ನಟ ಶಿವ ರಾಜ್ ಕುಮಾರ್ ಅವರನ್ನು ನಾವೆಲ್ಲರು ಪ್ರೀತಿಯಿಂದ ಶಿವಣ್ಣ ಎಂದೇ ಕರೆಯುತ್ತೇವೆ. ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ದಂಪತಿಯ ಮೊದಲ ಮಗ ಶಿವಣ್ಣ. ಇವರೆಂದರೆ ಕರುನಾಡಿಗೆ ಪ್ರೀತಿ. ಶಿವಣ್ಣ ಅವರಿಗೆ ಈಗ ವಯಸ್ಸು 62 ಆಗಿದ್ದರೂ ಯಂಗ್ ಹುಡುಗನ ಹಾಗೆಯೇ ಇದ್ದಾರೆ. ಶಿವಣ್ಣ ಅವರ ಎನರ್ಜಿಯನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಅಷ್ಟೇ ಸತ್ಯ. ಇಂಥ ಶಿವಣ್ಣ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ತಮಿಳು ಮಾತಾಡೋದೆ ತಪ್ಪಾ ಎಂದು ಪ್ರಶ್ನೆ ಕೇಳಿದ್ದಾರೆ. ಅಷ್ಟಕ್ಕೂ ಶಿವಣ್ಣ ಈ ರೀತಿ ಕೇಳಿದ್ದು ಯಾಕೆ..?
ಈಗಾಗಲೇ ನಮಗೆಲ್ಲಾ ಗೊತ್ತಿರುವ ಹಾಗೆ ಶಿವಣ್ಣ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ ಭೈರತಿ ರಣಗಲ್ ಮುಂದಿನ ವಾರ ಅಂದರೆ ನವೆಂಬರ್ 15ರಂದು ತೆರೆ ಕಾಣುತ್ತಿದೆ. ಈ ಸಿನಿಮಾಗಾಗಿ ಕನ್ನಡ ಚಿತ್ರರಂಗ ಮಾತ್ರವಲ್ಲದೇ, ಹೊರರಾಜ್ಯದವರು ಎದುರು ನೋಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ಮತ್ತು ಹಾಡುಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆಯೇ ಸಿನಿಮಾ ಪ್ರೊಮೋಷನ್ ಗಾಗಿ ಶಿವಣ್ಣ ಅವರು ಹಲವು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಂದರ್ಶನಗಳ ನಡುವೆಯೇ ಶಿವಣ್ಣ ಅವರು ಭಾಷೆಯ ಬಗ್ಗೆ ಮಾತನಾಡಿದ್ದಾರೆ..

ನಮಗೆಲ್ಲಾ ಗೊತ್ತಿರುವ ಹಾಗೆ ಶಿವಣ್ಣ ಅವರು ಮೊದಲಿಗೆ ಕನ್ನಡ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದರು, ಈಗ ತಮಿಳು ಚಿತ್ರಗಳಲ್ಲಿ ಕೂಡ ನಟಿಸುತ್ತಿದ್ದಾರೆ. ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದು ಸಣ್ಣ ಪಾತ್ರದಲ್ಲೇ ಆದರೂ, ಸಿಕ್ಕಾಪಟ್ಟೆ ಪವರ್ ಫುಲ್ ಆಗಿತ್ತು ನರಸಿಂಹ ಪಾತ್ರ. ಈ ಸಿನಿಮಾ ಇಂದ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಪ್ರಿಯರೆಲ್ಲರು ಶಿವಣ್ಣ ಅವರ ಫ್ಯಾನ್ಸ್ ಆಗಿದ್ದಾರೆ. ಜೈಲರ್ ಸಮಯದಲ್ಲಿ ಶಿವಣ್ಣ ಹಲವು ತಮಿಳು ಸಂದರ್ಶನಗಳಲ್ಲಿ ಕಾಣಿಸಿಕೊಂಡಿದ್ದರು. ಅವುಗಳಲ್ಲಿ ತಮಿಳಿನಲ್ಲೇ ಮಾತನಾಡಿದ್ದರು. ಆ ವೇಳೆ ಕೆಲವರು ಶಿವಣ್ಣ ತಮಿಳು ಮಾತನಾಡಿದಕ್ಕಾಗಿ ಬೇರೆ ತರವೇ ಪ್ರಶ್ನೆ ಕೇಳಿದ್ದರು.
