ಗುಕೇಶ್ ಅವರಿಗೆ ಈ ಒಂದು ಪ್ರೋತ್ಸಾಹದ ಅವಶ್ಯಕತೆ ಇದೆ.
ರಜನಿಕಾಂತ್ ಅವರು ಈ ಒಂದು ಕೆಲಸ ಮಾಡಿ, ಗುಕೇಶ್ ಗೆ ನೀಡಿರುವ ಪ್ರೋತ್ಸಾಹ ಒಂದಷ್ಟು ಜನರಿಗೆ ಸ್ಪೂರ್ತಿ ಆಗಿದೆ. ಮುಂದೆ ಇನ್ನು ಹೆಚ್ಚಿನ ಮಕ್ಕಳು ದೇಶಕ್ಕೆ ಹೆಮ್ಮೆ ತರುವ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ರಜನಿಕಾಂತ್ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಅವರು ಅಭಿನಯಿಸಿದ ವೇಟೈಯನ್ ಸಿನಿಮಾ ತೆರೆಕಂಡು ಬ್ಲಾಕ್ ಬಸ್ಟರ್ ಆಗಿದೆ. ಕೂಲಿ ಸಿನಿಮಾ ಕೆಲಸಗಳು ನಡೆಯುತ್ತಿದೆ. ಕೂಲಿ ಸಿನಿಮಾದಲ್ಲಿ ರಜನಿಕಾಂತ್ ಅವರ ಜೊತೆಗೆ ಉಪೇಂದ್ರ ಅವರು ನಟಿಸುತ್ತಿರುವುದು ಸಂತೋಷದ ವಿಷಯ ಆಗಿದೆ. ಇನ್ನು ಒಂದೆರಡು ಸಿನಿಮಾಗಳನ್ನು ರಜನಿಕಾಂತ್ ಅವರು ಒಪ್ಪಿಕೊಂಡಿದ್ದಾರೆ.



