ಕನ್ನಡ ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿರುವ ಧಾರಾವಾಹಿ ಅಮೃತಧಾರೆ. ಈ ಧಾರಾವಾಹಿ ಶುರುವಾಗಿ ಇನ್ನೇನು 2 ವರ್ಷ ಆಗ್ತಿದೆ. ಅಮೃತಧಾರೆಯಲ್ಲಿ ಗೌತಮ್ ಭೂಮಿಕಾ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಇವರಿಬ್ಬರ ಪಾತ್ರಗಳ ಜೊತೆಗೆ ಇನ್ನು ಕೆಲವು ಪಾತ್ರಗಳು ಜನರಿಗೆ ಇಷ್ಟವಾಗಿದೆ. ಓವರ್ ಆಲ್ ಈ ಧಾರಾವಾಹಿ ಅಂದ್ರೇನೇ ಜನರಿಗೆ ಬಹಳ ಇಷ್ಟ. ಗೌತಮ್ ಭೂಮಿಕಾ ಪ್ರೀತಿ ಇರಬಹುದು, ಶಕುಂತಲಾ ಕುತಂತ್ರಗಳು, ಪಾರ್ಥ ಅಪೇಕ್ಷ ಕಥೆ, ಜೀವ ಮಹಿಮಾ, ಭೂಮಿಕಾ ತಂದೆ ತಾಯಿ, ಜಯದೇವ್ ಮಲ್ಲಿ ಹೀಗೆ ಯಾವುದು ಅತಿರೇಕ ಅನ್ನಿಸದೆ, ಉತ್ತಮವಾಗಿ ಸಾಗುತ್ತಿರುವ ಧಾರಾವಾಹಿ ಇದು. ಟಿಆರ್ಪಿ ಯಲ್ಲಿ ಹಲವು ಸಾರಿ ಟಾಪರ್ ಆಗಿರುವುದು ಕೂಡ ಇದೆ. ಗೌತಮ್ ಭೂಮಿಕಾ ಮುಖ್ಯವಾದ ಸೀನ್ಸ್ ಇರುವಾಗ ಜನರು ತುಂಬಾ ಇಷ್ಟಪಟ್ಟು ನೋಡ್ತಾರೆ..

ಈ ಧಾರಾವಾಹಿ ಅತಿಹೆಚ್ಚು ಜನಪ್ರಿಯತೆಯ ಜೊತೆಗೆ ಉತ್ತಮವಾಗಿ ಸಾಗುತ್ತಿದೆ. ಅಮೃತಧಾರೆ ಧಾರಾವಾಹಿಯ ಮತ್ತೊಂದು ಪ್ರಮುಖ ಪಾತ್ರ ಮಲ್ಲಿ. ದಿವಾನ್ ಕುಟುಂಬದ ಎರಡನೇ ಸೊಸೆ ಮಲ್ಲಿ. ಜಯದೇವ್ ಮಾಡಿದ ತಪ್ಪಿನಿಂದ ಮಲ್ಲಿ ಗರ್ಭಿಣಿ ಆಗಿ, ಜಯದೇವ್ ಹಾಗೂ ಶಕುಂತಲಾ ಗೆ ಇಷ್ಟವಿಲ್ಲದೇ ಮಲ್ಲಿ ಆ ಮನೆಗೆ ಸೊಸೆಯಾಗಿ ಬರಬೇಕಾಯಿತು. ಆದರೆ ಮಲ್ಲಿಗೆ ಗೌತಮ್ ಹಾಗೂ ಭೂಮಿಕಾ ಸಪೋರ್ಟ್ ಇತ್ತು. ಮಲ್ಲಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ, ಸರಳ ಸುಸಂಸ್ಕೃತ ಹುಡುಗಿ. ಈ ಪಾತ್ರದಲ್ಲಿ ಮೊದಲಿಗೆ ರಾಧಾ ಭಗವತಿ ನಟಿಸುತ್ತಿದ್ದರು. ಇವರು ಮಲ್ಲಿ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದರು. ಹಳ್ಳಿ ಹುಡುಗಿಯ ಹಾಗೆ ಇವರು ಆಡುವ ಮಾತುಗಳು ಜನರಿಗೆ ತುಂಬಾ ಇಷ್ಟವಾಗಿತ್ತು. ಭೂಮಿಕಾ ಮಲ್ಲಿಯನ್ನು ಮಾತಿನ ಮಲ್ಲಿ ಎಂದೇ ಕರೆಯುತ್ತಾರೆ.

