ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವವರು ನಟಿ ವೈಷ್ಣವಿ ಗೌಡ. ಇವರ ಅಗ್ನಿಸಾಕ್ಷಿ ಧಾರಾವಾಹಿ ಯಾವ ಮಟ್ಟಕ್ಕೆ ಕ್ರೇಜ್ ಹೊಂದಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಆ ಸಮಯದಲ್ಲಿ ಅಗ್ನಿಸಾಕ್ಷಿಯ ಸನ್ನಿಧಿ ಎಲ್ಲರ ಮನೆ ಮಗಳು, ಎಲ್ಲಾ ಹುಡುಗರ ಕ್ರಶ್ ಎಂದು ಹೇಳಿದರು ತಪ್ಪಲ್ಲ. ಅಷ್ಟರ ಮಟ್ಟಿಗೆ ಜನಪ್ರಿಯತೆ ಹೊಂದಿತ್ತು ಈ ಪಾತ್ರ. ಈಗ ವೈಷ್ಣವಿ ಅವರು ಸೀತಾರಾಮ ಧಾರಾವಾಹಿಯ ಸೀತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪಾತ್ರ ಸಹ ಜನರಿಗೆ ಅಷ್ಟೇ ಇಷ್ಟವಾಗಿದೆ. ಸೀತಾರಾಮನ ಪ್ರೀತಿ, ಸೀತಾ ಸಿಹಿ ಬಾಂಡಿಂಗ್ ಇದೆಲ್ಲವೂ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ.. ಇಷ್ಟು ಒಳ್ಳೆಯ ಪಾತ್ರದ ಮೂಲಕ ಗುರುತಿಸಿಕೊಂಡಿರುವ ವೈಷ್ಣವಿ ಅವರು ಇದೀಗ ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದಾರೆ. ಇದರಿಂದ ತಾವು ಗಳಿಸುವ ಹಣ ಎಷ್ಟು ಎನ್ನುವುದನ್ನು ಸಹ ಇತ್ತೀಚಿನ ವಿಡಿಯೋದಲ್ಲಿ ರಿವೀಲ್ ಮಾಡಿದ್ದಾರೆ.

ನಟಿ ವೈಷ್ಣವಿ ಅವರ ಜರ್ನಿ ಕೆಲವು ವರ್ಷಗಳದ್ದಷ್ಟೇ ಅಲ್ಲ. ಇವರು. ಬಹಳ ಚಿಕ್ಕವರಿರುವಾಗಲೇ, ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಅದ್ಭುತವಾದ ಡ್ಯಾನ್ಸರ್ ಸಹ ಹೌದು. ಕ್ಲಾಸಿಕಲ್ ಡ್ಯಾನ್ಸ್ ಅನ್ನು ಕಲಿತಿರುವ ಇವರು ಬಹಳ ಟ್ಯಾಲೆಂಟೆಡ್ ಹುಡುಗಿ. ಡ್ಯಾನ್ಸ್ ಶೋ ಬಳಿಕ ವೈಷ್ಣವಿ ಅವರು ಜೀಕನ್ನಡ ವಾಹಿನಿಯಲ್ಲೇ ದೇವಿ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಈ ಧಾರಾವಾಹಿ ಸಹ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ನಂತರ ಸ್ವಲ್ಪ ಗ್ಯಾಪ್ ಪಡೆದು ನಟಿಸಿದ ಧಾರಾವಾಹಿಯೇ ಅಗ್ನಿಸಾಕ್ಷಿ. ಈ ಧಾರಾವಾಹಿಯ ಕ್ರೇಜ್ ಇವತ್ತಿಗೂ ಕಡಿಮೆ ಆಗಿಲ್ಲ. ಜನರು ಅಗ್ನಿಸಾಕ್ಷಿ ಸಿದ್ಧಾರ್ಥ್ ಸನ್ನಿಧಿಯನ್ನ ಇಂದಿಗು ಮರೆತಿಲ್ಲ. ಈಗಲೂ ಈ ಧಾರಾವಾಹಿಯನ್ನು ಮತ್ತೆ ಟೆಲಿಕಾಸ್ಟ್ ಮಾಡಿದರೆ, ಮೊದಲು ಇದ್ದಷ್ಟೇ ಕ್ರೇಜ್ ಇರುತ್ತದೆ..

