ಕನ್ನಡತಿ ಶ್ರೀಲೀಲಾ ತೆಲುಗು ನೆಲದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ತೆಲುಗಿನ ಸ್ಟಾರ್ ನಟರೊಂದಿಗೆ ನಟಿಸುತ್ತಿರುವ ಶ್ರೀಲೀಲಾ ತೆಲುಗಿನ ನಟಿಯರಿಗಿಂತ ಅಲ್ಲಿ ಹೆಚ್ಚು ಫೇಮಸ್. ನಟನಾ ಜರ್ನಿಯ ಉತ್ತುಂಗದಲ್ಲಿರುವ ಶ್ರೀಲೀಲಾ ಸದ್ಯ ಶೋಲ್ಡರ್ಲೆಸ್ ಡ್ರೆಸ್ ಫೋಟೋ ಶೇರ್ ಮಾಡುವ ಮೂಲಕ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಬಳುಕುವ ಬಳ್ಳಿಯಂತೆ ಶ್ರೀಲೀಲಾ ಕಂಗೊಳಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


ಪಿಂಕ್ ಮತ್ತು ಬ್ಲ್ಯಾಕ್ ಮಿಶ್ರಿತ ಶೋಲ್ಡರ್ಲೆಸ್ ಡ್ರೆಸ್ನಲ್ಲಿ ಕಿಸ್ ಬೆಡಗಿ ಶ್ರೀಲೀಲಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚೆಂದದ ಡ್ರೆಸ್ಗೆ ಸಿಂಪಲ್ ಜ್ಯುವೆಲ್ಲರಿ ಹಾಕಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಗ್ಲ್ಯಾಮರಸ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದು, ನೆಚ್ಚಿನ ನಟಿಯ ಸುಂದರವಾದ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಲೀಲಾ ಹಂಚಿಕೊಂಡಿರುವ ಈ ಫೋಟೋಗಳು ಸಾಕಷ್ಟು ವೀಕ್ಷಣೆ ಪಡೆಯುತ್ತಿದೆ.
ಇತ್ತೀಚೆಗೆ ದುಬೈನಲ್ಲಿ ಸೈಮಾ ಅವಾರ್ಡ್-2023 ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಈ ಸಮಾರಂಭದಲ್ಲಿ ಶ್ರೀಲೀಲಾ ಕೂಡ ಭಾಗಿಯಾಗಿದ್ದರು. ತೆಲುಗಿನ ‘ಧಮಾಕಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ಬೆಸ್ಟ್ ನಟಿ ಎಂದು ಶ್ರೀಲೀಲಾಗೆ ಪ್ರಶಸ್ತಿ ಲಭಿಸಿದೆ. ಇದೇ ವೇಳೆ ಶ್ರೀಲೀಲಾ ಕ್ಯಾಮರಾಗೆ ಫೋಸ್ ಕೊಟ್ಟಿದ್ದು, ಅದೇ ಫೋಟೋಗಳು ಇದೀಗ ವೈರಲ್ ಆಗಿವೆ. ಸದ್ಯ, ತೆಲುಗಿನಲ್ಲಿ ಶ್ರೀಲೀಲಾ ಬರೋಬ್ಬರಿ 9 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.