ಅದಕ್ಕೆಲ್ಲಾ ಶಿವಣ್ಣ ಈಗ ಉತ್ತರ ಕೊಟ್ಟಿದ್ದಾರೆ.. ತಮಿಳು ಮಾತಾಡಿದ್ರೆ ತಪ್ಪಾ? ನಾವು ಭಾರತೀಯರು, ಇಲ್ಲಿನ ಎಲ್ಲಾ ರಾಜ್ಯವು ನಮ್ಮದೇ, ಎಲ್ಲಾ ಭಾಷೆ ಮೇಲು ಗೌರವ ಇರಬೇಕು. ಚೆನ್ನೈ ನಮಗೆ ಎಲ್ಲಾನೂ ಕೊಟ್ಟಿದೆ. ನಾನು ಹುಟ್ಟಿ ಬೆಳೆದಿದ್ದು ಓದಿದ್ದು ಎಲ್ಲವೂ ಅಲ್ಲೇ. ಅಲ್ಲಿಗೆ ಹೋದಾಗ ತಮಿಳಿನಲ್ಲಿ ಮಾತಾಡ್ತೇನೆ. ಯಾರಿಗೂ ಹೆದರಿ ಬದುಕಬೇಕಿಲ್ಲ, ಭಯ ಇರಬೇಕು ಅದು ಒಳ್ಳೆಯ ವಿಷಯಕ್ಕೆ ಇರಬೇಕು. ಬೇಡದ ವಿಚಾರಕ್ಕೆ ಭಯ ಪಡಬಾರದು.. ಎಂದಿದ್ದಾರೆ ಶಿವಣ್ಣ. ಶಿವಣ್ಣ ಈಗ ಯೋಗಿ ಬಾಬು ಅವರೊಡನೆ ಮತ್ತೊಂದು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಶಿವಣ್ಣ ಅವರು ಹೇಳುವುದು ಸತ್ಯವೇ, ಶಿವಣ್ಣ ಅವರು ಹುಟ್ಟಿದ್ದು 1962ರಲ್ಲಿ, ಆ ಸಮಯದಲ್ಲಿ ದಕ್ಷಿಣ ಭಾರತ ಚಿತ್ರರಂಗ ಪೂರ್ತಿ ಚೆನ್ನೈನಲ್ಲಿತ್ತು. ಕಲಾವಿದರು ಸಹ ಅಲ್ಲಿಯೇ ಇದ್ದರು. ಶಿವಣ್ಣ ಅವರು ಓದಿದ್ದು ಅಲ್ಲೇ, ತಮಿಳು ಭಾಷೆಯನ್ನೇ ಓದಿದ್ದರು, ಬಿಎಸ್ಸಿ ಮುಗಿಸಿ, ಆಕ್ಟಿಂಗ್ ಸ್ಕೂಲ್ ಗೆ ಸೇರಿದ್ದು ಕೂಡ ಚೆನ್ನೈನಲ್ಲೇ. ಬಳಿಕ ಆನಂದ್ ಸಿನಿಮಾ ಮೂಲಕ ಹೀರೋ ಆದರೂ ಶಿವಣ್ಣ. ಆ ಸಮಯಕ್ಕೆ ಕನ್ನಡ ಚಿತ್ರರಂಗ ಬೆಂಗಳೂರಿಗೆ ಶಿಫ್ಟ್ ಆಗಿತ್ತು. ಶಿವಣ್ಣ ಸಹ ಇಲ್ಲಿಯೇ ಬಂದರು. ಈ ಕಾರಣಗಳಿಗೆ ಶಿವಣ್ಣ ಅವರಿಗೆ ಚೆನ್ನೈ ಮತ್ತು ತಮಿಳು ಭಾಷೆ ತುಂಬಾ ಸ್ಪೆಷಲ್.