ನಟ ಯಶ್ ಅವರು ಈಗ ಟಾಕ್ಸಿಕ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಟಾಕ್ಸಿಕ್ ಸಿನಿಮಾ ಕುರಿತಾದ ಅಪ್ಡೇಟ್ ಗಾಗಿ ಯಶ್ ಅವರ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ವರ್ಷ ಏಪ್ರಿಲ್ ಗೆ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಬೇಕಿತ್ತು, ಆದರೆ ಕೆಲಸಗಳ ತಡೆ ಆಗಿರುವ ಕಾರಣ ಟಾಕ್ಸಿಕ್ ಸಿನಿಮಾ ರಿಲೀಸ್ ಆಗುವುದು ನಿಧಾನ ಆಗಲಿದೆ. ಇನ್ನೆರಡು ದಿನಗಳಲ್ಲಿ ಯಶ್ ಅವರ ಹುಟ್ಟುಹಬ್ಬವಿದೆ. ಶೂಟಿಂಗ್ ಇರುವ ಕಾರಣ ಈ ವರ್ಷ ಸಹ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುವುದಿಲ್ಲ ಎಂದು ಯಶ್ ಅವರು ಅಭಿಮಾನಿಗಳಿಗೆ ಬಹಿರಂಗ ಪತ್ರವನ್ನು ಬರೆದಿದ್ದರು. ಆದರೆ ಇದೀಗ ದಿಢೀರ್ ಎಂದು ಮಂಗಳೂರು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು, ಮಂಗಳೂರು ಏರ್ಪೋರ್ಟ್ ನಲ್ಲಿ ಯಶ್ ಅವರು ಹೊರಗಡೆ ಹೋಗುತ್ತಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ, ಹಾಗೆಯೇ ಮಂಗಳೂರಿಗೆ ಯಶ್ ಅವರು ಬಂದಿರುವುದು ಯಾಕೆ ಎನ್ನುವ ಪ್ರಶ್ನೆ ಸಹ ಶುರುವಾಗಿದೆ. ಟಾಕ್ಸಿಕ್ ಸಿನಿಮಾದ ಒಂದು ಶೆಡ್ಯೂಲ್ ಚಿತ್ರೀಕರಣ ಆಗಿದ್ದು, ಮುಂದಿನ ಚಿತ್ರೀಕರಣಕ್ಕಾಗಿ ಮಂಗಳೂರಿನಲ್ಲಿ ಲೊಕೇಶನ್ ನೋಡೋದಕ್ಕೆ ಯಶ್ ಅವರು ಬಂದಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರಿನ ಯಾವ ಜಾಗ ತಮ್ಮ ಸಿನಿಮಾ ಶೂಟಿಂಗ್ ಗೆ ಸೂಕ್ತವಾಗಿದೆ ಎಂದು ತಿಳಿಯಲು ಯಶ್ ಅವರು ಮಂಗಳೂರಿಗೆ ಬಂದಿದ್ದಾರಂತೆ. ಒಟ್ಟಿನಲ್ಲಿ ಟಾಕ್ಸಿಕ್ ಬಗ್ಗೆ ಹೊಸ ಅಪ್ಡೇಟ್ ಗಳು ಸಿಗುತ್ತಿರುವುದು ಫ್ಯಾನ್ಸ್ ಗೆ ಖುಷಿ ಇದೆ.

ಜನವರಿ 8ರಂದು ಯಶ್ ಅವರ ಹುಟ್ಟುಹಬ್ಬ, ಈ ವಿಶೇಷವಾದ ದಿವಸ ಯಶ್ ಅವರು ಫ್ಯಾನ್ಸ್ ಜೊತೆಗೆ ಇರಲು ಆಗುವುದಿಲ್ಲ ಎನ್ನುವ ಬೇಸರ ಅವರ ಫ್ಯಾನ್ಸ್ ಗೆ ಇದೆ. ಆದರೆ ಟಾಕ್ಸಿಕ್ ಬಗ್ಗೆ ಹೊಸ ಅಪ್ಡೇಟ್ ಸಿಗುತ್ತದೆ ಎಂದು ಕೂಡ ಕಾಯುತ್ತಿದ್ದಾರೆ. ಯಶ್ ಅವರ ಬರ್ತ್ ಡೇ ದಿನ ಟಾಕ್ಸಿಕ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗುತ್ತದೆ ಎನ್ನಲಾಗಿದ್ದು, ಜೊತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಬಹುದು ಎಂದು ಮಾಹಿತಿ ಸಿಕ್ಕಿದೆ. ಇದಕ್ಕಾಗಿ ಯಶ್ ಅವರ ಫ್ಯಾನ್ಸ್ ಎಲ್ಲರೂ ಕಾಯುತ್ತಿದ್ದಾರೆ. ಟಾಕ್ಸಿಕ್ ಇಂದ ಯಶ್ ಅವರು ಗ್ಲೋಬಲ್ ಲೆವೆಲ್ ನಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದು ಸಂತೋಷ ಪಟ್ಟಿದ್ದಾರೆ ಫ್ಯಾನ್ಸ್.
ಇನ್ನು ಮಂಗಳೂರಿಗೆ ಯಶ್ ಅವರು ಲೊಕೇಶನ್ ನೋಡಲು ಬಂದಿದ್ದು ಎಷ್ಟು ಸಮಯ ಇಲ್ಲೇ ಇರುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಹುಟ್ಟುಹಬ್ಬದ ದಿವಸ ಯಾವ ಊರಿನಲ್ಲಿ ಇರುತ್ತಾರೆ ಎನ್ನುವ ಬಗ್ಗೆ ಸಹ ಗೊತ್ತಿಲ್ಲ. ಕಳೆದ ವರ್ಷ ಯಶ್ ಅವರ ಬರ್ತ್ ಡೇ ದಿನ ಕಟೌಟ್ ಹಾಕುವ ವೇಳೆ ವಿದ್ಯುತ್ ಕಂಬಕ್ಕೆ ತಾಗಿ, ಮೂವರು ಅಭಿಮಾನಿಗಳು ಪ್ರಾ*ಣ ಕಳೆದುಕೊಂಡರು. ಈ ಘಟನೆ ಯಶ್ ಅವರ ಮನಸ್ಸಿಗೆ ಕೂಡ ಬಹಳ ನೋವು ತಂದಿತ್ತು, ತಕ್ಷಣವೇ ಫ್ಯಾನ್ಸ್ ಮನೆಗೆ ಬಂದು ಹೋಗಿದ್ದರು ಯಶ್. ಆದರೆ ಈ ವರ್ಷ ಎಲ್ಲಾ ಫ್ಯಾನ್ಸ್ ಹುಷಾರಾಗಿ ಇರಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ..
“ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ.. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಫ್ಲೆಕ್ಸ್..
ಬ್ಯಾನರ್ ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್…” ಎಂದು ಪತ್ರದಲ್ಲಿ ಬರೆದಿದ್ದಾರೆ ಯಶ್.