ಶಿವಣ್ಣ ಅವರ ಆರೋಗ್ಯದ ಬಗ್ಗೆ ಕೆಲವು ಊಹಾಪೋಹಗಳು ಹರಿದಾಡುತ್ತಿದ್ದವು. ಶಿವರಾಜ್ ಕುಮಾರ್ ಅವರಿಗೆ ಹುಷಾರಿಲ್ಲ ಹೌದಾ..? ಎನ್ನುವ ಪ್ರಶ್ನೆ ಹಲವರಲ್ಲಿತ್ತು. ಆದರೆ ಶಿವಣ್ಣರನ್ನು ಕಂಡವರು ಮಾತ್ರ ಇದೆಲ್ಲಾ ಸುಳ್ಳು ಸುದ್ದಿ ಎನ್ನುತ್ತಿದ್ದರು. ಯಾಕೆಂದರೆ ಅಷ್ಟರ ಮಟ್ಟಿಗೆ ಶಿವಣ್ಣ ಎಲ್ಲರೊಂದಿಗೆ ಉತ್ಸಾಹದಿಂದ ಇರುತ್ತಿದ್ದರು. ಆದರೆ ನಿಜ ವಿಚಾರ ಏನೆಂದರೆ ಶಿವರಾಜ್ ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಕಂಡು ಬಂದಿರುವುದು ನಿಜ.
ಈ ವಿಚಾರವನ್ನು ಸ್ವತಃ ಶಿವಣ್ಣ ಅವರೇ ಬಹಿರಂಗ ಪಡಿಸಿದ್ದು, ಆರೋಗ್ಯ ಸಮಸ್ಯೆ, ಚಿಕಿತ್ಸೆ ಬಗ್ಗೆ ವಿವರವಾಗಿ ವಾಹಿನಿ ಜೊತೆ ಮಾತನಾಡಿದ ಅವರು, ‘ಸದ್ಯಕ್ಕೆ ಸ್ವಲ್ಪ ಮಟ್ಟಿಗೆ ಆರಾಮಾಗಿದ್ದೇನೆ. ಮೂರು ನಾಲ್ಕು ತಿಂಗಳಿಂದ ಹುಷಾರಿಲ್ಲ. ಸ್ವಲ್ಪ ಮಟ್ಟಿನ ಆರೋಗ್ಯ ಸಮಸ್ಯೆ ಇದೆ. ಅದಕ್ಕೆ ಚಿಕಿತ್ಸೆ ನಡೆಯುತ್ತಿದೆ. ನನ್ನ ನೋಡಿದವರಿಗೆ ಹಾಗೇ ಅನಿಸಲ್ಲ. ಸಿನಿಮಾ ಕೆಲಸಗಳು ನಡೆಯುತ್ತಿದೆ. ಜೊತೆಗೆ ಚಿಕಿತ್ಸೆ ಕೂಡ ನಡೆಯುತ್ತಿದೆ’ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

‘ಸುಮ್ಮನೆ ಅದು ಇದು ಎನ್ನುವ ಗಾಳಿ ಸುದ್ದಿಗಿಂತ ನಾನೇ ಹೇಳುತ್ತಿದ್ದೇನೆ. ಹೌದು ನನಗೆ ಚಿಕಿತ್ಸೆ ನಡೆಯುತ್ತಿದೆ. ಆದರೆ ನಾನು ಆರಾಮಾಗಿದ್ದೇನೆ. ಜೊತೆಗೆ ಸಿನಿಮಾಗಳೆಲ್ಲ ರಿಲೀಸ್ಗೆ ರೆಡಿ ಇದೆ. ಅದರ ಕೆಲಸಗಳು ಕೂಡ ನಡೆಯುತ್ತಿದೆ’ ಎಂದು ಶಿವಣ್ಣ ತಮ್ಮ ಆರೋಗ್ಯದ ಬಗ್ಗೆ ತಾವೇ ಸ್ವತಃ ಸ್ಪಷ್ಟನೆ ಕೊಟ್ಟಿದ್ದಾರೆ.

‘ಆರೋಗ್ಯ ಸಮಸ್ಯೆ ಇದ್ದರೂ ಎನರ್ಜಿ ಇದ್ದೇ ಇರುತ್ತದೆ. ಇದಕ್ಕೆ ಎಲ್ಲರ ಸಪೋರ್ಟ್ ಕೂಡ ಇದೆ. ಗೀತಾ, ಮಕ್ಕಳು, ಗೆಳೆಯರು ಜೊತೆಗೆ ಕನ್ನಡ ಚಿತ್ರರಂಗದ ಜೊತೆಗಿರುವುದರಿಂದ ಎನರ್ಜಿ ಬರುತ್ತದೆ. ಆದರೆ ಸ್ವಲ್ಪ ಮಟ್ಟಿಗೆ ಹುಷಾರಿಲ್ಲ. ಚಿಕಿತ್ಸೆ ನಡೆಯುತ್ತಿದೆ. ಜೊತೆಗೆ ಕೆಲಸ ಕೂಡ ಮಾಡುತ್ತಿದ್ದೇನೆ’ ಎಂದರು.
‘ಚಿಕಿತ್ಸೆ ಅಂತಾ ಅದಕ್ಕಾಗಿಯೇ ಏನೂ ಕಡಿಮೆ ಮಾಡಿಲ್ಲ. ವಾಕಿಂಗ್ ಮಾಡುತ್ತೇನೆ. ದಿನ ನಿತ್ಯದ ವ್ಯಾಯಾಮ ನಡೆಯುತ್ತಲೇ ಇದೆ. ಊಟದಲ್ಲಿಯೂ ಯಾವುದೇ ರಿಸ್ಟ್ರಿಕ್ಷನ್ಸ್ ಇಲ್ಲ. ಬರೀ ಚಿಕಿತ್ಸೆ ನಡೆಯುತ್ತಿದೆ ಅಷ್ಟೇ. ಬಹುಶಃ ಎಲ್ಲರಿಗೂ ಗೊತ್ತಿರಬಹುದು. ಆದರೂ ನಾನೇ ಹೇಳೋದು ಒಳ್ಳೆಯದು ಎಂದು ಹೇಳುತ್ತಿದ್ದೇನೆ’ ಎಂದು ಹೇಳಿದರು