ನಟ ಅಂಬರೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಕಲಿಯುಗ ಕರ್ಣ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ನಟ. ಇವರು ತಮ್ಮ ನಟನೆಯ ವಿಚಾರಕ್ಕೆ ಮಾತ್ರವಲ್ಲ, ತಮ್ಮ ಒಳ್ಳೆಯ ಗುಣ ಜನರಿಗೆ ಸಹಾಯ ಮಾಡುವ ಮನೋಭಾವದ ಕಾರಣಕ್ಕೆ ಹೆಚ್ಚು ಸುದ್ದಿಯಾದವರು. ಅಂಬರೀಶ್ ಅವರ ಈ ಗುಣಕ್ಕೆ ಎಲ್ಲರೂ ಇವರನ್ನು ತುಂಬಾ ಇಷ್ಟಪಡುತ್ತಿದ್ದರು. ಕೇವಲ ಜನರಿಗೆ ಸಹಾಯ ಮಾಡುವುದು ಮಾತ್ರವಲ್ಲ, ತಮ್ಮ ಆಪ್ತರಿಗೆ ಆಗಾಗ ಒಳ್ಳೆಯ ಗಿಫ್ಟ್ ಗಳನ್ನು ಕೊಡುವ ಮೂಲಕ ಎಲ್ಲರ ಜೊತೆಗೆ ಅಷ್ಟು ಚೆನ್ನಾಗಿರುತ್ತಿದ್ದರು. ಯಶ್ ಅವರನ್ನು ತಮ್ಮ ಮಗನ ಹಾಗೆ ಕಾಣುತ್ತಿದ್ದರು ಅಂಬರೀಶ್ ಅವರು. ಇದೀಗ ಯಶ್ ಅವರು ಅಂಬಿ ಅಣ್ಣನ ಆಸೆಯನ್ನು ಈಡೇರಿಸಿದ್ದಾರೆ. ಇದರಿಂದಾಗಿ ಅಂಬಿ ಅವರ ಇಡೀ ಕುಟುಂಬ ಸಂತೋಷವಾಗಿದೆ. ಅಷ್ಟಕ್ಕೂ ಯಶ್ ಅವರು ಮಾಡಿದ್ದೇನು ಗೊತ್ತಾ? ಫುಲ್ ಡೀಟೇಲ್ಸ್ ಇಲ್ಲಿದೆ.
ನಮಗೆಲ್ಲಾ ನೆನಪಿರುವ ಹಾಗೆ ನಟ ಯಶ್ ಅವರ ಮಗಳು ಆಯ್ರ ಅವರಿಗೆ ಅಂಬರೀಶ್ ಅವರು ಒಂದು ವಿಶೇಷವಾದ ಉಡುಗೊರೆಯನ್ನು ನೀಡಿದ್ದರು. ಅಂಬರೀಷ್ ಅವರು ಇನ್ನಿಲ್ಲವಾದ ಕೆಲವು ದಿವಸಕ್ಕೆ ಆಯ್ರ ಹುಟ್ಟಿದ್ದು, ಆದರೆ ರಾಧಿಕಾ ಪಂಡಿತ್ ಅವರ ಸೀಮಂತ ಶಾಸ್ತ್ರದ ದಿವಸ ಅಂಬರೀಶ್ ಅವರು ಮತ್ತು ಸುಮಲತಾ ಅವರು ಇಬ್ಬರೂ ಸಹ ಹೋಗಿದ್ದರು. ಈ ಕಾರ್ಯಕ್ರಮಕ್ಕೆ ಚಂದನವನದ ಎಲ್ಲಾ ಸ್ಟಾರ್ ಗಳು ಬಂದಿದ್ದರು. ಅಂಬರೀಶ್ ಅವರು ಲವಲವಿಕೆ ಇಂದ ಪಾಲ್ಗೊಂಡ ಕೊನೆಯ ಕಾರ್ಯಕ್ರಮ ಇದು ಎಂದು ಹೇಳಿದರು ತಪ್ಪಲ್ಲ. ರಾಧಿಕಾ ಅವರ ಸೀಮಂತ ನಡೆದ ಕೆಲವೇ ದಿನಕ್ಕೆ ಅಂಬರೀಶ್ ಅವರು ವಿಧಿವಶರಾದರು. ಆದರೆ ಆ ವೇಳೆಗಾಗಲೇ ಯಶ್ ಹಾಗೂ ರಾಧಿಕಾ ದಂಪತಿಗೆ ಒಂದು ವಿಶೇಷವಾದ ಉಡುಗೊರೆಯನ್ನು ನೀಡಿದ್ದರು. ಆ ಉಡುಗೊರೆ ಮಗುವಿಗಾಗಿ ತೊಟ್ಟಿಲು ಆಗಿತ್ತು.

