ಬಿಗ್ ಬಾಸ್ ಸೀಸನ್ 9 ಶುರುವಿನಲ್ಲಿ ಬಹಳ ಹೈಪ್ ಪಡೆದುಕೊಂಡಿತ್ತು. ಆದರೆ ದಿನ ಕಳೆಯುತ್ತಿದ್ದಂತೆ ಈ ಶೋ ನ ಛಾಪು ಕಳೆದುಕೊಳ್ಳುತ್ತಿದೆ.ಮೊದಲು ಹೈಪ್ ಪಡೆದುಕೊಳ್ಳಲು ಕಾರಣ ಈ ಬಾರಿಯ ಸ್ಪರ್ದಿಗಳೇ ಹಾಗೆಯೇ ಇದೇ ಸ್ಪರ್ದಿಗಳಿಂದ ಈ ಮನೆಯನ್ನು ವೀಕ್ಷಿಸುವ ಪ್ರೇಕ್ಷಕರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ ಎಂದರೆ ತಪ್ಪಾಗಲಾರದು.ಬಿಗ್ ಬಾಸ್ ಮನೆಯಲ್ಲಿ ಮುಖ್ಯವಾದ ಅಂಶ ಎಂದರೆ ಅದು ಮನೋರಂಜನೆ.ಆದರೆ ಈ ಮನೆಯ ಮಂದಿಗಳು ಜಗಳಗಳಿಂದನೆ ಮನೋರಂಜನೆ ನೀಡುತ್ತಿರುವುದು ಜನರಲ್ಲಿ ಬೇಸರ ತಂದಿದೆ.ಆದರೆ ಬಿಗ್ ಬಾಸ್ ತನ್ನ ವೀಕ್ಷಕರನ್ನು ಕಳೆದುಕೊಳ್ಳಲು ಇಷ್ಟ ಪಡದೆ ತನ್ನ ವಿಭಿನ್ನ ಟಾಸ್ಕ್ ಗಳನ್ನು ನೀಡುತ್ತಾ ಪ್ರೇಕ್ಷಕರ ಸಂಖ್ಯೆ ಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

ಈ ಬಾರಿ ಎಲ್ಲಾ ಸಿಸನ್ ಗಳಿಗಿಂತಲು ಬಹಳ ವಿಭಿನ್ನವಾಗಿರುವುದು ಎಲ್ಲಾ ಪ್ರೇಕ್ಷಕರನ್ನು ಸೆಳೆದಿದೆ ಎಂದರೆ ತಪ್ಪಾಗಲಾರದು.ಈ ಬಾರಿ ಸ್ಲರ್ದಿಗಳೇ ಎಲ್ಲರನ್ನು ಸೆಳೆದಿದ್ದಾರೆ.ಈ ಸೀಸನ್ ಶುರುವಾಗಿ ಈಗಾಗಲೇ 6ನೇ ವಾರಕ್ಕೆ ಕಾಲಿಟ್ಟಿದೆ.ಈ ಆರು ವಾರಕ್ಕೆ ಈ ಮನೆ ಸಾಕಷ್ಟು ಏರಿಳಿತಗಳನ್ನು ಕಂಡಿದೆ.ಈ ಮನೆಯಲ್ಲಿ ಮನೋರಂಜನೆ ಗಿಂತ ಜಗಳಗಳೇ ಹೆಚ್ ಹೆಚ್ಚಾಗಿದೆ.ಈಗ ಬಿಗ್ ಬಾಸ್ ಸೀಸನ್ 9ರ ಮನೆಯಿಂದ “ಕಿರಣ್ ,ಐಶ್ವರ್ಯ ಪಿಸೆ,ನಾವಜ್,ದರ್ಶ ಚಂದ್ರಪ್ಪ ಮಯೂರಿ ಹಾಗೂ ನೇಹಾ ಗೌಡ” ಹೊರಬಿದ್ದಿದ್ದಾರೆ.ಇನ್ನು ನೆನ್ನೆ ನಡೆದ ಎಲಿಮಿನೇಷನ್ ಯಾರೋ ಕೂಡ ಊಹಿಸದೆ ಇರುವ ಹೆಸರು “ಸಾನಿಯಾ ಅಯ್ಯರ್” ಅವರು ಹೊರಬಿದ್ದರು.
