ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಭರ್ಜರಿಯಾಗಿ ಎಂಟ್ರಿ ಕೊಟ್ಟವರು ನಟಿ ಶೋಭಾ ಶೆಟ್ಟಿ. ಬರುತ್ತಲೇ ಜೋರಾಗಿ ಮಾತನಾಡುತ್ತಾ, ಎಲ್ಲರ ಬಂಡವಾಳ ತೋರಿಸುತ್ತೇನೆ, ಮುಖವಾಡ ಕಳಚಿ ಹಾಕುತ್ತೇನೆ ಎನ್ನುತ್ತಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಶೋಭಾ ಎರಡೇ ವಾರಕ್ಕೆ ಕಣ್ಣೀರು ಹಾಕುತ್ತಾ ಕೂತಿದ್ದಾರೆ. ಶೋಭಾ ಶೆಟ್ಟಿ ಅವರನ್ನು ಈ ರೀತಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದು, ಎರಡೇ ವಾರಕ್ಕೆ ಶೋಭಾ ಶೆಟ್ಟಿ ಅವರಿಗೆ ಬಿಗ್ ಬಾಸ್ ಮನೆಯ ಆಟ ಸಾಕಾಗಿ ಹೋಯ್ತಾ? ಪವರ್ ಇಷ್ಟು ಬೇಗ ಕಡಿಮೆ ಆಗಿ ಹೋಯ್ತಾ ಎನ್ನುತ್ತಿದ್ದಾರೆ. ಅಷ್ಟಕ್ಕೂ ಶೋಭಾ ಶೆಟ್ಟಿ ಅವರು ಕಣ್ಣೀರು ಹಾಕಿದ್ದೇಕೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ!
ಶೋಭಾ ಶೆಟ್ಟಿ ಅವರು ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ನಟನೆ ಶುರು ಮಾಡಿದರು. ಈ ಧಾರಾವಾಹಿಯಲ್ಲಿ ನೆಗಟಿವ್ ರೋಲ್ ನಲ್ಲಿ ನಟಿಸಿದರು ಸಹ ಇವರಿಗೆ ಒಳ್ಳೆಯ ಬೇಡಿಕೆ ಸಿಕ್ಕಿತ್ತು. ಬಳಿಕ ತೆಲುಗು ಧಾರಾವಾಹಿಗಳಲ್ಲಿ ಹೆಚ್ಚು ನಟಿಸುವುದಕ್ಕೆ ಶುರು ಮಾಡಿದರು. ತೆಲುಗಿನಲ್ಲಿ ಬಹಳ ಫೇಮಸ್ ಕೂಡ ಆದರು. ಅದೇ ಕಾರಣಕ್ಕೆ ಶೋಭಾ ಶೆಟ್ಟಿ ಅವರನ್ನು ತೆಲುಗು ಬಿಗ್ ಬಾಸ್ ಗೆ ಆಯ್ಕೆ ಮಾಡಿಕೊಳ್ಳಲಾಯಿತು. ತೆಲುಗು ಬಿಗ್ ಬಾಸ್ ನಲ್ಲಿ ಶೋಭಾ ಶೆಟ್ಟಿ ಧೂಳೆಬ್ಬಿಸಿದ್ದರು ಎಂದರು ತಪ್ಪಲ್ಲ. ಆಗ ಕನ್ನಡ ಅಭಿಮಾನಿಗಳು ಇವರು ಕನ್ನಡಕ್ಕೆ ಬರಲಿ ಎಂದುಕೊಳ್ಳುತ್ತಿದ್ದರು.

