ಒಂದು ಸಿನಿಮಾ ಜನರ ಮೇಲೆ ಹೇಗೆ ಬೇಕಾದರೂ ಪರಿಣಾಮ ಬೀರಬಹುದು. ಒಂದು ಒಳ್ಳೆಯ ಕಥೆಯನ್ನ ಮನರಂಜನೆಯನ್ನಾಗಿ ಮಾತ್ರ ನೋಡದೇ, ಜನರು ಅದನ್ನು ಬೇರೆ ರೀತಿಯಲ್ಲು ತೆಗೆದುಕೊಳ್ಳಬಹುದು. ಅದರಿಂದ ಸಮಾಜಕ್ಕೆ ಹಾನಿಯು ಆಗಬಹುದು. ಸಿನಿಮಾ ನೋಡಿ ಹಾಗೆ ಮಾಡಿದರು, ಹೀಗೆ ಮಾಡಿದರು ಅನ್ನೋದನ್ನ ನಾವು ಹಲವು ಸಾರಿ ನೋಡುತ್ತೇವೆ, ಕೇಳಿಯು ಇದ್ದೇವೆ. ಇದೀಗ ಇಂಥದ್ದೊಂದು ಘಟನೆ ಮತ್ತೆ ನಡೆದಿದೆ. ಈ ಬಾರಿ ಲಕ್ಕಿ ಭಾಸ್ಕರ್ ಸಿನಿಮಾ ನೋಡಿ ನಡೆದಿರುವ ಘಟನೆ ಇದು.

ಕೆಲವು ಹುಡುಗರು ಸಿನಿಮಾ ನೋಡಿ, ನಾವು ಅದೇ ರೀತಿ ದುಡ್ಡು ಸಂಪಾದನೆ ಮಾಡುತ್ತೇವೆ ಎಂದು ಹಾಸ್ಟೆಲ್ ಬಿಟ್ಟು ಪರಾರಿ ಆಗಿದ್ದಾರೆ.ಹೌದು, ದೀಪಾವಳಿ ಹಬ್ಬದ ಸಮಯಕ್ಕೆ ಬಿಡುಗಡೆ ಆದ ಸಿನಿಮಾ ಲಕ್ಕಿ ಭಾಸ್ಕರ್. ಇದು ತೆಲುಗು ಸಿನಿಮಾ ಆಗಿದ್ದು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಸಹ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿದೆ. ಇದು ಮಲಯಾಳಂ ಸ್ಟಾರ್ ಹೀರೋ ದುಲ್ಕರ್ ಸಲ್ಮಾನ್ ಅವರು ನಾಯಕನಾಗಿ ಅಭಿನಯಿಸಿರುವ ಸಿನಿಮಾ. ಈ ನಟನ ಸಿನಿಮಾ ಯಾವಾಗಲೂ ಸಹ ನಿಜ ಜೀವನಕ್ಕೆ ಬಹಳ ಹತ್ತಿರವಾಗಿ ಇರುತ್ತದೆ. ಹಾಗಾಗಿ ಜನರು ಬಹಳ ಬೇಗ ಕನೆಕ್ಟ್ ಆಗುತ್ತಾರೆ. ಹಾಗೆಯೇ ಇವರು ಆಯ್ಕೆ ಮಾಡುವ ಕಥೆಗಳು ಜನರಿಗೆ ಉತ್ತಮವಾದ ಮನರಂಜನೆ ಕೂಡ ಕೊಡುತ್ತದೆ. ಇದಂತೂ ಸತ್ಯವಾದ ಮಾತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಲಕ್ಕಿ ಭಾಸ್ಕರ್ ಸಹ ಇಂಥದ್ದೇ ಒಂದು ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ಸಾಮಾನ್ಯ ಬ್ಯಾಂಕ್ ಉದ್ಯೋಗಿ ಆಗಿರುವ ಭಾಸ್ಕರ್, ಬುದ್ಧಿವಂತಿಕೆ ಇಂದ ಚಾಣಾಕ್ಷತನದಿಂದ ಕೋಟ್ಯಾಧಿಪತಿ ಆಗುತ್ತಾನೆ. ತನ್ನ ಫ್ಯಾಮಿಲಿ ಗಾಗಿ ಸಾಕಷ್ಟು ರಿಸ್ಕ್ ಗಳನ್ನು ತೆಗೆದುಕೊಳ್ಳುತ್ತಾನೆ. ಈ ಕಥೆ ಮಧ್ಯಮ ವರ್ಗದ ಎಲ್ಲರಿಗೂ ಇಷ್ಟವಾಗುವ, ಕನೆಕ್ಟ್ ಆಗುವ ಕಥೆ ಆಗಿದೆ. ಸಿನಿಮಾ ಈಗಾಗಲೇ 100 ಕೋಟಿಗಿಂತ ಹೆಚ್ಚು ಹಣ ಗಳಿಸಿ, ಓಟಿಟಿ ಗೆ ಬಂದಿದ್ದಾಗಿದೆ. ಆದರೆ ಇವತ್ತಿಗೂ ಥಿಯೇಟರ್ ನಲ್ಲಿ ಈ ಸಿನಿಮಾ ಹವಾ ಕಡಿಮೆ ಆಗಿಲ್ಲ. ಜನರು ಬಹಳ ಇಷ್ಟಪಟ್ಟು ಲಕ್ಕಿ ಭಾಸ್ಕರ್ ಸಿನಿಮಾ ನೋಡುತ್ತಿದ್ದಾರೆ. ಹಾಗೆಯೇ ಈಗ ಒಂದು ವಿವಾದಕ್ಕೂ ಈ ಸಿನಿಮಾ ಕಾರಣ ಆಗಿದೆ.
