ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯ ನಂತರ ಅಭಿಮಾನಿಗಳು ತೀವ್ರ ಟೆನ್ಷನ್ನಲ್ಲಿದ್ದಾರೆ . ನಟ ಆಸ್ಪತ್ರೆಗೆ ದಾಖಲಾದ ಸುದ್ದಿ ಬಂದಾಗಿನಿಂದ ಎಲ್ಲರೂ ಶಾಕ್ ಆಗಿದ್ದಾರೆ. ಸೈಫ್ಗೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಸೈಫ್ ಅವರ ಮುಂಬೈ ಮನೆಗೆ ರಾತ್ರಿ ನುಗ್ಗಿ ಚಾಕುವಿನಿಂದ ಗಾಯಗೊಳಿಸಿದ್ದಾನೆ. ಸೈಫ್ ಅಲಿ ಖಾನ್ ಅವರ ಬೆನ್ನು, ಕುತ್ತಿಗೆ ಮತ್ತು ತೋಳಿನ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಇರಿಯಲಾಗಿದೆ ಎಂದು ಹೇಳಲಾಗುತ್ತಿದೆ.

ಗಾಯಗೊಂಡ ತಂದೆಯನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಮಗ
ಅಷ್ಟೇ ಅಲ್ಲ, ಈ ದಾಳಿಯ ನಂತರ ಏನಾಯಿತು ಎಂಬುದೂ ಬಹಿರಂಗವಾಗಿದೆ. ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದವರು ಯಾರು ಮತ್ತು ಹೇಗೆ ಗೊತ್ತಾ?. ಸೈಫ್ಗೆ ಕಳ್ಳರು ಆರು ಬಾರಿ ಇರಿದಿದ್ದಾಗ, ಅವರ ಮಗ ಇಬ್ರಾಹಿಂ ಅಲಿಖಾನ್ ಆಸ್ಪತ್ರೆಗೆ ಕರೆದೊಯ್ದರು. 23ರ ಹರೆಯದ ಇಬ್ರಾಹಿಂ ತನ್ನ ದುಬಾರಿ ಬೆಲೆಯ ಐಷಾರಾಮಿ ವಾಹನಗಳನ್ನು ಮಧ್ಯರಾತ್ರಿ ಬಿಟ್ಟು ಆಟೋದಲ್ಲಿ ತನ್ನ ತಂದೆಯನ್ನು ಲೀಲಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಸ್ಥಿತಿ ಬಂದೊದಗಿದೆ. ಆದರೆ ಆತ ಆಟೋದಲ್ಲಿ ಹೋಗಿದ್ದ ಕಾರಣವೂ ಇದೀಗ ಬಹಿರಂಗವಾಗಿದೆ.
ಕಾರಣವಿಷ್ಟೇ….
ಸೈಫ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದಾಗ, ಕಾರು ರೆಡಿ ಇರಲಿಲ್ಲ ಮತ್ತು ಕಾರಿಗೆ ಕಾಯುತ್ತ ಕುಳಿತರೆ ಅಹಿತಕರ ಘಟನೆ ನಡೆಯಬಹುದು ಎಂದು ಆಲೋಚಿಸಿದ್ದಾರೆ. ಸೈಫ್ ರಕ್ತಸ್ರಾವ ನೋಡಿ ಹೆಚ್ಚು ಸಮಯ ಕಾಯುವುದು ಸರಿಯೆನಿಸಲಿಲ್ಲ. ಹೀಗಿರುವಾಗ ಇಬ್ರಾಹಿಂ ಕೂಡಲೇ ಆಟೋ ರಿಕ್ಷಾ ಹಿಡಿದು ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಸೈಫ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಅವರ ಮನೆಯಿಂದ 2 ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಲಾಗುತ್ತಿದೆ.
ದೊಡ್ಡ ಮಾಹಿತಿ ಬಹಿರಂಗ
ಇದೀಗ ಈ ವಿಚಾರದಲ್ಲಿ ದೊಡ್ಡ ಮಾಹಿತಿ ಹೊರಬಿದ್ದಿದೆ. ಆರೋಪಿಯನ್ನು ಗುರುತಿಸಲಾಗಿದ್ದು, ಇದೀಗ ಆತನನ್ನು ಬಂಧಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲು ಮುಂಬೈ ಪೊಲೀಸರ 10 ತಂಡಗಳು ನಿರತವಾಗಿದ್ದು, ಆ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿರುವ ವೇಗವನ್ನು ಗಮನಿಸಿದರೆ, ಶೀಘ್ರದಲ್ಲೇ ದಾಳಿಕೋರನನ್ನು ಹಿಡಿಯುವ ಸಾಧ್ಯತೆಯಿದೆ.