ಯಶ್ ಹಾಗೂ ರಾಧಿಕಾ ದಂಪತಿಗೆ ಜನಸುವ ಮುದ್ದಿನ ಮಗಳಿಗಾಗಿ ಒಂದು ವಿಶೇಷವಾದ ತೊಟ್ಟಿಳನ್ನು ಮಾಡಿಸಿಕೊಟ್ಟಿದ್ದರು ರೆಬೆಲ್ ಸ್ಟಾರ್ ಅಂಬರೀಶ್ ಅವರು. ಕಲಘಟಗಿ ತೊಟ್ಟಿಲನ್ನು ಮಗುವಿಗಾಗಿ ವಿಶೇಷವಾಗಿ ಮಾಡಿಸಿಕೊಟ್ಟಿದ್ದರು. ಅದೇ ತೊಟ್ಟಿಲಿನಲ್ಲಿ ಯಶ್ ಅವರ ಮುದ್ದಿನ ಮಗಳು ಆಯ್ರ ಆಡಿ ಬೆಳೆದಿದ್ದು. ಈ ತೊಟ್ಟಿಲನ್ನು ಅಂಬರೀಶ್ ಅವರು ಬಹಳ ಇಷ್ಟಪಟ್ಟು ಮಾಡಿಸಿಕೊಟ್ಟಿದ್ದರು. ಹಾಗೆಯೇ ಈ ತೊಟ್ಟಿಲಿನ ವಿಚಾರವಾಗಿ ಅಂಬರೀಶ್ ಅವರಿಗೆ ಒಂದು ಆಸೆ ಕೂಡ ಇತ್ತು. ಅದು ಏನು ಎಂದರೆ ತಮ್ಮ ಮೊಮ್ಮಗು, ಅಂದರೆ ಅಭಿಷೇಕ್ ಅಂಬರೀಶ್ ಅವರಿಗೆ ಜನಿಸುವ ಮಗು ಇದೇ ತೊಟ್ಟಿಲಿನಲ್ಲಿ ಮಲಗಬೇಕು, ಆಡಿ ಬೆಳೆಯಬೇಕು ಎನ್ನುವುದು ಅಂಬರೀಶ್ ಅವರ ಆಸೆ ಆಗಿತ್ತು. ಈ ಆಸೆಯನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದ ಯಶ್ ಅವರು ಇದೀಗ ಅಂಬರೀಶ್ ಅವರ ಆಸೆಯನ್ನು ಈಡೇರಿಸಿದ್ದಾರೆ..
