ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಐಯ್ಯರ್ ರನ್ನು ನೆನೆದಿದ್ದಾರೆ. ಸಾನ್ಯಾ ಐಯ್ಯರ್ ಮತ್ತು ರೂಪೇಶ್ ಶೆಟ್ಟಿ ಓಟಿಟಿಯಿಂದ ತುಂಬಾ ಕ್ಲೋಸ್ ಆಗಿದ್ದರು. ಬಿಗ್ ಬಾಸ್ ಸೀನಸ್ 09ರಲ್ಲೂ ಜೊತೆಗೆ ಇರುತ್ತಿದ್ರೂ ಸಾನ್ಯಾ ಐಯ್ಯರ್ ಔಟ್ ಆದಾಗ ರೂಪೇಶ್ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ರು. ನನಗೆ ಈ ಮನೆಯಲ್ಲಿ ಸಿಕ್ಕ ಆತ್ಮೀಯ ಗೆಳತಿ ನೀನು. ನಿನ್ನ ಕೇರ್ ನನಗೆ ತುಂಬಾ ಇಷ್ಟ ಆಗಿತ್ತು. ಮನೆಗೆ ಹೋದ ಮೇಲೆ ಬದಲಾಗಬೇಡ ಎಂದು ರೂಪೇಶ್ ಶೆಟ್ಟಿ ಹೇಳಿದ್ರು.

ಮೊದಲಿಗೆ ಹೋಗಿ ಸಾನ್ಯಾನ ತಬ್ಬಿಕೊಳ್ತೀನಿ. ಹೇಗಿದ್ದೀಯಾ ಅಂತ ಕೇಳುತ್ತೇನೆ. ಪ್ರೀತಿ ಮತ್ತು ಸ್ನೇಹಕ್ಕಿಂತಲೂ ಮುಖ್ಯವಾಗಿ ಮೊದಲಿದ್ದ ಕಾಳಜಿ ಈಗಲೂ ಇದೆಯಾ ಅಂತ ಕೇಳ್ತೀನಿ ಎಂದು ಹೇಳಿದ್ದಾರೆ. ಈ ಮನೆಯಲ್ಲಿ ಸಾನ್ಯಾ ಅವರ ಜೊತೆ ಇದ್ದ ಅನುಭವ ನನಗಿದೆ. ಆದರೆ ಮನೆಯ ಹೊರಗಿನ ಅನುಭವ ಇಲ್ಲ. ಮನೆಯಲ್ಲಿ ಇದ್ದ ಭಾವನೆ ಈಗಲೂ ಹಾಗೆಯೇ ಇದೆಯಾ? ಲೈಫ್ ಹೇಗೆಲ್ಲ ಬದಲಾಗಿದೆ ಎಂದು ಕೇಳ್ತೇನೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
ನಾನು ನಿಮಗೆ ಈ ಮನೆಯಲ್ಲಿ ಇದ್ದಷ್ಟೇ ಈಗಲೂ ಮುಖ್ಯನಾ ಅಂತ ಸಾನ್ಯಾನ ಕೇಳ್ತೀನಿ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಸಾನ್ಯಾ ಉತ್ತರಕ್ಕೆ ಕಾಯ್ತಾ ಇದ್ದಾರೆ. ಸಾನ್ಯಾ ಐಯ್ಯರ್ ಮನೆಗೆ ಹೋದ ಮೇಲೆ ಬದಲಾಗಿದ್ದಾರಾ, ಇಲ್ವಾ ಎಂದು ರೂಪೇಶ್ ಶೆಟ್ಟಿಗೆ ಗೊತ್ತಿಲ್ಲ. ಅದಕ್ಕೆ ಮೊದಲು ಕಾಳಜಿ ಬದಲಾಗಿಲ್ವಾ ಎಂದು ಕೇಳುತ್ತಾರಂತೆ.