ಮೆಗಾಸ್ಟಾರ್ ಚಿರಂಜೀವಿ ಕಳೆದ ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಆಕ್ಟಿಂಗ್, ಡ್ಯಾನ್ಸಿಂಗ್ ಗಾಗಿಯೇ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಕಾರ್ಯ ಸಿನಿಮಾರಂಗಕ್ಕೆ ಮಾತ್ರ ಸೀಮಿತವಾಗಿರದೆ, ಹಲವು ಸಾಮಾಜಿಕ ಕಾರ್ಯದಲ್ಲೂ ನಿರತರಾಗಿದ್ದಾರೆ. ಇದೀಗ ಹೊಸದೊಂದು ಸಮಾಜ ಕಾರ್ಯವನ್ನು ಮಾಡುವ ಮೂಲಕ ಜನರ ಹೃದಯಕ್ಕೆ ಇನ್ನೂ ಹತ್ತಿರವಾಗಿದ್ದಾರೆ. ಬಡವರಿಗೆ ಅಥವಾ ಹಣಕಾಸಿನ ಸಮಸ್ಯೆ ಇರುವವರಿಗೆ ಹಣಕೊಟ್ಟು ಕ್ಯಾನ್ಸರ್ ತಪಾಸಣೆ ಮಾಡಲು ಕಷ್ಟವಾಗಬಾರದೆಂಬ ನಿಟ್ಟಿನಲ್ಲಿ ಉಚಿತ ಕ್ಯಾನ್ಸರ್ ತಪಾಸಣೆಯನ್ನು ಆರಂಭಿಸಿದ್ದಾರೆ.

ಇದರ ಮೊದಲ ಶಿಬಿರವು ಭಾನುವಾರ ಹೈದರಾಬಾದ್ ನಲ್ಲಿ ನಡೆದಿದೆ. ಈ ದಿನ 2ಸಾವಿರಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆದುಕೊಂಡು, ನಟನ ಈ ಸಮಾಜಮುಖಿ ಕೆಲಸಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ. ಇತ್ತೀಚೆಗಷ್ಟೇ ಹೊಸ ಕ್ಯಾನ್ಸರ್ ಸೆಂಟರ್ ಪ್ರಾರಂಭಿಸಿ ಜನರಿಗೆ ಜಾಗ್ರತಿ ಮೂಡಿಸುವ ಕೆಲಸ ಮಾಡಿದ್ದರು. ಬಡವರಿಗೆ ಸಹಾಯವಾಗಲೆಂದು ಶಿಬಿರವನ್ನೂ ಪ್ರಾರಂಭಿಸಿದ್ದಾರೆ. ಎಲ್ಲರ ಬಳಿ ಕ್ಯಾನ್ಸರ್ ಪರೀಕ್ಷೆ ಮಾಡಲು ಹಣ ಇರುವುದಿಲ್ಲ.
ಆದ್ದರಿಂದ ಹೈದರಾಬಾದ್ ನ ಜುಬಿಲಿಹಿಲ್ಸ್ ನಲ್ಲಿರುವ ಚಿರಂಜೀವಿ ಬ್ಲಡ್ ಬ್ಯಾಂಕ್ ನಲ್ಲಿ ಶಿಬಿರ ಕೈಗೊಂಡಿದ್ದರು. ಕೆಲವು ದಿನಗಳ ಹಿಂದೆ ಈ ಕ್ಯಾಂಪ್ ನ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದರು ಅದನ್ನು ಜನ ಚಿರಂಜೀವಿಗೆ ಕ್ಯಾನ್ಸರ್ ಇದೆ ಎಂದು ತಪ್ಪಾಗಿ ಅರ್ಥೈಸಿದ್ದರು. ಜೀವನದಲ್ಲಿ ಎಷ್ಟೇ ದೊಡ್ಡ ಹೆಸರು ಮಾಡಿದರೂ, ಏನೇ ಸಾಧನೆ ಮಾಡಿದರೂ ಇಂತಹ ಒಳ್ಳೆ ಮನಸ್ಸು, ಬಡವರಿಗೆ ಸಹಾಯ ಮಾಡುವ ಹೃದಯ ಇರುವರು ಬಹಳ ಕಡಿಮೆ. ಇಂತಹ ಸಮಾಜದಲ್ಲಿ ಚಿರಂಜೀವಿ ಬಡವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದಕ್ಕೆ ಜನರಿಂದ ಭಾರೀ ಮನ್ನಣೆ ದೊರೆತಿದೆ.