ಇವೆಲ್ಲಾ ಟ್ವಿಸ್ಟ್ ನಡುವೆ ಕಳೆಯುತ್ತಿರುವ ಈ ಬಾರಿಯ ಸೀಸನ್ 9 ಇದೀಗ ಮತ್ತೊಂದು ಟ್ವಿಸ್ಟ್ ನೀಡುವ ಟಾಸ್ಕ್ ನೀಡುತ್ತಾ ಬಹಳ ಸದ್ದು ಮಾಡುತ್ತಿದೆ.ಇದೀಗ ಈ ವಾರ ಪ್ರಶಾಂತ್ ಸಂಬರ್ಗಿ ಕ್ಯಾಪ್ಟನ್ಸ್ಯ್ ಯಲ್ಲಿ ಹಲವಾರು ಟಾಸ್ಕ್ ಗಳಲ್ಲಿ ಗಮನ ಸೆಳೆದಿದ್ದು ಎಂದರೆ ಅದು ಫೆಕ್ ಹಾಗೂ ರಿಯಲ್ ಟಾಸ್ಕ್.ಈ ಟಾಸ್ಕ್ ಮುಂಕಾಂತರ ಮನೆಯವರು ತಮ್ಮ ಮೇಲಿರುವ ಭಾವನೆಗಳನ್ನು ತಿಳಿದುಕೊಳ್ಳಲ್ಲು ಬಿಗ್ ಅವಕಾಶವನ್ನು ನೀಡಿದ್ದರು. ಅದ್ರಲ್ಲಿ ಎಲ್ಲರ ಉಬ್ಬೇರಿಸಿದಂತೆ ಮಾಡಿದವರು ಎಂದರೆ ಅದು ರೂಪೇಶ್ ರಾಜಣ್ಣ. ಕಳೆದ ಆರು ವಾರಗಳಿಂದ ಮುಗ್ದ ರೂಪೇಶ್ ರಾಜಣ್ಣ ಈಗ ವ್ಯಾಘ್ರವಾಗಿ ಬಡಲಾಗುತ್ತಿದ್ದಾರೆ ಎಂಬ ಅಭಿಪ್ರಾಯಗಳನ್ನು ಹುಟ್ಟಿ ಹಾಕಿದೆ.
ಈ ಟಾಸ್ಕ್ ನ ಅನುಸಾರವಾಗಿ ತಮ್ಮ ಅಭಿಪ್ರಾಯದ ಫೆಕ್ ಹಾಗೂ ರಿಯಲ್ ತಿಳಿಸುವಲ್ಲಿ ಬಹಳ ಕಾರವಾಗಿ ಹಾಗೂ ನಿಷ್ಟೋರ ದಿಂದ ವರ್ತನೆ ಮಾಡಿದ್ದಾರೆ.ಇವರ ಈ ವರ್ತನೆ ಮನೆಯವರಿಗೆಲ್ಲಾ ಬೇಸರವಾಗಿದೆ.ಎಲ್ಲರೂ ಬೇಸರ ವ್ಯಕ್ತಪಡಿಸಿದ್ದರು ಕೂಡ ರೂಪೇಶ್ ರಾಜಣ್ಣ ತನ್ನ ನಿಷ್ಠೂರದ ಮಾತುಗಳನ್ನು ಮುಂದುವರೆಸಿ ಎಲ್ಲರಿಗೂ ಬೇಸರವನ್ನು ಹೆಚ್ಚಿಸುತ್ತಾ ಕಿಚ್ಚನ್ನು ಹಚಿಸುತ್ತಿದ್ದಾರೆ. ಇನ್ನು ಶಾಂತ ರೀತಿಯಿಂದ ವರ್ತಿಸುವ ರಾಕಿ ಕೊಡ ರಾಜಣ್ಣ ನ ವಿರುದ್ಧ ಸಿಡಿದೆದ್ದಿದ್ದಾನೆ.
ಈ ವಾರದ ಎಲ್ಲಾ ಟಾಸ್ಕ್ ಮುಗಿದ ನಂತರ ಮನೆಯ ಮಂದಿ ಎಲ್ಲರಿಗೂ ಹಗ್ ಕೊಟ್ಟು ಈ ವಾರದ ಮುನಿಸಿ ಬೇಸರವನ್ನು ಮುಂದಿನ ದಿನಕ್ಕೆ ತೆಗೆದುಕೊಳ್ಳದೆ ಹೋಗದಿರುವುದು ವಾಡಿಕೆ.ಆದರೆ ರಾಜಣ್ಣ ಮಾತ್ರ ಆ ಮಾತುಗಳನ್ನು ಹಾಗೂ ವರ್ತನೆಯನ್ನು ಬದಲಾಯಿಸಿಕೊಳ್ಳಲು ಸಿದ್ಧರಿಲ್ಲ.ದಿನ ಕಳೆಯುತ್ತಿದ್ದಂತೆ ರಾಜಣ್ಣ ಅವರ ವರ್ತನೆ ಮನೆ ಮಂದಿಗೆಲ್ಲಾ ಅಲ್ಲದೆ ಪ್ರೇಕ್ಷಕರಿಗೂ ಕೂಡ ಕಿರಿ ಕಿರಿ ಎನ್ನಿಸುತ್ತಿದೆ.ಇನ್ನು ಈ ವಾರ ಇದೆ ಕಾರಣದಿಂದ ಮನೆಯಿಂದ ಹೊರನಡೆಯುತ್ತಾರ ಎಂದು ನಾವೆಲ್ಲರೂ ವಾರಾಂತ್ಯದ ವರೆಗೂ ಕಾದು ನೋಡಬೇಕಿದೆ.