ಕೋವಿಡ್ ಸಮಯದಲ್ಲಿ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕಿತ್ತು. ಆದರೆ ಇಲ್ಲೊಬ್ಬ ಸ್ಟಾರ್ ಕೋವಿಡ್ ಹೋದರು ಮಾಸ್ಕ್ ಹಾಕೋದನ್ನ ಬಿಡಲಿಲ್ಲ. ಅಷ್ಟಕ್ಕೂ ಈತ ಯಾರು ಗೊತ್ತಾ?. ಇಲ್ಲಿದೆ ಡೀಟಿಯಲ್ಸ್. ಇವರು ಬರೀ ಮಾಸ್ಕ್ ಮಾತ್ರವಲ್ಲ ಒಂದೊಂದು ಸಲ ಪಿಪಿಇ ಕಿಟ್ ಹಾಕ್ಕೊಂಡೇ ಓಡಾಡ್ತಾ ಇದ್ದಾರೆ. ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ನಡೆದ ಗಣೇಶ ಸಂಭ್ರಮದಲ್ಲಿ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರ ಮುಖಕ್ಕೆ ಡಿಜಿಟಲ್ ಮಾಸ್ಕ್ ಧರಿಸಿ ಕುಣಿದಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

https://www.instagram.com/reel/CxaoOqRsYMb/?utm_source=ig_web_copy_link
ರಾಜ್ ಕುಂದ್ರಾ ಹೀಗೆ ಮಾಸ್ಕ್ ಧರಿಸೋಕೆ ಶುರು ಮಾಡಿದಾಗ ಬಹಳಷ್ಟು ಜನ ಅಪಹಾಸ್ಯ ಮಾಡಿದ್ದರು. ಆದರೆ ಇದೀಗ ಇದನ್ನ ತುಂಬಾ ಫನ್ ಆಗಿ ತಗೋತಿದ್ದಾರೆ. ಕುಂದ್ರಾ ಎಷ್ಟು ವೆರೈಟಿ ಮಾಸ್ಕ್ ಹಾಕಿರ್ತಾರೆ ಅಂತ ಕ್ಯೂರಿಯಸ್ ಆಗಿ ನೋಡ್ತಾರೆ. ಅಷ್ಟರ ಮಟ್ಟಿಗೆ ಈಗ ರಾಜ್ ಕುಂದ್ರಾ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ಅಷ್ಟಕ್ಕೂ ರಾಜ್ ಕುಂದ್ರಾ ಈ ಮಾಸ್ಕ್ ಅಭಿಯಾನ ಯಾಕೆ ಶುರು ಮಾಡಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ. ಅದು ಜುಲೈ 2022. ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ ಆಗಿ ತಿಂಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದಾರೆ.
ಈ ಘಟನೆಯಿಂದಾಗಿ ಶಿಲ್ಪಾ ಶೆಟ್ಟಿ ಮತ್ತು ಅವರ ಫ್ಯಾಮಿಲಿ ತುಂಬಾನೇ ಆಘಾತ ಎದುರಿಸಿತ್ತಂತೆ. ಇದರಿಂದ ತುಂಬಾ ನೊಂದುಕೊಂಡಿರುವ ರಾಜ್ ಕುಂದ್ರಾ ಮಾಧ್ಯಮಗಳ ಮೇಲೆ ಇಂಥಹದೊಂದು ಪ್ರತಿಭಟನೆ ಮಾಡ್ತಿದ್ದಾರೆ. ಕ್ಯಾಮೆರಾ ಇರೋ ಕಡೆ ಕುಂದ್ರಾ ಮಾಸ್ಕ್ ಇಲ್ಲದೇ ಬರೋದೇ ಇಲ್ಲ. ಆದರೆ ಶಿಲ್ಪಾ ಶೆಟ್ಟಿ ಈ ಬಗ್ಗೆ ಎಲ್ಲಿಯೂ ಮಾತಾಡಿಲ್ಲ ಮತ್ತು ವಿರೋಧಿಸಿಲ್ಲ. ಗಂಡನ ಈ ಪ್ರೊಟೆಸ್ಟ್ಗೆ ಸಪೋರ್ಟ್ ಮಾಡ್ತಿದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೂ ಕೋಪ ಬರುತ್ತೆ. ಆ ಕೋಪನ ಒಬ್ಬೊಬ್ಬರು ಒಂದೊಂಥರಾ ತೋರಿಸ್ತಾರೆ. ಸದ್ಯ, ರಾಜ್ ಕುಂದ್ರಾ ಮಾಸ್ಕ್ ಧರಿಸಿ ಶಿಲ್ಪಾ ಶೆಟ್ಟಿಯೊಂದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ವಿಡಿಯೋ ಸಖತ್ ಟ್ರೆಂಡಿಂಗ್ ನಲ್ಲಿದೆ.