ಅಂಬರೀಶ್ ಹಾಗೂ ಸುಮಲತಾ ದಂಪತಿಯ ಮುದ್ದಿನ ಮಗ ಅಭಿಷೇಕ್ ಅಂಬರೀಶ್ ಅವರು ಅಂಬರೀಶ್ ಅವರು ವಿಧಿವಶವಾದ ನಂತರ 2019ರಲ್ಲಿ ಅಮರ್ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾ ಅಂದುಕೊಂಡ ಹಾಗೆ ಅಷ್ಟೇನು ಸದ್ದು ಮಾಡದೇ ಹೋದರು ಸಹ, ಅಭಿಷೇಕ್ ಅವರಿಗೆ ಒಳ್ಳೆಯ ಹೆಸರಂತೂ ಬಂದಿತು. ಇದಾದ ಬಳಿಕ ದುನಿಯಾ ಸೂರಿ ಅವರ ಜೊತೆಗೆ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ ಒಂದು ಮಟ್ಟಕ್ಕೆ ಸದ್ದು ಮಾಡಿತು. ಇನ್ನು ಪರ್ಸನಲ್ ಲೈಫ್ ನಲ್ಲಿ ಕೂಡ ಅಭಿಷೇಕ್ ಅಂಬರೀಶ್ ಅವರು ಮದುವೆಯಾಗಿ ಸುಖವಾದ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ಖ್ಯಾತ ಮಾಡೆಲ್ ಅವಿವಾ ಅವರ ಜೊತೆಗೆ ಅಭಿಷೇಕ್ ಅವರ ಮದುವೆ ಕಳೆದ ವರ್ಷ ನಡೆಯಿತು. ಅವಿವಾ ಬಿಡಪ ಗ್ಲಾಮರ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವವರು.

ಈ ಜೋಡಿಯ ಮದುವೆ ಅದ್ಧೂರಿಯಾಗಿ ನಡೆಯಿತು, ಇವರ ಮದುವೆಗೆ ಚಂದನವನದ ಎಲ್ಲಾ ಕಲಾವಿದರು ಬಂದು ಹರಸಿ ಹಾರೈಸಿ ಹೋಗಿದ್ದರು. ಇತ್ತೀಚೆಗೆ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಅಂಬಿ ಫ್ಯಾನ್ಸ್ ಗೆ ಗುಡ್ ನ್ಯೂಸ್ ನೀಡಿದ್ದರು. ಒಂದೆರಡು ತಿಂಗಳ ಹಿಂದಷ್ಟೇ ಅವಿವಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ರೆಬೆಲ್ ಸ್ಟಾರ್ ಅಂಬರೀಶ್ ಅವರೇ ಮಗನ ಮಗುವಿನ ರೂಪದಲ್ಲಿ ಮತ್ತೆ ಬಂದಿದ್ದಾರೆ ಎನ್ನುವಷ್ಟು ಸಂತೋಷ ಕುಟುಂಬದಲ್ಲಿ ಮನೆ ಮಾಡಿತ್ತು. ಅವಿವಾ ಹಾಗೂ ಅಭಿಶೇಕ್ ದಂಪತಿ ಈಗ ಮಗುವನ್ನು ನೋಡಿಕೊಳ್ಳುವ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜೊತೆಗೆ ಈಗ ರಾಕಿ ಭಾಯ್ ಇವರ ಫ್ಯಾಮಿಲಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದು ಬಹಳ ಸಂತೋಷದ ವಿಷಯ.
