ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿರುವುದು ನಟಿ ಶೋಭಾ ಶೆಟ್ಟಿ. ಈ ಬಾರಿ ಜನರ ತೀರ್ಮಾನಕ್ಕೆ ವಿರುದ್ಧವಾಗಿ ಎಲಿಮಿನೇಷನ್ ನಡೆಯಿತು. ಅಂದರೆ ಎಲಿಮಿನೇಟ್ ಆಗಲು ಆಯ್ಕೆ ಮಾಡಿದ್ದು, ಬೇರೊಬ್ಬರನ್ನು, ಆದರೆ ಶೋಭಾ ಶೆಟ್ಟಿ ಅವರು ತಮಗೆ ಅಲ್ಲಿರಲು ಆಗುತ್ತಿಲ್ಲ, ಆರೋಗ್ಯದಲ್ಲಿ ಸಮಸ್ಯೆ ಆಗಿದೆ ಎನ್ನುವ ಕಾರಣಕ್ಕೆ ಶೋಭಾ ಶೆಟ್ಟಿ ಅವರು ಸೆಲ್ಫ್ ಎಲಿಮಿನೇಟ್ ಆದರು. ಕಿಚ್ಚ ಸುದೀಪ್ ಅವರು ಎಷ್ಟೇ ಹೇಳಿದರು ಸಹ, ಶೋಭಾ ಅವರು ಆ ಮಾತನ್ನು ಕೇಳಿಸಿಕೊಳ್ಳಲಿಲ್ಲ. ಕೊನೆಗೆ ಕಿಚ್ಚ ಸುದೀಪ್ ಅವರು ಕೋಪದಿಂದ ಕೂಡ ಮಾತನಾಡಿದರು, ಆದರೆ ಯಾವುದು ಸಹ ಸರಿ ಹೋಗಲಿಲ್ಲ..

ಕೊನೆಗೆ ಶೋಭಾ ಶೆಟ್ಟಿ ಅವರು ಎಲಿಮಿನೇಟ್ ಆಗಿ ಹೊರಬಂದರು, ಕಿಚ್ಚ ಸುದೀಪ್ ಅವರು ಶೋಭಾ ಅವರಿಗೆ ಗೇಟ್ ಓಪನ್ ಮಾಡಿದರು, ಕೊನೆಗೆ ಶೋಭಾ ಶೆಟ್ಟಿ ಅವರು ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದು ಆಗಿದೆ. ಶೋಭಾ ಶೆಟ್ಟಿ ಅವರು ತೆಲುಗು ಬಿಗ್ ಬಾಸ್ ನಲ್ಲಿ ಅಷ್ಟು ಚೆನ್ನಾಗಿ, ಪವರ್ ಫುಲ್ ಆಗಿ ಇದ್ದವರು ಕನ್ನಡದಲ್ಲು ಹಾಗೆ ಇರುತ್ತಾರೆ ಎಂದುಕೊಂಡವರಿಗೆ, ಶೋಭಾ ಶೆಟ್ಟಿ ಅವರಿಂದ ಬೇಸರ ಸಿಕ್ಕಿತು. ಅವರು ಬಿಗ್ ಬಾಸ್ ಮನೆಗೆ ಬಂದ ರೀತಿ, ಜೋರಿನ ಮಾತುಗಳು ಇದೆಲ್ಲವು ಸಹ ಹೆಚ್ಚಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕೇವಲ ಎರಡೇ ವಾರಕ್ಕೆ ಶೋಭಾ ಹೊರಬಂದರು.
ಹೊರಬಂದ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಹೌದು, ಎಲ್ಲರ ಮುಖವಾಡ ಕಳಚುತ್ತೇನೆ ಎಂದು ಬಂದ ಶೋಭಾ ಶೆಟ್ಟಿ ಅವರು ಎರಡೇ ವಾರಕ್ಕೆ ತಮ್ಮಿಂದ ಮನೆಯೊಳಗೆ ಇರಲು ಆಗುತ್ತಿಲ್ಲ ಎಂದು ಕಾರಣ ಕೊಟ್ಟು, ಸೆಲ್ಫ್ ಎಲಿಮಿನೇಟ್ ಆಗಿ ಹೊರಬಂದಿದ್ದು, ವೀಕ್ಷಕರಿಗೆ ಇಷ್ಟವಾಗಲಿಲ್ಲ, ಜೊತೆಗೆ ಸುದೀಪ್ ಅವರಿಗೂ ಸಹ ಇದರಿಂದ ಬಹಳ ಕೋಪ ಬಂದಿತ್ತು. ಹಾಗಾಗಿ ಇದೀಗ ಶೋಭಾ ಶೆಟ್ಟಿ ಅವರು ಕಿಚ್ಚ ಸುದೀಪ್ ಅವರಿಗೆ ಹಾಗೂ ಕನ್ನಡ ಅಭಿಮಾನಿಗಳಿಗಾಗಿ ಬಹಿರಂಗವಾಗಿ ಒಂದು ಪತ್ರ ಬರೆದಿದ್ದು, ಅದರಲ್ಲಿ ಏನು ಬರೆದಿದ್ದಾರೆ ಎಂದು ತಿಳಿಯೋಣ…
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ.. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ!
ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ..
ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು.
ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ನಿಮ್ಮ ಪ್ರೀತಿಯ, ಶೋಭಾ ಶೆಟ್ಟಿ..”ಎಂದು ನಟಿ ಶೋಭಾ ಶೆಟ್ಟಿ ಅವರು ಬಹಿರಂಗ ಪತ್ರದಲ್ಲಿ ಬರೆದಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಶೋಭಾ ಅವರ ಈ ಪೋಸ್ಟ್ ಗೆ ಜನರು ಹಲವು ರೀತಿಯಲ್ಲಿ ಕಾಮೆಂಟ್ಸ್ ಬರೆಯುತ್ತಿದ್ದು, ಕೆಲವರು ಶೋಭಾ ಅವರಿಗೆ ಸಪೋರ್ಟ್ ಮಾಡಿದರೆ, ಇನ್ನು ಕೆಲವರು ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎನ್ನುತ್ತಿದ್ದಾರೆ. ಶೋಭಾ ಅವರ ಈ ಪತ್ರದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.