ಸೋಶಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿರುವುದು ಗೊತ್ತಿರುವ ವಿಚಾರ. ಉರ್ಫಿ ಆಗಾಗ್ಗೆ ವಿಶಿಷ್ಟ ವಿನೂತನ ಉಡುಪುಗಳ ವಿಡಿಯೋಗಳನ್ನು ಇಂಟರ್ನೆಟ್ನಲ್ಲಿ ಹಂಚಿಕೊಳ್ಳುತ್ತಾರೆ. ಇದನ್ನು ನೋಡಿದ ಜನರು ಸಹ ಆಕೆಯನ್ನು ಪ್ರಶಂಸಿಸುತ್ತಾರೆ. ಆದರೆ ನಿಮಗೆ ಗೊತ್ತಾ…ಉರ್ಫಿ ತನ್ನ ಉಡುಗೆಯಿಂದಾಗಿಯೇ ಟ್ರೋಲ್ ಆಗುತ್ತಿದ್ದ ಕಾಲವೊಂದಿತ್ತು.
ವಿಡಿಯೋ ಹಂಚಿಕೊಂಡ ಉರ್ಫಿ
ಉರ್ಫಿ ಇನ್ಸ್ಟಾಗ್ರಾಮ್ ನಲ್ಲಿ ಇತ್ತೀಚೆಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಉರ್ಫಿ ತನ್ನ ಹೊಸ ಉಡುಪನ್ನು ಸೇಫ್ಟಿ ಪಿನ್ಗಳಿಂದ ತಯಾರಿಸಿರುವುದನ್ನು ಕಾಣಬಹುದು. ಅಷ್ಟೇ ಅಲ್ಲ, ಈ ಉಡುಪಿನ ಜೊತೆಗಿರುವ ಪರ್ಸ್ ಮಂಜುಗಡ್ಡೆಯಿಂದ ಮಾಡಲ್ಪಟ್ಟಿದೆ. ಉರ್ಫಿ ಮತ್ತು ಅವರ ತಂಡ ಒಟ್ಟಾಗಿ ಅದರಲ್ಲಿ ಕೆಲಸ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈಗ, ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜನರು ಕೂಡ ಇದರ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.
ಏನಂದ್ರು ಬಳಕೆದಾರರು?
ಈ ವಿಡಿಯೋ ಬಗ್ಗೆ ಕಾಮೆಂಟ್ ಮಾಡುತ್ತಾ, ಓರ್ವ ಬಳಕೆದಾರರು ನೀವು ಕೇನ್ಸ್ಗೆ ಹೋಗಬೇಕು ಎಂದು ತೋರುತ್ತಿದೆ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಐಸ್ ಪರ್ಸ್…ಇದು ತುಂಬಾ ವಿಭಿನ್ನವಾಗಿದೆ ಎಂದು ಬರೆದಿದ್ದಾರೆ. ಮತ್ತೆ ಕೆಲವರು ನಿಮ್ಮ ಉಡುಗೆ ತುಂಬಾ ಮುದ್ದಾಗಿದೆ, ನೀವು ಮಾತ್ರ ಇದನ್ನು ಮಾಡಬಹುದು ಎಂದು ಹೇಳಿದ್ದಾರೆ. ಇದು ನಿಜವಾಗಿಯೂ ತುಂಬಾ ವಿಭಿನ್ನವಾಗಿದೆ ಎಂದು ಹೀಗೆ ತರಹೇವಾರಿ ಕಾಮೆಂಟ್ಗಳನ್ನು ಮಾಡಿದ್ದಾರೆ.
ಉರ್ಫಿ ತನ್ನ ವಿಶಿಷ್ಟ ಉಡುಗೆಗೆ ಜನಪ್ರಿಯ
ಉರ್ಫಿ ಜಾವೇದ್ ತಮ್ಮ ವಿಶಿಷ್ಟ ಉಡುಪುಗಳ ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಉರ್ಫಿಯ ಹೊಸ ಉಡುಪುಗಳ ವಿಡಿಯೋಗಳ ಬಗ್ಗೆ ಬಳಕೆದಾರರು ಬಹಳಷ್ಟು ಕಾಮೆಂಟ್ಗಳನ್ನು ಸಹ ಮಾಡುತ್ತಾರೆ. ಉರ್ಫಿ ಜಾವೇದ್ ಅವರ ಫ್ಯಾಷನ್ ಯಾವಾಗಲೂ ಅವರನ್ನು ಸುದ್ದಿಯಲ್ಲಿರಿಸುತ್ತದೆ. ಆದರೆ ಇದಕ್ಕಾಗಿ ಹಿಂದೆಲ್ಲಾ ಅವರು ಹಲವು ಬಾರಿ ಟೀಕೆಗಳನ್ನು ಎದುರಿಸಬೇಕಾಯಿತು, ಆದರೆ ಈಗ ಅವರು ಹೆಚ್ಚಾಗಿ ಪ್ರಶಂಸೆಯನ್ನು ಪಡೆಯುತ್ತಾರೆ.
