ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಅಧಿಕೃತ ಅನೌನ್ಸ್ ಮೆಂಟ್ ಇನ್ನೂ ಆಗಿಲ್ಲ. ಆದರೆ ಆ ಸಿನಿಮಾದಲ್ಲಿ ನಾಯಕಿ ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಂಯುಕ್ತಾ ಮೆನನ್ ಅವರೇ ಯಶ್ ಸಿನಿಮಾದ ನಾಯಕಿ ಎಂಬ ಸುದ್ದಿ ಹರಿದಾಡುತ್ತಿದೆ. ಯಶ್ ಅವರು ಮುಂದಿನ ಸಿನಿಮಾವನ್ನು ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದು, ಈ ಕಾರಣದಿಂದ ಸಂಯುಕ್ತಾ ಮೆನನ್ ಯಶ್19ಗೆ ನಾಯಕಿ ಎನ್ನಲಾಗಿದೆ.

ಯಶ್ ಅವರ 19ನೇ ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ. ಅವರೂ ಆ ಬಗ್ಗೆ ಯಶ್ ಆಗಲಿ ಅವರ ಮುಂದಿನ ಸಿನಿಮಾದ ನಿರ್ಮಾಣ ಸಂಸ್ಥೆಯಾಗಲಿ ಏನನ್ನೂ ಹೇಳುತ್ತಿಲ್ಲ. ಇಂತಹ ಹೊತ್ತಿನಲ್ಲಿ ಸಂಯುಕ್ತಾ ಮೆನನ್ ಬಗ್ಗೆ ಇಂತಹದ್ದೊಂದು ಸುದ್ದಿ ಹಬ್ಬಿದೆ. ನಟಿ ಸಂಯುಕ್ತಾ ಮೆನನ್ ಅವರು ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಈ ಬ್ಯೂಟಿ 2016ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು.
ಗಣೇಶ್ ಮತ್ತು ಯೋಗರಾಜ್ ಭಟ್ಟರ ಕ೦ಬಿನೇಶನ “ಗಾಳಿಪಟ-21 ಅವರು ನಾಯಕಿಯಾಗಿದ್ದರು. ಅನಂತರಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದ ಅವರು, ಕಲ್ಯಾಣ್ ರಾಮ್ ನಟನೆಯ “ಬಿಂಬಿಸಾರ”, ಸಾಯಿ ಧರಮ್ ತೇಜ್ ಅವರ ವಿರೂಪಾಕ್ಷ’ದಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಯಶ್ ಅವರ ಮುಂದಿನ ಸಿನಿಮಾಗೆ ಅವರು ಆಯ್ಕೆಯಾಗಿದ್ದಾರೆ. ಎಂಬ ಮಾಹಿತಿ ಇದೆ.