ಅಷ್ಟು ಕ್ರೇಜ್ ಹೊಂದಿದೆ ಅಗ್ನಿಸಾಕ್ಷಿ ಧಾರವಾಹಿ. ಅಗ್ನಿಸಾಕ್ಷಿ ನಂತರ ಇನ್ಯಾವುದೇ ಧಾರಾವಾಹಿಯನ್ನು ಒಪ್ಪಿಕೊಳ್ಳದೇ ದೊಡ್ಡ ಗ್ಯಾಪ್ ಪಡೆದ ಬಳಿಕ ವೈಷ್ಣವಿ ಅವರು ಕಾಣಿಸಿಕೊಳ್ಳುತ್ತಿರುವುದು ಸೀತಾರಾಮ ಧಾರಾವಾಹಿಯಲ್ಲಿ. ಈ ಧಾರಾವಾಹಿ ಸಹ ಅಗ್ನಿಸಾಕ್ಷಿ ತರಹವೆ ಕ್ರೇಜ್ ಹೊಂದಿದೆ. ಇದರಲ್ಲಿ ಜನರಿಗೆ ಸಿಹಿ ಮತ್ತು ಸೀತಾಳ ತಾಯಿ ಮಗಳ ಬಾಂಧವ್ಯ ಸಹ ತುಂಬಾ ಇಷ್ಟವಾಯಿತು. ಉತ್ತಮವಾಗಿ ಮುನ್ನುಗ್ಗುತ್ತಿದೆ ಸೀತಾರಾಮ ಧಾರಾವಾಹಿ. ಧಾರಾವಾಹಿಯ ಜೊತೆಗೆ ವೈಷ್ಣವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಹ ತುಂಬಾ ಆಕ್ಟಿವ್. ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇವರದ್ದೇ ಆದ ಯೂಟ್ಯೂಬ್ ಚಾನೆಲ್ ಸಹ ಇದೆ, ಈಗಾಗಲೇ ವೈಷ್ಣವಿ ಅವರಿಗೆ ಯೂಟ್ಯೂಬ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಚಂದಾದಾರರು ಇದ್ದಾರೆ.
ಹೀಗಿರುವಾಗ ವೈಷ್ಣವಿ ಅವರಿಗೆ ತಮ್ಮ ಯೂಟ್ಯೂಬ್ ಚಾನೆಲ್ ಇಂದ ಎಷ್ಟು ಆದಾಯ ಇದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಜನರಿಗೆ ಇದೆ. ಇದರ ಬಗ್ಗೆ ಇದೀಗ ವೈಷ್ಣವಿ ಅವರು ಒಂದು ವಿಡಿಯೋ ಮಾಡಿ ಶೇರ್ ಮಾಡಿದ್ದು, ಈ ವಿಡಿಯೋ ಗೆ ಸಹ ಒಳ್ಳೆಯ ರೀಚ್ ಬರುವುದಕ್ಕೆ ಶುರುವಾಗಿದೆ. ವೈಷ್ಣವಿ ಅವರು ಆ ವಿಡಿಯೋದಲ್ಲಿ ಏನೆಲ್ಲಾ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ ಎಂದರೆ, ಮೊದಲಿಗೆ ಯೂಟ್ಯೂಬ್ ವಿಡಿಯೋ ರೆಕಾರ್ಡ್ ಮಾಡುವುದಕ್ಕೆ ಏನೆಲ್ಲಾ ಉಪಕರಣಗಳು ಬೇಕು, ಅವರ ಬಳಿ ಯಾವೆಲ್ಲಾ ಉಪಕರಣಗಳು ಇವೆ, ಅವುಗಳನ್ನು ಎಷ್ಟು ಹಣ ಕೊಟ್ಟು ಖರೀದಿ ಮಾಡಿದರು ಎನ್ನುವುದನ್ನು ತಿಳಿಸಿದ್ದಾರೆ. ಹಾಗೆಯೇ ತಾವು ವಿಡಿಯೋ ಹೇಗೆ ಮಾಡೋದು ಎನ್ನುವುದನ್ನು ಮುಕ್ತವಾಗಿ ತಿಳಿಸಿದ್ದಾರೆ.

ಹಾಗೆಯೇ ವಿಡಿಯೋ ಎಡಿಟಿಂಗ್ ವಿಚಾರಕ್ಕೆ ಬಂದರೆ ಮೊದಲೆಲ್ಲಾ ತಾವೇ ಎಡಿಟ್ ಮಾಡುತ್ತಿದ್ದಾಗಿಯೂ, ಈಗ ವಿಡಿಯೋ ಎಡಿಟ್ ಮಾಡೋದಕ್ಕೆ ಒಂದು ತಂಡವಿದೆ, ಅವರೊಡನೆ ಕೈಜೋಡಿಸಿ, ಯೂಟ್ಯೂಬ್ ಚಾನೆಲ್ ಹ್ಯಾಂಡಲ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ತಮ್ಮ ಆದಾಯದ ವಿಚಾರದ ಬಗ್ಗೆ ಮಾತು ಶುರು ಮಾಡಿ, ಆದಾಯ ಅನ್ನೋದು ಅವರವರ ವೈಯಕ್ತಿಕ ವಿಚಾರ ಆಗಿರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿ ಹಣ ಗಳಿಸುತ್ತಾರೆ ಎಂದಿರುವ ವೈಷ್ಣವಿ ಅವರು ತಾವು ಯೂಟ್ಯೂಬ್ ಇಂದ 5 ಅಂಕಿಗಳ ಆದಾಯ ಗಳಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಹಲವು ಬ್ರ್ಯಾಂಡ್ ಕೊಲ್ಯಾಬೊರೇಷನ್ ಗಳನ್ನು ಮಾಡುತ್ತಿದ್ದು, ಒಂದೊಂದು ಬ್ರ್ಯಾಂಡ್ ಗಳು ಬೇರೆ ಬೇರೆ ರೀತಿ ಸಂಭಾವನೆ ಕೊಡುತ್ತಾರೆ ಎಂದು ತಿಳಿಸಿದ್ದಾರೆ.