BREAKING – Four 9th-grade students from St. Ann's High School, Visakhapatnam, escaped their hostel after watching @dulQuer's #LuckyBaskhar, they told their friends they would return after earning money to buy cars and houses, inspired by #DulquerSalmaan's character in the film pic.twitter.com/X4iUa6bjc9
— Daily Culture (@DailyCultureYT) December 10, 2024
ಲಕ್ಕಿ ಭಾಸ್ಕರ್ ಸಿನಿಮಾವನ್ನು ಮನರಂಜನೆಗಾಗಿ ಮಾಡಿದ್ದಾರೆ. ಆದರೆ ಈ ಸಿನಿಮಾ ಈಗ ಬೇರೆ ರೀತಿಯದ್ದೇ ಪರಿಣಾಮ ಬೀರಿದೆ. ಒಂದು ಹಾಸ್ಟೆಲ್ ನ ಕೆಲವು ಹುಡುಗರು ಲಕ್ಕಿ ಭಾಸ್ಕರ್ ಸಿನಿಮಾ ನೋಡಿ, ನಾವು ಕೂಡ ಭಾಸ್ಕರ್ ರೀತಿ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿಕೊಂಡು ವಾಪಸ್ ಬರುತ್ತೇವೆ ಎಂದು ಹೇಳಿ, ಹಾಸ್ಟೆಲ್ ಬಿಟ್ಟು ಓಡಿ ಹೋಗಿದ್ದಾರೆ. ಹಾಸ್ಟೆಲ್ ಇಂದ ಈ ಹುಡುಗರು ಕಾಂಪೌಂಡ್ ಹಾರಿ ಓಡಿ ಹೋಗುತ್ತಿರುವ ವಿಡಿಯೋ ಸಿಸಿಟಿವಿ ನಲ್ಲಿ ರೆಕಾರ್ಡ್ ಆಗಿದೆ. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದು ಸಿನಿಮಾ ಜನರ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವುದನ್ನು ತೋರಿಸುತ್ತಿದೆ.
ಮಕ್ಕಳು ಯಾಗ ವಿಚಾರವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಿನಿಮಾ ಅನ್ನೋದು ಒಂದು ಮನರಂಜನೆಯ ಮಾಧ್ಯಮ ಮಾತ್ರ, ಒಂದು ಸಿನಿಮಾವನ್ನು ಅದೇ ರೀತಿಯಲ್ಲಿ ನಾವು ನೋಡಬೇಕು. ಇದನ್ನು ತಂದೆ ತಾಯಿ ಆದವರು ಮಕ್ಕಳಿಗೆ ಕಲಿಸಬೇಕು. ಈ ರೀತಿ ಮಕ್ಕಳು ಹಾಸ್ಟೆಲ್ ಇಂದ ಓಡಿ ಹೋಗಿರುವುದು, ಅವರ ಕುಟುಂಬದವರಿಗೆ ಮತ್ತು ಹಾಸ್ಟೆಲ್ ನವರಿಗೆ ಶಾಕ್ ನೀಡಿದೆ. ಮಕ್ಕಳನ್ನು ಆದಷ್ಟು ಬೇಗ ಹುಡುಕಿ ಕರೆತರಬೇಕಿದೆ. ಒಟ್ಟಿನಲ್ಲಿ ಸಿನಿಮಾ ಪರಿಣಾಮ ಎಷ್ಟು ದೊಡ್ಡ ಮಟ್ಟಕ್ಕೆ ಇರುತ್ತದೆ ಎನ್ನುವುದು ಇಲ್ಲಿ ಅರ್ಥವಾಗುತ್ತದೆ.