ಮಲ್ಲಿ ಪಾತ್ರ ಜನರಿಗೆ ಅಷ್ಟು ಹತ್ತಿರ ಆಗೋದಕ್ಕೆ ಕಾರಣ ರಾಧಾ ಭಗವತಿ ಅವರ ಪಾತ್ರ ಎಂದರೂ ತಪ್ಪಲ್ಲ. ರಾಧಾ ಅವರ ಅಭಿನಯ ಆ ರೀತಿ ಇತ್ತು. ಆದರೆ ಈಗ ರಾಧಾ ಅವರು ಅಮೃತಧಾರೆ ಧಾರಾವಾಹಿ ಇಂದ ಹೊರಗಡೆ ಬಂದಿದ್ದಾರೆ. ಇವರು ಈಗ ಕಲರ್ಸ್ ಕನ್ನಡ ವಾಹಿನಿಯ ಭಾರ್ಗವಿ ಎಲ್.ಎಲ್.ಬಿ ಧಾರಾವಾಹಿಯಲ್ಲಿ ಮುಖ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಧಾ ಅವರಿಗೆ ಭಾರ್ಗವಿ ಪಾತ್ರ ಕೂಡ ಒಳ್ಳೆಯ ಹೆಸರು ತಂದುಕೊಡುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಅದು ಮಹಿಳಾ ಪ್ರಧಾನ ಧಾರವಾಹಿ, ಹಾಗೆಯೇ ಬಹಳ ಸ್ಟ್ರಾಂಗ್ ಆದ ಪಾತ್ರ ಸಹ ಹೌದು. ಇದಕ್ಕಾಗಿಯೇ ಅಮೃತಧಾರೆ ಧಾರವಾಹಿ ಇಂದ ಹೊಸ ಧಾರಾವಾಹಿಗೆ ಬಂದಿದ್ದಾರೆ. ಆದರೆ ಈ ಎರಡು ಧಾರಾವಾಹಿಯಲ್ಲಿ ಒಂದು ಸಾಮ್ಯತೆ ಇದೆ.

ಹೌದು, ಮಲ್ಲಿ ಹಾಗೂ ಭಾರ್ಗವಿ ಪಾತ್ರದಲ್ಲಿ, ಅಮೃತಧಾರೆ ಹಾಗೂ ಭಾರ್ಗವಿ ಎಲ್.ಎಲ್.ಬಿ ಧಾರಾವಾಹಿಯಲ್ಲಿ ಒಂದು ಪ್ರಮುಖವಾದ ಸಾಮ್ಯತೆ ಇದೆ. ಅದು ಏನು ಎಂದರೆ ತಂದೆಯ ಪಾತ್ರ. ಹೌದು, ಭಾರ್ಗವಿ ಧಾರಾವಾಹಿಯಲ್ಲಿ ನಾಯಕಿಯ ತಂದೆಯ ಪಾತ್ರ ಮಾಡುತ್ತಿರುವುದು ಯಾರು ಎಂದು ನಮಗೆಲ್ಲ ಗೊತ್ತೇ ಇದೆ. ಇವರು ಕನ್ನಡದ ಹಿರಿಯ ಕಲಾವಿದರು. ಹಲವು ಕನ್ನಡ ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿ, ಜನಪ್ರಿಯತೆ ಹೊಂದಿರುವವರು. ತಂದೆ ಲಾಯರ್ ಆಗಿ, ಕೇಸ್ ನಲ್ಲಿ ಸೋತು ಮರಿಯಾದೆ ಕಳೆದುಕೊಂಡಿದ್ದಾರೆ. ಮತ್ತೆ ತನ್ನ ತಂದೆ ತಲೆ ಎತ್ತಿ ನಡೆಯುವ ಹಾಗೆ ಮಾಡ್ತೀನಿ, ತನ್ನ ತಂದೆಯನ್ನು ಸೋಲಿಸಿದ ಲಾಯರ್ ಅನ್ನು ತಾನು ಸೋಲಿಸ್ತೀನಿ ಅನ್ನೋದೇ ಭಾರ್ಗವಿಯ ಶಪಥ. ಇದನ್ನೇ ಜೀವನದ ಗುರಿ ಮಾಡಿಕೊಂಡಿದ್ದಾಳೆ ಭಾರ್ಗವಿ.

ಇನ್ನು ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಬಡವರ ಮನೆ ಹುಡುಗಿ, ಗೌತಮ್ ದಿವಾನ್ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಒಬ್ಬ ತಾತನ ಮೊಮ್ಮಗಳು, ತಂದೆ ತಾಯಿಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ಅನಾಥ ಹುಡುಗಿ ಎನ್ನುವ ಹಾಗೆಯೇ ತೋರಿಸಲಾಗತ್ತು. ತಾತ ಆಕೆಯನ್ನು ಬೇರೆ ಊರಿನಲ್ಲಿ ಓದಿಸುತ್ತಿದ್ದರು, ರಜಕ್ಕಾಗಿ ತಾತನ ಮನೆಗೆ ಬಂದಾಗ, ಜಯದೇವ್ ವಿಚಾರದಲ್ಲಿ ಹೀಗೆಲ್ಲಾ ಆಗಿ, ಮಲ್ಲಿಗೆ ಮದುವೆ ಆಯಿತು ಎನ್ನುವಂತೆ ತೋರಿಸಲಾಗಿತ್ತು. ಇಷ್ಟು ದಿವಸ ಇದ್ದದ್ದು ಕೂಡ ಅದೇ ರೀತಿ. ಆದರೆ ರಾಧಾ ಭಗವತಿ ಅವರು ಧಾರವಾಹಿ ಇಂದ ಹೊರಬರುವ ವೇಳೆ, ಗಂಡ ಮಾಡುತ್ತಿರುವ ಎಲ್ಲಾ ಮೋಸದ ಬಗ್ಗೆ ಗೊತ್ತಾಗಿ, ನಿಮಗೆ ಪಾಠ ಕಲಿಸುತ್ತಿನಿ ಎಂದು ಹೇಳಿ, ತಾತನ್ನ ನೋಡಬೇಕು ಅನ್ನಿಸುತ್ತಿದೆ ಎಂದು ಬಂದಿದ್ದಳು.

