ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಹಿನ್ನಲೆ ಗಾಯಕಿಯಾಗಿ ಸಾಕಷ್ಟು ಯಶಸ್ಸನ್ನು ಗಳಿಸಿದವರಲ್ಲಿ ಮಧು ಪ್ರಿಯಾ ಕೂಡ ಒಬ್ಬರು. ಕೆರಿಯರ್ ವಿಷಯದಲ್ಲಿ ತುಂಬಾ ಬ್ಯುಸಿಯಾಗಿರುವ ಮಧುಪ್ರಿಯಾ ಇತ್ತೀಚೆಗೆ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದು ನಮಗೆ ಗೊತ್ತೇ ಇದೆ. ಈ ವಿವಾದದಿಂದಾಗಿ ಆಕೆಯನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಇದೀಗ ಒತ್ತಾಯಿಸಲಾಗಿದೆ.
ಆಗಿದ್ದಿಷ್ಟು…
ಪ್ರವೇಟ್ ಆಲ್ಬಂ ಮಾಡುವಲ್ಲಿ ಬ್ಯುಸಿಯಾಗಿರುಗಿರುವ ಮಧುಪ್ರಿಯಾ ಇತ್ತೀಚೆಗೆ ಭೂಪಾಲಪಲ್ಲಿ ಜಿಲ್ಲೆಯ ಕಾಳೇಶ್ವರ ಮುಕ್ತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಚಿತ್ರೀಕರಣ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ದೇವಸ್ಥಾನದಲ್ಲಿ ಸ್ವಾಮಿಯ ಫೋಟೊ, ವಿಡಿಯೋ ತೆಗೆಯಲು ಭಕ್ತರಿಗೆ ಅವಕಾಶವಿಲ್ಲ. ಸಾಮಾನ್ಯವಾಗಿ ದೇವಸ್ಥಾನದಲ್ಲಿ ಚಿತ್ರೀಕರಣಕ್ಕೆ ಅವಕಾಶ ಇರುವುದಿಲ್ಲ. ಗರ್ಭಗುಡಿಯಲ್ಲಿರುವ ದೇವರ ಫೋಟೋಗಳನ್ನು ಫೋನ್ ಮೂಲಕ ತೆಗೆಯುವಂತಿಲ್ಲ. ಆದರೆ ಮಧು ಪ್ರಿಯಾ ದೇವಸ್ಥಾನದಲ್ಲಿ ಕ್ಯಾಮೆರಾಗಳನ್ನು ಇಟ್ಟು ಅವರ ಹಾಡನ್ನು ಚಿತ್ರೀಕರಿಸಿದ್ದಾರೆ.
ಈ ಹಾಡಿನ ಚಿತ್ರೀಕರಣದ ವೇಳೆ ಯಾವುದೇ ಭಕ್ತರು ಪ್ರವೇಶಿಸದಂತೆ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು. ಆದರೆ ಈ ಘಟನೆಯ ಬಗ್ಗೆ ಭಕ್ತರು ಪ್ರತಿಕ್ರಿಯಿಸಿ, ದೇವಸ್ಥಾನದ ಒಳಗೆ ಫೋಟೋ ತೆಗೆಯಲು ಅವಕಾಶವಿಲ್ಲ ಎಂದು ಹೇಳಿದ್ದಾರೆ. ಆಕೆ ದೇವಸ್ಥಾನದ ಗರ್ಭಗುಡಿಯೊಳಗೆ ಹೋಗಿ ಚಿತ್ರೀಕರಣ ಆರಂಭಿಸುತ್ತಿದ್ದಂತೆ ಏಕಾಏಕಿ ಹಿಂದೂ ಸಮಾಜದ ಮುಖಂಡರು, ಭಕ್ತರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮಧುಪ್ರಿಯಾ ಅವರು ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೆಲವರು ಈ ವಿವಾದವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ವಾದವೂ ಇದೆ. ಈ ವಿವಾದದ ಬಗ್ಗೆ ಗಾಯಕಿ ಮಧುಪ್ರಿಯಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯಾವುದೇ ಪ್ರತಿಕ್ರಿಯೆ ನೀಡದ ಅಧಿಕಾರಿಗಳು
ಮಧುಪ್ರಿಯಾ ಬಾಲ್ಯದಿಂದಲೂ ಗಾಯಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಗದ್ದರ್ ಅವರಂತಹ ಕಲಾವಿದರೊಂದಿಗೆ ನಟಿಸುವ ಮೂಲಕ ತೆಲುಗು ರಾಜ್ಯಗಳಲ್ಲಿ ಪ್ರಸಿದ್ಧರಾದರು. ಹಲವು ಟಿವಿ ಶೋಗಳಲ್ಲಿ ಭಾಗವಹಿಸಿ ತಮ್ಮ ಕಂಠಸಿರಿಯಿಂದ ಮನರಂಜಿಸಿದ ಮಧುಪ್ರಿಯಾ ಸಿನಿಮಾಗಳಲ್ಲೂ ಹಾಡುಗಳನ್ನು ಹಾಡಿದ್ದರು. ಸದಾ ತಮ್ಮ ಹಾಡುಗಳು ಮತ್ತು ಮ್ಯೂಸಿಕ್ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮಧು ಪ್ರಿಯಾ ಇದೀಗ ವಿವಾದದಿಂದ ಸುದ್ದಿಯಾಗಿದ್ದಾರೆ.
ದೇವಸ್ಥಾನದ ಅಧಿಕಾರಿಗಳು ಗರ್ಭಗುಡಿ ಪ್ರವೇಶಿಸಲು ಅನುಮತಿ ನೀಡಿಲ್ಲ ಎಂದು ಕೆಲವರು ಹೇಳಿದರೆ, ಮಧುಪ್ರಿಯಾ ಅವರು ಅನುಮತಿ ಮೇರೆಗೆ ಗರ್ಭಗುಡಿಯಲ್ಲಿ ಶೂಟ್ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಬಗ್ಗೆ ದೇವಸ್ಥಾನದ ಅಧಿಕಾರಿಗಳಿಂದ ಇದುವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ದೇವಸ್ಥಾನದಲ್ಲಿ ಶೂಟಿಂಗ್; ಗಾಯಕಿ ಮಧುಪ್ರಿಯಾ ಬಂಧನಕ್ಕೆ ಆಗ್ರಹ?

Leave a Comment
Leave a Comment