ಬಿಗ್ ಬಾಸ್ ಮನೆಯಿಂದ ನಟ ಶಿಶಿರ್ ಶಾಸ್ತ್ರಿ ಅವರು ಎಲಿಮಿನನೇಟ್ ಆಗಿ ಹೊರಬಂದಿದ್ದು, ಅವರ ಅಭಿಮಾನಿಗಳಿಗೆ ಹಾಗೂ ಜನರಿಗೆ ಎಲ್ಲರಿಗೂ ದೊಡ್ಡ ಶಾಕ್ ನೀಡಿದೆ. ಶಿಶಿರ್ ಶಾಸ್ತ್ರಿ ಅವರು ಇಷ್ಟು ಬೇಗ ಹೊರಬರುವ ಹಾಗೆ ಇದ್ದ ವೀಕ್ ಸ್ಪರ್ಧಿ ಅಲ್ಲ. ಶಿಶಿರ್ ಶಾಸ್ತ್ರಿ ಅವರು ಬಹಳ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದ ಸ್ಪರ್ಧಿ ಆಗಿದ್ದು, ಅನಾವಶ್ಯಕವಾಗಿ ಯಾರ ವಿಷಯಕ್ಕೂ ಹೋಗುತ್ತಾ ಇರಲಿಲ್ಲ, ಯಾರ ಜೊತೆಗೂ ಅಗತ್ಯವಿಲ್ಲದೆ ಜಗಳ ಆಡುತ್ತಿರಲಿಲ್ಲ, ಅವಶ್ಯಕತೆ ಇದ್ದಾಗ ಮಾತ್ರ ಮಾತನಾಡುತ್ತಿದ್ದರು. ಇಂಥ ಒಳ್ಳೆಯ ಸ್ಪರ್ಧಿ ಇಷ್ಟು ಬೇಗ ಎಲಿಮಿನೇಟ್ ಆಗಿ ಹೊರಬಂದಿದ್ದು, ಎಲ್ಲರಿಗು ಒಂದು ರೀತಿ ಆಶ್ಚರ್ಯ ಆಗಿತ್ತು.

ಆದರೆ ಈ ಒಳ್ಳೆಯ ವ್ಯಕ್ತಿತ್ವವೇ ಅವರಿಗೆ ಮುಳುವಾಗಿರಲುಬಹುದು. ಏಕೆಂದರೆ ಬಿಗ್ ಬಾಸ್ ಮನೆಯೊಳಗೆ ಗಾಸಿಪ್ ಮಾಡಿಕೊಂಡು ಇರೋರಿಗೆ ಹೆಚ್ಚು ಸಮಯ ಸಿಗುತ್ತದೆ. ಪ್ರಸ್ತುತ ಮನೆಯೊಳಗೆ ಇರುವ ಹಲವು ಸ್ಪರ್ಧಿಗಳಿಗಿಂತ ಶಿಶಿರ್ ಶಾಸ್ತ್ರಿ ಮನೆಯೊಳಗೆ ಇರುವುದಕ್ಕೆ ಯೋಗ್ಯರು ಎನ್ನುವ ಅಭಿಪ್ರಾಯ ಇದೆ. ಹಾಗೆಯೇ ಇವರು ವಿನ್ನರ್ ಆಗಬೇಕಿದ್ದಂಥ ಸ್ಪರ್ಧಿ ಎನ್ನುವ ಅಭಿಪ್ರಾಯ ಎಲ್ಲರದ್ದು. ಆದರೆ ಈಗ ಏನು ಮಾಡಲು ಸಾಧ್ಯವಿಲ್ಲ. ಶಿಶಿರ್ ಅವರು ಹೊರಬಂದಿದ್ದು ಆಗಿದೆ. ಅವರಿಗೆ ಇನ್ನು ಒಳ್ಳೆಯ ಅವಕಾಶಗಳು ಸಿಗಬೇಕು ಎನ್ನುವುದು ಎಲ್ಲರ ಆಶಯ ಆಗಿದೆ. ಈಗ ಶಿಶಿರ್ ಅವರು ಇಂಟರ್ವ್ಯೂ ಗಳಲ್ಲಿ ಬ್ಯುಸಿ ಆಗಿದ್ದಾರೆ.
