ಟಿಕ್ ಟಾಕ್, ರೀಲ್ಸ್, ಬಿಗ್ ಬಾಸ್ ಮೂಲಕ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿಕೊಂಡ ಸೋನು ಗೌಡ ಕೆಲ ದಿನಗಳ ಹಿಂದಷ್ಟೇ ಮಾಲ್ಡೀವ್ಸ್ಗೆ ಹಾರಿ ಎಂಜಾಯ್ ಮಾಡಿದ್ದರು. ಹಾಟ್ ಹಾಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಖತ್ ಸೌಂಡ್ ಮಾಡಿದ್ದರು. ಇದೀಗ ಸೋನು ಗೌಡ ಮತ್ತೆ ಬೋಲ್ಡ್ ಫೋಟೋಶೂಟ್ ನಡೆಸಿದ್ದು, ಬಿಕಿನಿ ಬಿಟ್ಟು ಚಡ್ಡಿಯಲ್ಲಿ ಕಂಗೊಳಿಸಿದ್ದಾರೆ. ಈ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.


ಸೋನು ಗೌಡ ಒಂದರ ಮೇಲೊಂದು ಫೋಟೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಆ ಫೋಟೋಗಳು ಕೂಡ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ನೆಗೆಟಿವ್ ಕಾಮೆಂಟ್ ಗಳ ಮಹಾಪುರವೇ ಹರಿದು ಬರುತ್ತಿವೆ. ಇಂತಹ ಕಾಮೆಂಟ್ ಗಳಿಗೆ ಉತ್ತರ ಕೊಡುವಂತೆ ಮತ್ತೊಂದು ಫೋಟೋ ಈ ಹಿಂದೆ ಶೇರ್ ಮಾಡಿದ್ದರು. ಆ ಫೋಟೋದಲ್ಲಿ ಅವರು ಹಳದಿ ಸೀರೆ ತೊಟ್ಟಿದ್ದರು. ಆ ಮೂಲಕ ಟ್ರೋಲಿಗರಿಗೆ ಸೋನು ಗೌಡ ಖಡಕ್ ಎದುರುತ್ತರ ನೀಡಿದ್ದರು.
ಕೆಲ ದಿನಗಳ ಹಿಂದಷ್ಟೇ ಮಾಲ್ಡೀವ್ಸ್ ವೆಕೇಷನ್ ಎಂಜಾಯ್ ಮಾಡಲು ತೆರಳಿದ್ದ ಸೋನು ಗೌಡ, ಆ ವಿವರವನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ದರು. ಒಳ ಉಡುಪಿನ ಫೋಟೋ ಶೇರ್ ಮಾಡಿ ವಿಚಿತ್ರ ಪೋಸ್ ಕೊಟ್ಟಿದ್ದ ನಟಿ ಬಿಕಿನಿ ಫೋಟೋ ಕೂಡ ಶೇರ್ ಮಾಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ಇದೀಗ ಮತ್ತೆ ಬೀಚ್ ಬದಿಯಲ್ಲಿ ಹಾಟ್ ಆಗಿ ಸೋನು ಕಂಗೊಳಿಸಿದ್ದು, ಈ ವೈರಲ್ ಫೋಟೋಗಳನ್ನು ಕಂಡು ಪಡ್ಡೆ ಹುಡುಗರು ನಿದ್ದೆ ಗೆಟ್ಟಿದ್ದಾರೆ.