ಈ ನಟ ಚಿತ್ರವೊಂದಕ್ಕೆ 300 ಕೋಟಿ ರೂ.ಸಂಭಾವನೆ ಪಡೆಯುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ಆಗಿದ್ದಾರೆ. ಇವರು ಯಾರೆಂದು ಬಲ್ಲೀರಾ…?.
ಸಿನಿ ಪ್ರಿಯರಿಗೆ ತಿಳಿದಿರುವಂತೆ ‘ಬಡೆ ಮಿಯಾನ್ ಛೋಟೆ ಮಿಯಾನ್’ ಮತ್ತು ‘ಇಂಡಿಯನ್ 2’ ವರೆಗಿನ ಅನೇಕ ದೊಡ್ಡ ಬಜೆಟ್ ಚಿತ್ರಗಳು 2024 ರಲ್ಲಿ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂ.ಗಳಿಸಲು ವಿಫಲವಾದವು. ಆದರೆ ಈ ನಟ ತಮ್ಮ ಮುಂಬರುವ ಚಿತ್ರಕ್ಕಾಗಿ 300 ಕೋಟಿ ರೂ.ಪಡೆಯುತ್ತಿದ್ದಾರೆ. ಹೌದು, ನಾವು ಹೇಳುತ್ತಿರುವ ಆ ಸೂಪರ್ ಸ್ಟಾರ್ ಬೇರೆ ಯಾರೂ ಅಲ್ಲ, ಅಲ್ಲು ಅರ್ಜುನ್. ಅಲ್ಲು ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ.
ಟ್ರ್ಯಾಕ್ ಟಾಲಿವುಡ್ನ ಇತ್ತೀಚಿನ ವರದಿಯ ಪ್ರಕಾರ, ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಪುಷ್ಪ ಸೀಕ್ವೆಲ್ ‘ಪುಷ್ಪ 2: ದಿ ರೂಲ್’ ಗಾಗಿ 300 ಕೋಟಿ ರೂ.ಸಂಭಾವನೆ ಪಡೆದಿದ್ದಾರೆ. ಅಲ್ಲಿಗೆ ಅಲ್ಲು ಅರ್ಜುನ್ ಈಗ ದಳಪತಿ ವಿಜಯ್ ಅವರಿಗಿಂತ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ. ದಳಪತಿ 69 ಚಿತ್ರಕ್ಕಾಗಿ ವಿಜಯ್ 275 ಕೋಟಿ ರೂ. ಪಡೆದಿದ್ದರು ಎಂದು ವರದಿಯಾಗಿದೆ.

ತೆಲುಗು ಚಿತ್ರರಂಗದ ಸೂಪರ್ಸ್ಟಾರ್ ಅಲ್ಲು ಅರ್ಜುನ್ ಕೇವಲ ನಟ ಮಾತ್ರವಲ್ಲ, ಅವರು ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ, ತೆಲುಗು ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಲ್ಲು ಅರ್ಜುನ್ ಒಬ್ಬರು. ಅಲ್ಲು ಅರ್ಜುನ್ ಅವರ ಅಂದಾಜು ನಿವ್ವಳ ಮೌಲ್ಯ 460 ಕೋಟಿ ರೂ. ಅವರು ಅದ್ದೂರಿ ಜೀವನ ನಡೆಸುತ್ತಿದ್ದು, ಅಲ್ಲು ಖಾಸಗಿ ಜೆಟ್, ಐಷಾರಾಮಿ ಬಂಗಲೆ, ಅನೇಕ ಆಸ್ತಿ ಸೇರಿದಂತೆ ಐಷಾರಾಮಿ ಕಾರು ಸಂಗ್ರಹವಿದೆ. ನಟನೆಯ ಹೊರತಾಗಿ, ಅಲ್ಲು ತನ್ನ ಪ್ರೊಡಕ್ಷನ್ ಹೌಸ್, ರೆಸ್ಟೋರೆಂಟ್ ಸಿರೀಸ್, ಮಲ್ಟಿಪ್ಲೆಕ್ಸ್ ಮತ್ತು ಇತರ ಹಲವು ಹೂಡಿಕೆಗಳಿಂದ ದೊಡ್ಡ ಆದಾಯವನ್ನು ಗಳಿಸುತ್ತಾರೆ.
ಅಲ್ಲು ಅರ್ಜುನ್ ಅವರ ಮುಂಬರುವ ಬಹು ನಿರೀಕ್ಷಿತ ಪುಷ್ಪ 2 ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ. ‘ಪುಷ್ಪ 2: ದಿ ರೂಲ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇಬ್ಬರೂ ಶ್ರೀವಲ್ಲಿ ಮತ್ತು ಭನ್ವರ್ ಸಿಂಗ್ ಶೇಖಾವತ್ ಪಾತ್ರಗಳನ್ನು ಪುನರಾವರ್ತಿಸಿದ್ದಾರೆ. ಈ ಆಕ್ಷನ್ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಬದಲಿಗೆ ಶ್ರೀಲೀಲಾ ಸ್ಪೆಷಲ್ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸುಕುಮಾರ್ ನಿರ್ದೇಶನದ ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಪುಷ್ಪ 2 ನಲ್ಲಿ ಪ್ರಕಾಶ್ ರಾಜ್, ಜಗಪತಿ ಬಾಬು, ಅನಸೂಯಾ ಭಾರದ್ವಾಜ್ ಮತ್ತು ಜಗದೀಶ್ ಪ್ರತಾಪ್ ಬಂಡಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಮೊದಲ ದಿನವೇ 275 ಕೋಟಿ ರೂಪಾಯಿ ಗಳಿಕೆಯೊಂದಿಗೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.