ಶಕೀಲಾ ಅನ್ನುವ ಹೆಸರನ್ನು ಬಹುಶಃ ಕೇಳದವರು ಯಾರೂ ಇಲ್ಲ. ಚಿತ್ರರಂಗಕ್ಕಿಂತ ಹೆಚ್ಚಾಗಿ ಈಕೆ ನೀಲಿ ಚಿತ್ರಗಳಿಂದಲ್ಲೇ ಹೆಚ್ಚು ಸದ್ದು ಮಾಡಿದವರು. ಹಲವು ನೀಲಿ ಚಿತ್ರಗಳಲ್ಲಿ ನಟಿಸಿ ಸ್ಟಾರ್ ನಟಿಯರ ಸಾಲಿಗೆ ಸೇರಿದ ಶಕೀಲಾ ಮೂಲತ: ಮಲೆಯಾಳಿ. ಆದರೆ ಎಲ್ಲಾ ಭಾಷೆಗೂ ಈಕೆ ಚಿರಪರಿಚಿತ. ಇದೀಗ ಶಕೀಲಾ ಬಿಗ್ ಬಾಸ್ ಮನೆ ಪ್ರವೇಶಿಸಲು ಮುಹೂರ್ತ ಫಿಕ್ಸ್ ಆಗಿದೆ. ಮೂಲಗಳ ಪ್ರಕಾರ ಶಕೀಲಾ ಕಾಲಿಡುತ್ತಿರುವುದು ತೆಲುಗು ಬಿಗ್ ಬಾಸ್ ಗೆ.

ಸೆಪ್ಟಂಬರ್ ನಲ್ಲಿ ತೆಲುಗು ಬಿಗ್ ಬಾಸ್ ನ ಸೀಸನ್-7 ಆರಂಭವಾಗಲಿದ್ದು, ಇದರಲ್ಲಿ ಶಕೀಲಾ ಸ್ಪರ್ಧಿಸುವ ಸಾಧ್ಯತೆ ಇದೆ. ಅಕ್ಕಿನೇನಿ ನಾರ್ಗಾಜುನ ನಿರೂಪಣೆಯ ತೆಲುಗು ಬಿಗ್ ಬಾಸ್ ಸೆಪ್ಟಂಬರ್ 3ರಂದು ಆರಂಭವಾಗಲಿದೆ. ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್-2ರಲ್ಲಿ ಸ್ಪರ್ಧಿಸಿದ್ದ ಶಕೀಲಾ ಈ ಬಾರಿ ತೆಲುಗು ಬಿಗ್ ಬಾಸ್ ನಲ್ಲಿ ಸ್ಪರ್ಧಿಸುವುದು ಪಕ್ಕಾ ಎನ್ನಲಾಗಿದೆ.
1994ರಲ್ಲಿ ತಮಿಳಿನ ‘ಪ್ಲೇಗರ್ಲ್ಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶಕೀಲಾ ಬಳಿಕ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಸಿನಿಮಾರಂಗದಲ್ಲಿ ನಟಿಸಿ ಖ್ಯಾತಿ ಗಳಿಸಿದರು. 2020ರಲ್ಲಿ ಇವರ ಜೀವನಾಧರಿಸಿದ ‘ಶಕೀಲಾ’ ಹೆಸರಿನ ಬಾಲಿವುಡ್ ಚಿತ್ರ ತೆರೆಕಂಡಿತ್ತು. ಕನ್ನಡ ಮೂಲದ ಇಂದ್ರಜಿತ್ ಲಂಕೇಶ್ ಈ ಚಿತ್ರ ನಿರ್ದೇಶಿಸಿದ್ದರು. ಇದೀಗ ಶಕೀಲಾ ರೀಯಾಲಿಟಿ ಶೋ ಮೂಲಕ ಪರದೆಯ ಎರಡನೇ ಇನ್ನಿಂಗ್ಸ್ ಆಡಲು ಸಜ್ಜಾಗಿದ್ದಾರೆ.