ನೆನಪಿರಲಿ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಕಲಾವಿದರು. ನೆನಪಿರಲಿ ಸಿನಿಮಾ ಮೂಲಕ 15 ವರ್ಷಗಳ ಹಿಂದೆ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯವಾದ ಇವರು, ಮೊದಲ ಸಿನಿಮಾದಲ್ಲೇ ಲವರ್ ಬಾಯ್ ಆಗಿ ಹುಡುಗಿಯರ ಫೇವರೆಟ್ ನಟ ಆಗಿದ್ದರು. ಪ್ರೇಮ್ ಅವರು ನಂತರ ನಟಿಸಿದ ಸಿನಿಮಾಗಳು ತಕ್ಕಮಟ್ಟಿಗೆ ಸದ್ದು ಮಾಡಿವೆ, ಆದರೆ ಸೂಪರ್ ಹಿಟ್ ಆಗಿಲ್ಲ. ಆದರೆ ಇವರೊಬ್ಬ ಉತ್ತಮವಾದ ನಟ ಎನ್ನುವುದು ಸುಳ್ಳಂತೂ ಅಲ್ಲ. ಪ್ರೇಮ್ ಅವರ ಅಭಿನಯ ಚಾತುರ್ಯತೆಗೆ ಇನ್ನು ಒಳ್ಳೇ ಪಾತ್ರಗಳು ಸಿಕ್ಕರೆ ಅವರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಇನ್ನು ನಿನ್ನೆಯಷ್ಟೇ ಪ್ರೇಮ್ ಅವರ ಹುಟ್ಟುಹಬ್ಬ ನಡೆದಿದೆ. ಈ ವರ್ಷ ಪ್ರೇಮ್ ಅವರು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಪ್ರೇಮ್ ಅವರು ಈಗ ನೋಡೋಕೆ ಎಷ್ಟು ಚೆನ್ನಾಗಿದ್ದಾರೆ, ಯಂಗ್ ಆಗಿದ್ದಾರೆ ಅಂದ್ರೆ ಅವರಿಗೆ ಇದು 50ನೇ ವರ್ಷದ ಹುಟ್ಟುಹಬ್ಬ ಎಂದು ಹೇಳೋಕೆ ಆಗೋದಿಲ್ಲ. ಅಷ್ಟು ಯಂಗ್ ಆಗಿ ಕಾಣುತ್ತಾರೆ, ಯಂಗ್ ಆಗಿ ಇದ್ದಾರೆ. ಪ್ರೇಮ್ ಅವರ ಮಗಳು ಅಮೃತಾ ಪ್ರೇಮ್ ಅವರು ಸಹ ಈಗಾಗಲೇ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ ವರ್ಷ ತೆರೆಕಂಡ, ಡಾಲಿ ಧನಂಜಯ್ ಅವರು ನಿರ್ಮಾಣ ಮಾಡಿ, ನಾಗಭೂಷಣ್ ಅವರು ನಾಯಕನಾಗಿ ನಟಿಸಿದ ಟಗರು ಪಲ್ಯ ಸಿನಿಮಾದಲ್ಲಿ ಅಮೃತಾ ಪ್ರೇಮ್ ನಾಯಕಿಯಾಗಿ ಪರಿಚಯವಾದರು. ಇವರ ಪಾತ್ರ ಜನರಿಗೆ ಸಖತ್ ಇಷ್ಟವಾಗಿತ್ತು. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಮೂಲಕ ಅಮೃತಾ ಪ್ರೇಮ್ ಅವರು ನಾಯಕಿಯಾಗಿ ಅಭಿನಯಿಸಿ, ಪರಿಚಯವಾಗಿದ್ದು, ನಿಜಕ್ಕೂ ವಿಶೇಷ ಎಂದು ಹೇಳಿದರೆ ತಪ್ಪಲ್ಲ.

