ಕನ್ನಡ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್ ಕೆಲ ತಿಂಗಳಿನಿಂದ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದು, ಕಿಚ್ಚ ಸುದೀಪ್ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯನ್ನ ಘೋಷಣೆ ಮಾಡಲಾಗಿದೆ. ರಾಜಕೀಯ, ಕ್ರಿಕೆಟ್, ಬಿಗ್ ಬಾಸ್ ಇನ್ನಿತರ ಕಾರಣಗಳಿಗಾಗಿ ವಿಕ್ರಾಂತ್ ರೋಣ ಹಾಗೂ ಕಬ್ಜ ಚಿತ್ರದ ನಂತರ ಚಿತ್ರರಂಗದಿಂದ ಬ್ರೇಕ್ ತಗೆದುಕೊಂಡಿದ್ದು, ಕಿಚ್ಚ ಸುದೀಪ್ ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಮುಂದಿನ ಚಿತ್ರದ ಪ್ರೋಮೊ ಶೂಟ್ ಪ್ರಾರಂಭಿಸಿದ್ದಾರೆ. ಸುದೀಪ್ ಅಭಿನಯದ 46ನೇ ಸಿನಿಮಾಕ್ಕೆ ಶೂಟಿಂಗ್ ಇನ್ನೇನೂ ಕೆಲ ದಿನಗಳಲ್ಲಿ ಆರಂಭಗೊಳ್ಳಲಿದ್ದು , ಹಾಗಾದ್ರೆ ಈ ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆಗೆ ತೆರೆಬಿದಿದ್ದೆ.

ಟಾಲಿವುಡ್ ಸಣ್ಣ ಪುಟ್ಟ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆಗೊಂಡು, ತನ್ನ ಹಾಟ್ ಲುಕ್ ಹಾಗೂ ನಟನೆ ಮೂಲಕ ಪ್ರೇಕ್ಷಕರ ನೆಚ್ಚಿನ ನಟಿಯಾಗಿ, ನಂತರದ ದಿನಗಳಲ್ಲಿ ಬಾಲಿವುಡ್ ಚಿತ್ರಗಳಲ್ಲೂ ತನ್ನ ಛಾಪು ಮೂಡಿಸಿದ ಸಿಮ್ರತ್ ಕೌರ್ ಸುದೀಪ್ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ವಿಷಯ ಹಂಚಿಕೊಂಡ ವಿ ಕ್ರಿಯೇಶನ್ಸ್ ನಿರ್ಮಾಪಕ ಕಲೈಪುಲಿ ಎಸ್ ತನು ಸಿಮ್ರತ್ ಕೌರ್ ಗೆ ಕಿಚ್ಚ 46ಗೆ ನಿಮಗೆ ಸ್ವಾಗತ ನೀವಿನ್ನು ಈ ಚಿತ್ರದ ಸದಸ್ಯೆ ಎಲ್ಲರೂ ಒಂದಾಗಿ ಪಯಣಿಸೋಣ ಎಂದು ಟ್ವಿಟ್ ಮಾಡಿದ್ದಾರೆ.
ಪಂಜಾಬ್ ನಲ್ಲಿ ಜನಿಸಿದ ಸಿಮ್ರತ್ ಕೌರ್ ಮುಂಬೈನಲ್ಲಿ ಬಿಎಸ್ ಸಿ ಪದವಿ ಮುಗಿಸಿ ನಂತರ ಮಾಡೆಲಿಂಗ್ ಮುಖಾಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು,2017 ರಲ್ಲಿ ಪ್ರೇಮತೋ ಮೀ ಕಾರ್ತಿಕ್ ಹೆಸರಿನ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಅಷ್ಟೇ ಅಲ್ಲದೆ ನಂತರದ ದಿನಗಳಲ್ಲಿ ಡರ್ಟಿ ಹ್ಯಾರಿ ಹೆಸರಿನ ಸಿನಿಮಾ ನಟನೆಯಲ್ಲಿ ಸೈ ಎನಿಸಿಕೊಂಡರು. ನಾಗಾರ್ಜುನ ಮಗನಾದ ನಾಗ್ ಚೈತನ್ಯನೊಂದಿಗೆ ಬಂಗಾರಾಜು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲೂ ನಟಿಸಿ ಛಾಪನ್ನು ಮೂಡಿಸಿದ್ದರು.
ಇದೀಗ ಗದರ್ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಚಿತ್ರದ ನಂತರ ಯಾವ ಸಿನಿಮಾಗಳಲ್ಲೂ ಕೂಡ ನಟಿಸಿಲ್ಲ. ವಿಕ್ರಾಂತ್ ರೋಣ ಚಿತ್ರದ ಬಳಿಕ ಬ್ರೇಕ್ ತಗೆದುಕೊಂಡ ಸುದೀಪ್ ಇದೀಗ ಮತ್ತೆ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರ ಸಿನಿಮಂದಿರದಲ್ಲಿ ಸಾಕಷ್ಟು ಸದ್ದು ಮಾಡಿರಲಿಲ್ಲ. ಈ ಹಿಂದೆ ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಚಿತ್ರದ ಕಥೆಯ ಮುಂದಿನ ಭಾಗವೇ ವಿಕ್ರಾಂತ್ ರೋಣ ಚಿತ್ರ ಎಂದೆಲ್ಲ ಕೆಲ ಸಿನಿ ರಸಿಕರು ಅಭಿಪ್ರಾಯ ಪಟ್ಟಿದ್ದರು.
ನಂತರದ ದಿನಗಳಲ್ಲಿ ಸೆಲೆಬ್ರೇಟಿ ಕ್ರಿಕೆಟ್ ಲೀಗ್, ರಾಜಕಾರಣ ಅಂತೆಲ್ಲ ಬ್ಯುಸಿ ಆಗಿದ್ದ ಕಿಚ್ಚ ಸುದೀಪ್ ಇದೀಗ ಮತ್ತೆ ತನ್ನ ಮೊದಲನೇ ಲಯಕ್ಕೆ ಮರಳಲು ಸಿದ್ದರಾಗಿದ್ದಾರೆ. ಸುದೀಪ್ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ನಟರಲ್ಲಿ ಒಬ್ಬರಾಗಿದ್ದು, ಇತ್ತೀಚಿಗಷ್ಟೇ ಬಿಡುಗಡೆಗೊಂಡ ಕಬ್ಜ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ತೆರೆಯ ಮೇಲೆ ಮಿಂಚಿದ್ದರು. ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿರುವ ಬಹು ಬೇಡಿಕೆಯ ನಟ ಕಿಚ್ಚ ಸುದೀಪ್ ಕನ್ನಡದಲ್ಲಿ ಒಟ್ಟು 45 ಚಿತ್ರಗಳಲ್ಲಿ ನಟನಾಗಿ ನಟಿಸಿದ್ದು ಇದೀಗ 46 ನೇ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿದೆ. ಬಾದ್ ಷಾ ಕಿಚ್ಚನ 45ನೇ ಚಿತ್ರವು ಅಮೋಘ ಯಶಸ್ಸನ್ನ ಕಾಣಲಿ ಎನ್ನುವುದೇ ನಮ್ಮ ಆಶಯ.