ಈ ವರ್ಷ ಶೋಭಾ ಶೆಟ್ಟಿ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದು ಆಗಿದೆ. ಬರುವಾಗ ಜೋರಾಗಿ ಹಾರಾಡಿಕೊಂಡೇ ಬಂದರು ಶೋಭಾ, ತಮಗೆ ತೆಲುಗು ಬಿಗ್ ಬಾಸ್ ಶೋ ಅನುಭವ ಇದ್ದ ಕಾರಣ ಅವರಿಗೆ ಒಳ್ಳೆಯ ಐಡಿಯಾ ಮತ್ತು ಸ್ಟ್ರಟಜಿ ಸಹ ಇವರಲ್ಲಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಬಂದ ಮೊದಲ ವಾರದಲ್ಲೇ ಗೌತಮಿ ಅವರ ಮುಖವಾಡ ಕಳಚಿ ಹಾಕುತ್ತೇನೆ ಎಂದಿದ್ದರು ಶೋಭಾ ಶೆಟ್ಟಿ. ಹಾಗೆಯೇ ಮೊದಲ ವಾರ ಉಗ್ರಂ ಮಂಜು ಅವರ ಜೊತೆಗೆ ಜೋರಾಗಿ ವಾಗ್ವಾದ ನಡೆಸಿ, ಕಿತ್ತಾಡಿದ್ದರು. ಇದೆಲ್ಲವನ್ನು ನೋಡಿ ವೀಕ್ಷಕರು ಸಹ ಶೋಭಾ ಶೆಟ್ಟಿ ಇದೇ ಸ್ಪೀಡ್ ನಲ್ಲಿ ಮುಂದುವರೆಯುತ್ತಾರೆ ಅಂದುಕೊಂಡಿದ್ದರು.
ಆದರೆ ಎರಡು ವಾರ ಕಳೆದು ಮೂರನೇ ವಾರಕ್ಕೆ ಎಲ್ಲವೂ ಬದಲಾಗಿದೆ. ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯೊಳಗೆ ಕಣ್ಣೀರು ಹಾಕಿದ್ದಾರೆ. ಇವರಿಬ್ಬರು ಕಣ್ಣೀರು ಹಾಕುತ್ತಿರುವುದನ್ನು ಕಂಡು ವೀಕ್ಷಕರು ಕೂಡ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಶೋಭಾ ಅವರು ಕಣ್ಣೀರು ಹಾಕಿರುವುದು ಯಾಕೆ ಎಂದರೆ, ಅವರಿಗೆ ಗೇಮ್ ಆಡುವುದಕ್ಕೆ ಸರಿಯಾಗಿ ಅವಕಾಶ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ. ಕ್ಯಾಪ್ಟನ್ ಆಗಿದ್ದ ಮೋಕ್ಷಿತಾ ಅವರನ್ನು ಗೇಮ್ ಆಡುವುದಕ್ಕೆ ಅವಕಾಶ ಕೊಡಬೇಕು ಎಂದು ಕೇಳಿಕೊಂಡರು ಶೋಭಾ, ಅವಕಾಶ ಕೊಡುತ್ತೇನೆ ಎಂದು ಹೇಳಿ, ಶೋಭಾ ಅವರಿಗೆ ಟಾಸ್ಕ್ ಆಡುವುದಕ್ಕೆ ಅವಕಾಶ ಕೊಡಲಿಲ್ಲ.

ಇದಕ್ಕೆ ಶೋಭಾ ಅವರಿಗೆ ಬೇಸರ ಆಗಿದ್ದು, ಕಣ್ಣೀರು ಹಾಕಿದ್ದಾರೆ. ಶೋಭಾ ಅವರನ್ನು ಈ ರೀತಿ ಬೇಸರದಲ್ಲಿ ನೋಡಿ, ಮನೆಮಂದಿಗೆ ಮಾತ್ರವಲ್ಲ ಹೊರಗಿನ ವೀಕ್ಷಕರಿಗೆ ಸಹ ಶಾಕ್ ಆಗಿದೆ. ಇದೇನು ಶೋಭಾ ಅವರ ಜೋಶ್ ಇಷ್ಟು ಬೆಟ ಕಡಿಮೆ ಆಗಿ ಹೋಯಿತಾ, ತೆಲುಗು ಬಿಗ್ ಬಾಸ್ ನಲ್ಲಿ ಇದ್ದ ಹಾರಾಟ, ಆರ್ಭಟ ಕನ್ನಡದಲ್ಲಿ ಇಷ್ಟು ಬೇಗ ಮುಗಿದು ಹೋಯ್ತಾ ಎನ್ನುತ್ತಿದ್ದಾರೆ ಫ್ಯಾನ್ಸ್. ಶೋಭಾ ಅವರು ಹೀಗಿದ್ರೆ ಅವರಿಗೆ ಸೂಟ್ ಆಗೋದಿಲ್ಲ, ಅವರು ಯಾವಾಗಲೂ ಜಗಳ ಆಡುತ್ತಾ, ಜೋರಾಗಿದ್ದರೆ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ ನೆಟ್ಟಿಗರು.