ಮಲ್ಲಿ ತಾತನ ಮನೆಗೆ ಹೋಗಿ ತುಂಬಾ ದಿನಗಳಾಗಿತ್ತು, ಈಗ ಗೌತಮ್ ಮಲ್ಲಿಯನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗಲು ಮಲ್ಲಿಯ ಊರಿಗೆ ಬಂದಿದ್ದಾನೆ. ಅತ್ತ ಭೂಮಿಕಾ ಗರ್ಭಿಣಿ ಆಗಿದ್ದು, ಭೂಮಿಕಾಗೆ ಸರ್ಪ್ರೈಸ್ ಕೊಡೋದಕ್ಕೆ ಗೌತಮ್ ಈ ಪ್ಲಾನ್ ಮಾಡಿದ್ದಾನೆ. ಗೌತಮ್ ಮಲ್ಲಿ ಮನೆಗೆ ಬಂದಿದ್ದು, ಮಲ್ಲಿಯ ಬರ್ತ್ ಡೇ ದಿವಸ. ಮಲ್ಲಿ ತಾತನ ಜೊತೆ ಮಾತಾಡಿ, ಪಕ್ಕದ ಮನೆಗೆ ಹೋಗಿರುತ್ತಾಳೆ. ಆ ಸಮಯಕ್ಕೆ ಬರೋ ಗೌತಮ್ ನ ಮನೆಯಲ್ಲಿ ಕೂರಿಸಿ, ಮಲ್ಲಿಯನ್ನು ಕರೆದುಕೊಂಡು ಬರೋಕೆ ಮಲ್ಲಿಯ ತಾತ ಹೋಗ್ತಾರೆ. ಆಗ ಗೌತಮ್ ಕಣ್ಣಿಗೆ ಎರಡು ಫೋಟೋಗಳು ಕಾಣುತ್ತದೆ. ಆ ಫೋಟೋದಲ್ಲಿ ಇರೋದು ವಿಲ್ಲನ್ ರಾಜೇಂದ್ರ ಭೂಪತಿ ಹಾಗೂ ಅವರ ಪತ್ನಿ. ಜೊತೆಗೆ ಇನ್ನೊಂದು ಮಗುವಿನ ಫೋಟೋ ಇರುತ್ತದೆ. ಅದು ರಾಜೇಂದ್ರ ಭೂಪತಿ ಮಗಳ ಫೋಟೋ ಎಂದು ಗೊತ್ತಾಗುತ್ತದೆ.

ಇಂದಿನ ಎಪಿಸೋಡ್ ಪ್ರೊಮೋದಲ್ಲಿ ಗೌತಮ್ ಮಲ್ಲಿ ತಾತನಿಗೆ ಆ ಫೋಟೋ ಬಗ್ಗೆ ಕೇಳಿದಾಗ, ಆ ಫೋಟೋದಲ್ಲಿ ಇರೋರ ಮನೆಯಲ್ಲಿ ತಾವು ಕೆಲಸ ಮಾಡ್ತಿದ್ದಿದ್ದು ಎಂದು ಹೇಳಿ, ಮಲ್ಲಿ ಅವರ ಮಗಳು ಎಂದು ತಿಳಿಸುತ್ತಾರೆ. ಈ ವಿಚಾರ ಕೇಳಿ ಗೌತಮ್ ಗೆ ಶಾಕ್ ಆಗಿದೆ. ವಿಲ್ಲನ್ ಮಗಳು ಮಲ್ಲಿ, ಆದರೆ ಇವಳು ತುಂಬಾ ಒಳ್ಳೆಯ ಹುಡುಗಿ. ಇಲ್ಲಿ ವಿಶೇಷತೆ ಏನು ಎಂದರೆ ಅಮೃತಧಾರೆಯಲ್ಲಿ ಮಲ್ಲಿಯ ತಂದೆ ಪಾತ್ರದಲ್ಲಿ ನಟಿಸುತ್ತಿರುವವರೇ, ಭಾರ್ಗವಿ ಎಲ್.ಎಲ್.ಬಿ ಧಾರಾವಾಹಿಯಲ್ಲಿ ನಾಯಕಿಯ ತಂದೆ. ರಾಧಾ ಅವರಿಗೆ ಎರಡು ಧಾರಾವಾಹಿಯಲ್ಲೂ ಒಬ್ಬರೇ ತಂದೆಯ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷವೇ ಸರಿ. ಆದರೆ ಈಗ ಮಲ್ಲಿ ಪಾತ್ರಕ್ಕೆ ರಾಧಾ ಅವರ ಬದಲಾಗಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅನ್ವಿತಾ ಸಾಗರ್ ಬಂದಿದ್ದಾರೆ.