ಅಮೃತಾ ಪ್ರೇಮ್ ಗೆ ಆ ಸಿನಿಮಾ ಇಂದ ಒಳ್ಳೆಯ ಯಶಸ್ಸು ಸಿಕ್ಕಿತು. ಮಗಳಿಗೆ ಯಶಸ್ಸು ಸಿಕ್ಕಿದೆ, ಮಗ ಇನ್ನೇನು ಕೆಲವೆ ವರ್ಷಗಳಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾನೆ. ಆದರೆ ಪ್ರೇಮ್ ಅವರು ಈಗಲೂ ಅಷ್ಟು ದೊಡ್ಡ ಮಕ್ಕಳಿರುವ ತಂದೆಯ ಹಾಗೆ ಕಾಣಿಸುವುದಿಲ್ಲ, ಅಷ್ಟು ಯಂಗ್ ಆಗಿ ಕಾಣುತ್ತಾರೆ. ನಿನ್ನೆ ಇವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ, ವಿಶೇಷವಾಗಿ ಸೆಲೆಬ್ರೇಟ್ ಮಾಡುವುದಕ್ಕೆ ಅಭಿಮಾನಿಗಳು ಪ್ರೇಮ್ ಅವರ ಮನೆಯ ಮುಂದೆ ಬಂದಿದ್ದರು. ಫ್ಯಾನ್ಸ್ ಜೊತೆಗೆ ಸಂತೋಷದಿಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ನಟ ಪ್ರೇಮ್. ಆದರೆ ಪ್ರೇಮ್ ಅವರ ಹುಟ್ಟುಹಬ್ಬದ ದಿನವೇ ಅವರಿಗೆ ಶಾ*ಕ್ ಆಗುವಂಥ ಘಟನೆ ಒಂದು ನಡೆದಿದೆ. ಕನ್ನಡ ಕಿರುತೆರೆಯ ಖ್ಯಾತ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಹುಟ್ಟುಹಬ್ಬ ದಿನವೇ ಲೀಗಲ್ ನೋಟಿಸ್ ಕಳಿಸಿದ್ದಾರೆ..

ಅಷ್ಟಕ್ಕೂ ಶ್ರುತಿ ನಾಯ್ಡು ಅವರು ಪ್ರೇಮ್ ಅವರ ಬಗ್ಗೆ ಕೋಪ ಮಾಡಿಕೊಂಡಿರುವುದು ಯಾಕೆ? ಆಗಿದ್ದಾದರೂ ಏನು ಎಂದು ನೋಡುವುದಾದರೆ.. ಪ್ರೇಮ್ ಅವರ ಹುಟ್ಟುಹಬ್ಬಕ್ಕೆ ಅವರ ಮುಂದಿನ ಸಿನಿಮಾ ಚಿತ್ರತಂಡ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ, ರಿಲೀಸ್ ಮಾಡಿದೆ. ಇದು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅವರು ನಾಯಕನಾಗಿ ನಟಿಸುತ್ತಿರುವ ಸ್ಪಾರ್ಕ್ ಸಿನಿಮಾದ ಪೋಸ್ಟರ್ ಆಗಿದೆ. ಈ ಸಿನಿಮಾದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆ ಆಗಿತ್ತು, ಸಿನಿಮಾದಲ್ಲಿ ನಿರಂಜನ್ ಅವರದ್ದು ಜರ್ನಲಿಸ್ಟ್ ಪಾತ್ರ ಆಗಿದ್ದು, ಕ್ರಾಂತಿಕಾರಿ ಸಿನಿಮಾ ಇದಾಗಿದೆ. ಮೊದಲ ಲುಕ್ ಇಂದಲೇ ಸ್ಪಾರ್ಕ್ ಸಿನಿಮಾ ಎಲ್ಲರಲ್ಲಿ ಕುತೂಹಲ ಮೂಡಿಸಿತ್ತು. ಈ ಸಿನಿಮಾದಲ್ಲಿ ಪ್ರೇಮ್ ಅವರು ವಿಶೇಷವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರೇಮ್ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಹೆಚ್ಚಿಸಿದೆ. ಈ ಪೋಸ್ಟರ್ ನಲ್ಲಿ ಪ್ರೇಮ್ ಅವರ ಲುಕ್ ವಿಭಿನ್ನವಾಗಿದೆ ನೆಗಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿದೆ. ಕೈಯಲ್ಲಿ ಸಿಗರೇಟ್ ಹಿಡಿದು, ಅದಕ್ಕೆ ಬೆಂಕಿ ಹಚ್ಚಿಸಿಕೊಳ್ಳುತ್ತಿರುವ ರೀತಿಯಲ್ಲಿ ಇದೆ ಅವರ ಪೋಸ್ಟರ್. ಪ್ರೇಮ್ ಅವರು ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಮ್ ಅವರ ಈ ಪೋಸ್ಟರ್ ಈಗ ವಿವಾದಕ್ಕೆ ಕಾರಣವಾಗಿದೆ. ಅದು ಅವರ ಕೈಯಲ್ಲಿರುವ ನ್ಯೂಸ್ ಪೇಪರ್ ಇಂದ. ಪ್ರೇಮ್ ಅವರ ಕೈಯಲ್ಲಿರುವ ನ್ಯೂಸ್ ಪೇಪರ್ ಅನ್ನು ಸುಟ್ಟು, ಅದರಿಂದ ಬರುತ್ತಿರುವ ಬೆಂಕಿ ಇಂದ ಸಿಗರೇಟ್ ಹತ್ತಿಸಿಕೊಳ್ಳುತ್ತಿದ್ದಾರೆ. ಆ ನ್ಯೂಸ್ ಪೇಪರ್ ಕಟಿಂಗ್ ನಲ್ಲಿ ಇರುವುದು ರಮೇಶ್ ಇಂದಿರಾ ಅವರು. ಇವರು ಶ್ರುತಿ ನಾಯ್ಡು ಅವರ ಪತಿ.