ನಟ ಯಶ್ ಅವರು ಅಂಬರೀಶ್ ಅವರ ಕುಟುಂಬದ ಜೊತೆಗೆ ಆತ್ಮೀಯ ಸಂಬಂಧ ಹೊಂದಿರುವವರು. ಯಶ್ ಅವರು ಚಿತ್ರರಂಗದಲ್ಲಿ ಹೆಸರು ಮಾಡುವುದಕ್ಕೆ ಅಂಬರೀಶ್ ಅವರ ಸಪೋರ್ಟ್ ತುಂಬಾ ಇದೆ ಎನ್ನುವುದು ಗೊತ್ತಿರುವ ವಿಷಯ. ಡ್ರಾಮ ಸಿನಿಮಾದಲ್ಲಿ ಅಂಬರೀಶ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಅಂಬರೀಶ್ ಅವರು ಹೋದ ಬಳಿಕ ಅಭಿಷೇಕ್ ಅವರಿಗೆ ಅಣ್ಣನ ಸ್ಥಾನದಲ್ಲಿ ಯಶ್ ಸಹ ಇದ್ದಾರೆ. ಎಲೆಕ್ಷನ್ ವೇಳೆ ಸುಮಲತಾ ಅವರ ಪರವಾಗಿ ಹಗಲು ರಾತ್ರಿ ಎನ್ನದೆ ಮಂಡ್ಯದಲ್ಲಿ ಕ್ಯಾಂಪೇನ್ ಮಾಡಿ, ಸುಮಲತಾ ಅವರ ಗೆಲುವಿಗೆ ಯಶ್ ಅವರು ಸಹ ಮುಖ್ಯವಾದ ಕಾರಣ ಆಗಿದ್ದರು. ಈ ರೀತಿಯಾಗಿ ಯಶ್ ಅವರು ಅಂಬಿ ಅಣ್ಣನ ಕುಟುಂಬಕ್ಕೆ ಬಹಳ ಆಪ್ತರು. ಇದೀಗ ಇವರು ಅಂಬರೀಶ್ ಅವರ ಆಸೆಯನ್ನು ಈಡೇರಿಸಿದ್ದಾರೆ.
ಹೌದು, ಅಂಬರೀಶ್ ಅವರು ಯಶ್ ಅವರ ಮಗುವಿಗಾಗಿ ವಿಶೇಷವಾಗಿ ಮಾಡಿಸಿಕೊಟ್ಟಿದ್ದ ತೊಟ್ಟಿಲನ್ನು ಅಂಬಿ ಅವರ ಮನೆಗೆ ತಲುಪಿಸಿದ್ದಾರೆ ರಾಕಿ ಭಾಯ್. ಅಭಿಷೇಕ್ ಹಾಗೂ ಅವಿವಾ ದಂಪತಿಯ ಮುದ್ದಿನ ಮಗು, ಜ್ಯುನಿಯರ್ ರೆಬೆಲ್ ಸ್ಟಾರ್ ಈ ತೊಟ್ಟಿಲಿನಲ್ಲಿ ಮಲಗಬೇಕು ಎನ್ನುವ ಅಂಬರೀಶ್ ಅವರ ಆಸೆಯನ್ನು ಯಶ್ ಅವರು ಈಡೇರಿಸಿದ್ದಾರೆ. ಯಶ್ ಅವರು ಅಷ್ಟು ವರ್ಷಗಳ ಹಿಂದೆ ಅಂಬರೀಶ್ ಅವರು ಹೇಳಿರುವ ಮಾತುಗಳನ್ನು ಇನ್ನು ಕೂಡ ನೆನಪಿನಲ್ಲಿ ಇಟ್ಟುಕೊಂಡು ತೊಟ್ಟಿಳನ್ನು ಕಳಿಸಿಕೊಟ್ಟಿರುವುದು ಸಂತೋಷಪಡುವಂಥ ವಿಷಯ. ಇದೀಗ ಈ ತೊಟ್ಟಿಲು ಅಭಿಶೇಕ್ ಅಂಬರೀಶ್ ಅವರ ಮನೆಯಲ್ಲಿದೆ. ಅಂಬರೀಶ್ ಅಣ್ಣನ ಪ್ರಮುಖ ಆಸೆ ಈಡೇರಿದೆ ಎನ್ನುವ ವಿಷಯ ಅವರ ಎಲ್ಲಾ ಅಭಿಮಾನಿಗಳಿಗೆ ಕೂಡ ಸಂತೋಷ ತಂದಿದೆ. ಎರಡು ಕುಟುಂಬಗಳ ನಡುವೆ ಇರುವ ಬಾಂಧವ್ಯ ಇದೇ ರೀತಿ ಇರಲಿ.