ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಗಳಲ್ಲಿ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಸಹ ಒಂದು ಜೋಡಿ. ಇವರಿಬ್ಬರು ಲವ್ ಮಾಡಿ ಮದುವೆಯಾದವರು. ಮದುವೆ ಸಮಯದ ವರೆಗು ಕೂಡ ಈ ಜೋಡಿ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಒಂದು ಸಣ್ಣ ಸುಳಿವನ್ನು ಸಹ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಇವರಿಬ್ಬರ ಮದುವೆ ಹತ್ತಿರ ಬರುತ್ತಿದೆ ಎನ್ನುವಾಗ ಈ ಸುದ್ದಿ ರಿವೀಲ್ ಮಾಡಿದ್ದರು. ಜೋಡಿ ಸಹ ಚೆನ್ನಾಗಿದೆ, ಇಬ್ಬರು ಒಳ್ಳೆಯ ಕಲಾವಿದರು, ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗ ಸಹ ಇದೆ. ಇದೀಗ ಈ ಜೋಡಿ ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡೋದಕ್ಕೆ ರೆಡಿ ಆಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಹೌದು, ಇತ್ತೀಚೆಗೆ ದೀಪಾವಳಿ ಹಬ್ಬದ ದಿವಸ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ತಾವಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು. ಇವರಿಬ್ಬರು ಮೊದಲಿಗೆ ಫೋಟೋಶೂಟ್ ಮಾಡಿಸಿದ್ದು ಮಾಲ್ಡವ್ಸ್ ನಲ್ಲಿ. ಕೆಲ ದಿನಗಳ ಹಿಂದಷ್ಟೇ ಈ ಒಂದು ಫೋಟೋಶೂಟ್ ಮಾಡಿಸಿ, ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಇದೀಗ ಮತ್ತೊಮ್ಮೆ ಫೋಟೋಶೂಟ್ ಮಾಡಿಸಿದ್ದಾರೆ. ಈ ಬಾರಿ ವಿಭಿನ್ನವಾಗಿ ಮತ್ತು ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದು, ಇದನ್ನು ನೋಡಿ ಅವರಿಬ್ಬರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇಬ್ಬರು ಸಹ, ಬಿಳಿ ಮತ್ತು ನೀಲಿ ಈ ಎರಡು ಬಣ್ಣಗಳ ಡ್ರೆಸ್ ಧರಿಸಿ, ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳಲ್ಲಿ ಹರಿಪ್ರಿಯಾ ಅವರ ಬೇಬಿ ಬಂಪ್ ಕಾಣಬಹುದು. ಈ ಸುಂದರವಾದ ಫೋಟೋಗಳನ್ನು ಇಬ್ಬರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫೋಟೋಸ್ ನೋಡಿದ ಫ್ಯಾನ್ಸ್ ಇಬ್ಬರಿಗೂ ಶುಭಾಶಯ ತಿಳಿಸಿದ್ದಾರೆ. ಇವರಿಬ್ಬರ ಜೋಡಿ ಮೇಲೆ ಯಾರ ದೃಷ್ಟಿ ಕೂಡ ಬೀಳದೇ ಇರಲಿ ಎಂದು ವಿಶ್ ಮಾಡಿದ್ದಾರೆ. ಹಾಗೆಯೇ ಮಗು ಹಾಗೂ ತಾಯಿ ಇಬ್ಬರು ಆರೋಗ್ಯವಾಗಿರಲಿ ಎಂದು ಹರಸಿದ್ದಾರೆ ನೆಟ್ಟಿಗರು.
ಹರಿಪ್ರಿಯಾ ಅವರು ಮದುವೆಯಾದ ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅದಕ್ಕಿಂತ ಮೊದಲು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ಹೀರೋಯಿನ್ ಎನ್ನಿಸಿಕೊಂಡವರು. ಕನ್ನಡದ ಸ್ಟಾರ್ ಹೀರೋಗಳ ಜೊತೆಗೆ ಸಿನಿಮಾಗಳನ್ನು ಮಾಡಿ, ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಸ್ಥಾನ ಗಳಿಸಿಕೊಂಡವರು ಹರಿಪ್ರಿಯಾ. ಸುದೀಪ್ ಅವರ ಜೊತೆಗೆ ರನ್ನ, ರಕ್ಷಿತ್ ಶೆಟ್ಟಿ ಅವರ ಜೊತೆಗೆ ರಿಕ್ಕಿ, ಲೈಫ್ ಜೊತೆ ಒಂದ್ ಸೆಲ್ಫಿ, ಕನ್ನಡ್ ಗೊತ್ತಿಲ್ಲ, ಡಾಟರ್ ಆಫ್ ಪಾರ್ವತಮ್ಮ ಸೇರಿದಂತೆ ಸಾಕಷ್ಟು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ವಸಿಷ್ಠ ಸಿಂಹ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ..
ರಾಜಾಹುಲಿ ಸಿನಿಮಾದಲ್ಲಿ ಯಶ್ ಅವರ ಫ್ರೆಂಡ್, ಮುಖ್ಯ ಪಾತ್ರದಲ್ಲಿ ನಟಿಸಿದ ವಸಿಷ್ಠ ಸಿಂಹ ಅವರು ಅದ್ಭುತ ಅಭಿನಯ ನೀಡಿದರು, ಮೊದಲಿಗೆ ರಾಜಾಹುಲಿ, ಕೆಜಿಎಫ್, ಟಗರು ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಲ್ಲನ್ ಪಾತ್ರದಲ್ಲಿ ಹೆಚ್ಚು ನಟಿಸಿದ ವಸಿಷ್ಠ ಸಿಂಹ ಅವರು, ಬಳಿಕ ಹೀರೋ ಆಗಿ ಸಹ ಗುರುತಿಸಿಕೊಂಡಿದ್ದಾರೆ. ಇವರು ಒಳ್ಳೆಯ ಗಾಯಕ ಸಹ ಹೌದು. ಇಂಥ ಇಬ್ಬರು ಅದ್ಭುತ ವ್ಯಕ್ತಿಗಳು ಪ್ರೀತಿಸಿ ಮದುವೆಯಾದರು. ಬಹಳ ಪ್ರೀತಿಯಿಂದ ಜೀವನ ಸಾಗಿಸುತ್ತಿರುವ ಈ ಜೋಡಿ, ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇವರಿಬ್ಬರಿಗೆ ಒಳ್ಳೆಯದಾಗಲಿ