ರಮೇಶ್ ಇಂದಿರಾ ಅವರು ಕಿರುತೆರೆಯಲ್ಲಿ ನಿರ್ದೇಶಕನಾಗಿ ಮತ್ತು ನಟನಾಗಿ ಗುರುತಿಸಿಕೊಂಡಿದ್ದಾರೆ. ಇವರ ಪಾತ್ರಗಳು ಜನರಿಗೆ ಸಖತ್ ಇಷ್ಟವಾಗಿದೆ. ರಮೇಶ್ ಇಂದಿರಾ ಅವರು ಪಾತ್ರಗಳ ಜೊತೆ ಎಕ್ಸ್ಪೆರಿಮೆಂಟ್ ಮಾಡುತ್ತಿದ್ದಾರೆ ಎಂದರೆ ತಪ್ಪಲ್ಲ.ಆದರೆ ಇವರ ಫೋಟೋವನ್ನು ಪ್ರೇಮ್ ಅವರ ಸಿನಿಮಾ ಪೋಸ್ಟರ್ ನಲ್ಲಿ ಬಳಸಲಾಗುತ್ತಿದೆ ಎನ್ನುವುದು ಶ್ರುತಿ ನಾಯ್ಡು ಅವರಿಗೆ ಕೋಪ ಬಂದಿದ್ದು, ಅದು ಬೇರೆ ಸಿನಿಮಾದ ಫೋಟೋ, ನಟನ ಅನುಮತಿ ಇಲ್ಲದೇ ಫೋಟೋ ಬಳಸಲಾಗಿದೆ, ಲೀಗಲ್ ನೋಟಿಸ್ ಕಳಿಸುತ್ತೇನೆ ಎಂದು ಶ್ರುತಿ ನಾಯ್ಡು ಅವರು ಪೋಸ್ಟ್ ಮಾಡಿದ್ದಾರೆ.. “ಎಲ್ಲರಿಗೂ ನಮಸ್ಕಾರ, ಈ ಚಿತ್ರ ತಂಡದವರು ತುಂಬಾ ಅನೈತಿಕತೆ ತೋರಿದ್ದಾರೆ, ಈ ಚಿತ್ರದ ಪೋಸ್ಟರ್ ನಲ್ಲಿ ಪತ್ರಿಕೆಯ ಕಟಿಂಗ್ ನಲ್ಲಿರುವ ನಟನ ಅನುಮತಿ ಪಡೆಯದೇ ಅವರ ಫೋಟೋ ಬಳಸಿ ಸುದ್ದಿ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ.
ಈ ವಿಚಾರದ ಬಗ್ಗೆ ಚಿತ್ರತಂಡದ ಯಾರು ಕೂಡ ಕಾಳಜಿ ವಹಿಸಿಲ್ಲ. ಪೋಸ್ಟರ್ ನಲ್ಲಿರುವ ಫೋಟೋ ಶ್ರೀ ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ಭೀಮಾ ಚಿತ್ರದ್ದಾಗಿದೆ, ಈ ಫೋಟೋವನ್ನು ಭೀಮಾ ಚಿತ್ರಕ್ಕಾಗಿ ತೆಗೆದದ್ದು. ರಮೇಶ್ ಇಂದಿರಾ ಪರವಾಗಿ ಈ ಚಿತ್ರ ತಂಡ ಮತ್ತು ನಟ ನೆನಪಿರಲಿ ಪ್ರೇಮ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗುತ್ತದೆ..” ಎಂದು ಶ್ರುತಿ ನಾಯ್ಡು ಅವರು ಬರೆದುಕೊಂಡಿದ್ದು, ಪ್ರೇಮ್ ಅವರಿಗೆ ಹುಟ್ಟುಹಬ್ಬದ ದಿನವೇ ಶ್ರುತಿ ನಾಯ್ಡು ಅವರು ಗರಂ ಆಗಿ ನೋಟಿಸ್ ಕಳಿಸಿರುವುದು ಆತಂಕ ತಂದಿದೆ.