ತಮಗೆ ಯೂಟ್ಯೂಬ್ ಇಂದ ಬರುವ ಆದಾಯ ಇಷ್ಟೇ ಎಂದು ಓಪನ್ ಆಗಿ ಹೇಳಿಲ್ಲದೇ ಹೋದರು, ಒಳ್ಳೆಯ ಆದಾಯ ಬರುತ್ತಿದೆ ಎಂದು ತಿಳಿಸಿದ್ದಾರೆ ವೈಷ್ಣವಿ. ಯಾರು ಬೇಕಾದರೂ ಯೂಟ್ಯೂಬ್ ಚಾನೆಲ್ ಶುರು ಮಾಡಿ, ಇದರಿಂದ ಆದಾಯ ಗಳಿಸಬಹುದು. ಈಗಾಗಲೇ ಒಂದು ಕೆಲಸ ಮಾಡುತ್ತಾ, ಅದರ ಜೊತೆಗೆ ಎರಡನೇ ಆದಾಯ ಬೇಕು ಎನ್ನುವವರಿಗೆ ಯೂಟ್ಯೂಬ್ ಅತ್ಯುತ್ತಮವಾದ ಆಯ್ಕೆ ಆಗಿದೆ ಎಂದು ಹೇಳಿದ್ದಾರೆ ವೈಷ್ಣವಿ. ಇನ್ನು ತಾವು ಕೊಡುವ ಕಾಂಟೆಂಟ್ ಗಳ ಬಗ್ಗೆ ಮಾತನಾಡಿ, ಜನರಿಗೆ ಯಾವ ರೀತಿಯ ಕಾಂಟೆಂಟ್ ಇಷ್ಟ, ಜನರು ಯಾವ ಥರ ಕಾಂಟೆಂಟ್ ನೋಡಬೇಕು ಎಂದು ಹೇಳುತ್ತಾರೋ, ಅದೇ ಥರದ ಕಾಂಟೆಂಟ್ ಗಳನ್ನು ಕೊಡುತ್ತಾ ಬಂದಿರುವುದಾಗಿ ಹೇಳುತ್ತಾರೆ ವೈಷ್ಣವಿ. ಒಟ್ಟಿನಲ್ಲಿ ವೈಷ್ಣವಿ ಅವರಿಗೆ ಯೂಟ್ಯೂಬ್ ಇಂದ ವೈಷ್ಣವಿ ಅವರಿಗೆ ಒಳ್ಳೆಯ ಉಪಯೋಗ ಅಂತೂ ಆಗಿದೆ.

ಇನ್ನು ವೈಷ್ಣವಿ ಅವರು ಕೆಲವು ವಿಶೇಷವಾದ ಕಾಂಟೆಂಟ್ ಗಳನ್ನು ಶೇರ್ ಮಾಡುತ್ತಾರೆ. ಸೀತಾರಾಮ ತಂಡದ ಜೊತೆಗೆ ಮಹಾಕುಂಭಮೇಳಕ್ಕೆ ಹೋಗಿ ಶೂಟಿಂಗ್ ಮಾಡಿದಾಗ, ಆ ವಿಶೇಷ ಕ್ಷಣಗಳ ವ್ಲಾಗ್ ಮಾಡಿದ್ದರು, ತಮ್ಮ ಹುಟ್ಟುಹಬ್ಬವನ್ನು ಅಲ್ಲಿ ಆಚರಣೆ ಮಾಡಿದ ಸುಂದರ ವಿಡಿಯೋ ಶೇರ್ ಮಾಡಿದ್ದರು. ಆ ಎಲ್ಲಾ ವಿಡಿಯೋಗಳು ಜನರಿಗೆ ಬಹಳ ಇಷ್ಟವಾಗಿದೆ. ವೈಷ್ಣವಿ ಒಬ್ಬರೇ ಅಥವಾ ಸೆಲೆಬ್ರಿಟಿಗಳು ಮಾತ್ರ ಯೂಟ್ಯೂಬ್ ಇಂದ ಒಳ್ಳೆಯ ಆದಾಯ ಗಳಿಸುತ್ತಿಲ್ಲ, ಹಲವಾರು ಸಾಮಾನ್ಯ ಜನರು ಕೂಡ ಯೂಟ್ಯೂಬ್ ಇಂದ ಉತ್ತಮವಾದ ಆದಾಯ ಗಳಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಎಲ್ಲರಿಗು ಸಹ ಒಳ್ಳೆಯ ಆದಾಯ ಗಳಿಸುವುದಕ್ಕೆ ಉತ್ತಮವಾದ ಪ್ಲಾಟ್ ಫಾರ್ಮ್ ಆಗಿದೆ ಯೂಟ್ಯೂಬ್.