ಹೌದು, ಇದು ನಮಗೆ ಗೊತ್ತಿರುವ ವಿಷಯ. ಸಾಮಾನ್ಯವಾಗಿ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಬಂದಾಗ, ಎಲ್ಲಾ ಚಾನೆಲ್ ಗಳು ಯೂಟ್ಯೂಬ್ ಚಾನೆಲ್ ಗಳು ಅವರ ಇಂಟರ್ವ್ಯೂ ಮಾಡುತ್ತಾರೆ, ಬಿಗ್ ಬಾಸ್ ಮನೆಯ ಜರ್ನಿ ಮತ್ತು ಅವರ ಜೀವನದ ಬಗ್ಗೆ ಇನ್ನೂ ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೇ ರೀತಿ ಇಂಟರ್ವ್ಯೂಗಳಲ್ಲಿ ಶಿಶಿರ್ ಶಾಸ್ತ್ರಿ ಅವರಿಗೆ ಮೋಕ್ಷಿತಾ ಅವರ ವಿಚಾರ ಕೇಳಿದ್ದು, ಮೋಕ್ಷಿತಾ ಅವರ ಬಗ್ಗೆ ವೈರಲ್ ಆಗುತ್ತಿರುವ ಹಳೆಯ ವಿಚಾರದ ಬಗ್ಗೆ ಶಿಶಿರ್ ಶಾಸ್ತ್ರಿ ಅವರ ಅಭಿಪ್ರಾಯ ಏನು ಎಂದು ಕೇಳಲಾಗಿದ್ದು, ಅದಕ್ಕೆ ಬುದ್ಧಿಬಂತಿಕೆಯಿಂದ ಉತ್ತರ ಕೊಟ್ಟಿದ್ದಾರೆ ಶಿಶಿರ್.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೌದು, ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಮೋಕ್ಷಿತಾ ಪೈ ಅವರ ಬಗ್ಗೆ ಒಂದು ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೋಕ್ಷಿತಾ ಅವರು 8 ವರ್ಷಗಳ ಹಿಂದೆ, ತಾವು ಟ್ಯೂಷನ್ ಹೇಳಿಕೊಡುತ್ತಿದ್ದ ತಮ್ಮ ಸ್ಟುಡೆಂಟ್ ಅನ್ನು ತಮ್ಮ ಬಾಯ್ ಫ್ರೆಂಡ್ ಜೊತೆಗೆ ಸೇರಿ ಪ್ಲಾನ್ ಮಾಡಿ, ಹಣಕ್ಕಾಗಿ ಆಕೆಯನ್ನು ಕಿ*ಡ್ನ್ಯಾಪ್ ಮಾಡಿದ್ದರು. ಈ ವಿಷಯ ಈಗ ವೈರಲ್ ಆಗಿದ್ದು, ಮೋಕ್ಷಿತಾ ಅವರು ಮಕ್ಕಳ ಕಳ್ಳಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಕೆಲವರು ಹಳೆಯ ವಿಚಾರ ಬೇಡ ಎಂದು ಕೂಡ ಹೇಳುತ್ತಿದ್ದಾರೆ. ಇನ್ನು ಶಿಶಿರ್ ಶಾಸ್ತ್ರಿ ಅವರಿಗೆ ಕೂಡ ಮೋಕ್ಷಿತಾ ಅವರ ಬಗ್ಗೆ ಪ್ರಶ್ನೆ ಕೇಳಲಾಗಿದೆ.

ಇದಕ್ಕೆ ಶಿಶಿರ್ ಶಾಸ್ತ್ರಿ ಅವರು ಉತ್ತರ ಕೊಟ್ಟಿದ್ದು, ತಮಗೆ ಅದು ದೊಡ್ಡ ವಿಷಯ ಅನ್ನಿಸಲಿಲ್ಲ ಎಂದಿದ್ದಾರೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವಾಗಲೋ ನಡೆದಿರುವ ವಿಷಯ ಇಟ್ಟುಕೊಂಡು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂದಿದ್ದಾರೆ ಶಿಶಿರ್. ಈ ವಿಷಯ ತಮಗೆ ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಗೊತ್ತಾಗಲಿಲ್ಲ, ಹೊರಗಡೆ ಬಂದಮೇಲೆ ಗೊತ್ತಾಯ್ತು, ಇದೊಂದು ದೊಡ್ಡ ವಿಷಯ ಅಂತ ನನಗೆ ಅನ್ನಿಸಲೇ ಇಲ್ಲ ಎಂದಿದ್ದಾರೆ. ಬಿಗ್ ಬಾಸ್ ಮನೆಯ ಒಳಗೆ ಶಿಶಿರ್ ಶಾಸ್ತ್ರೀ ಹಾಗೂ ಮೋಕ್ಷಿತಾ ನಡುವೆ ಕೂಡ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಅದು ಈಗ ಕೂಡ ಮುಂದುವರೆದಿದೆ, ಹೊರಗೆ ಬಂದಮೇಲು ಅದೇ ರೀತಿ ಪ್ರೀತಿ ಗೌರವ ಇಟ್ಟುಕೊಂಡಿದ್ದಾರೆ ಶಿಶಿರ್ ಶಾಸ್ತ್ರಿ