ಅಂದಹಾಗೆ ಪಾಪರಾಜಿಗಳು ಅವರ ವಿಶಿಷ್ಟ ಪರಿಕರದ ಕುರಿತು ಪ್ರಶ್ನಿಸಿದರು. ಐಸ್ ಬ್ಯಾಗ್ ಒಳಗೆ ನಿಮ್ಮ ಫೋನ್ ಹಾನಿಗೊಳಗಾಗಬಹುದೇ ಎಂದು ಕೇಳಿದಾಗ, ಅವರು ಹಾಸ್ಯಮಯವಾಗಿ, ನಕ್ಲಿ ಫೋನ್ ಹೈ (ಇದು ನಕಲಿ ಫೋನ್) ಎಂದು ಉತ್ತರಿಸಿದರು, ಎಲ್ಲರನ್ನೂ ರಂಜಿಸಿದರು.
ಎಂಗೇಜ್ಮೆಂಟ್ ಫೋಟೋ ವೈರಲ್
ಒಂದೆಡೆ ಅವರ ವಿಚಿತ್ರ ಫ್ಯಾಷನ್ ಸಾಕಷ್ಟು ಸದ್ದು ಮಾಡುತ್ತಿದ್ದರೆ ಮತ್ತೊಂದು ಕಡೆ ಉರ್ಫಿಯ ಬೆರಳಿಗೆ ನಿಗೂಢ ವ್ಯಕ್ತಿಯೊಬ್ಬ ಉಂಗುರ ಹಾಕುತ್ತಿರುವುದನ್ನು ತೋರಿಸುವ ವೈರಲ್ ಫೋಟೋವೊಂದು ನಿಶ್ಚಿತಾರ್ಥದ ವದಂತಿಗಳಿಗೆ ನಾಂದಿ ಹಾಡಿದೆ. ಹಲವರು ಇದನ್ನು ಒಂದು ಪ್ರಾಜೆಕ್ಟ್ ಸಲುವಾಗಿ ಅಥವಾ ಪ್ರಚಾರಕ್ಕಾಗಿ ಮಾಡಲಾಗಿದೆ ಎಂದು ಹೇಳುತ್ತಾರೆ.
ವಿಶಿಷ್ಟ ಫ್ಯಾಷನ್ ಗೆ ಹೆಸರುವಾಸಿಯಾದ ಉರ್ಫಿ ಜಾವೇದ್, ಐಸ್ ಬ್ಯಾಗ್ ಆಗಿ ಬದಲಾದ ಹ್ಯಾಂಡ್ಬ್ಯಾಗ್ ಆಗಿರಲಿ ಅಥವಾ ನಿಶ್ಚಿತಾರ್ಥದ ವದಂತಿಗಳಾಗಿರಲಿ, ಅದು ನಿಜವಾಗಿರಬಹುದು ಅಥವಾ ಇಲ್ಲದಿರಬಹುದು ತನ್ನ ಪ್ರೇಕ್ಷಕರನ್ನು ರಂಜಿಸುವುದನ್ನು ಮುಂದುವರೆಸಿದ್ದಾರೆ.
ಮಾಧ್ಯಮಗಳ ಮುಂದೆ ಬಟ್ಟೆ ಬದಲಾಯಿಸಿಕೊಂಡ ಉರ್ಫಿ
ಈ ಹಿಂದೆ ಉರ್ಫಿ ಪಾಪರಾಜಿಗಳೊಂದಿಗೆ ಮಾತನಾಡುತ್ತಾ ಅವರ ಮುಂದೆ ತನ್ನ ಉಡುಗೆಯನ್ನು ಬದಲಾಯಿಸಲು ಪ್ರಾರಂಭಿಸುತ್ತಾರೆ. ಈ ವಿಡಿಯೋವನ್ನು ಫಿಲ್ಮಿಗ್ಯಾನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿತ್ತು. ಪಾಪರಾಜಿಗಳೊಂದಿಗೆ ಮಾತನಾಡುವಾಗ, ಉರ್ಫಿ ಅವರ ಮುಂದೆ ಒಟ್ಟು 5 ಉಡುಪುಗಳನ್ನು ಬದಲಾಯಿಸುತ್ತಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ಆಕೆಯ ಬಟ್ಟೆಗಳನ್ನು ಎಳೆಯುತ್ತಿದ್ದಾನೆ. ಅವಳು ಒಂದರ ನಂತರ ಒಂದರಂತೆ ಬದಲಾಗುತ್ತಿರುವ ಪದರಗಳ ಉಡುಪುಗಳನ್ನು ಧರಿಸಿದ್ದಾರೆ. ಕೊನೆಯಲ್ಲಿ, ಉರ್ಫಿ ತಿಳಿ ಹಸಿರು ಬಣ್ಣದ ಆಫ್-ಶೋಲ್ಡರ್ ಬಾಡಿ ಫಿಟೆಡ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದರು.
ಉರ್ಫಿ ಜಾವೇದ್ ಪ್ರೈಮ್ ವಿಡಿಯೋದ ‘ಫಾಲೋ ಕರ್ ಲೋ ಯಾರ್’ ಸರಣಿಯಲ್ಲಿ ಕಾಣಿಸಿಕೊಂಡಿದ್ದು, ಈ 9-ಕಂತುಗಳ ಸರಣಿಯಲ್ಲಿ ನಟಿಯ ಜೀವನದ ಫಿಲ್ಟರ್ ಮಾಡದ ಕಥೆಗಳನ್ನು ತೋರಿಸಲಾಗಿದೆ.