ನಟ ಯಶ್ ಅವರು ಒಂದು ಕಾಲದಲ್ಲಿ ಸಾಮಾನ್ಯ ಹುಡುಗನಾಗಿ ಬೆಂಗಳೂರಿಗೆ ಬಂದವರು. ಆದರೆ ಯಶ್ ಅವರಿಗೆ ಬದುಕಿನಲ್ಲಿ ಏನಾದರೂ ಸಾಧಿಸಲೇಬೇಕು ಅನ್ನೋ ಛಲ, ಧೈರ್ಯ ಕೂಡ ಇತ್ತು. ಬೆಂಗಳೂರಿಗೆ ಬಂದು ಇಲ್ಲಿ ನಾನೊಬ್ಬ ಹೀರೋ ಆಗೇ ಆಗ್ತೀನಿ, ಗಾಂಧಿನಗರದಲ್ಲಿ ನನ್ನ ಕಟೌಟ್ ಬಿದ್ದೇ ಬೀಳುತ್ತೆ ಅನ್ನೋ ದೃಢ ನಿರ್ಧಾರ ಹೊಂದಿದ್ದರು. ಅದರಂತೆಯೇ ಮುಂದೆ ಹೆಜ್ಜೆ ಇಟ್ಟರು. ಧಾರಾವಾಹಿಗಳ ಮೂಲಕ ನಟನೆ ಶುರು ಮಾಡಿ, ಸಿಕ್ಕ ಒಂದೊಂದೇ ಅವಕಾಶಗಳನ್ನು ಉಪಯೋಗಿಸಿಕೊಂಡು. ಒಂದೊಂದೇ ಗೆಲುವುಗಳನ್ನು ಪಡೆಯುತ್ತಾ, ಮುಂದೆ ಕೆಜಿಎಫ್ ಅಂಥ ದೊಡ್ಡ ಸಿನಿಮಾ ಮಾಡಿದರು. ಕೆಜಿಎಫ್ ಚಾಪ್ಟರ್ 1 ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಎಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಇನ್ನು ಕೆಜಿಎಫ್2 ಸಿನಿಮಾ ಅದಕ್ಕಿಂತ ದೊಡ್ಡ ಹೆಸರು ಮಾಡಿತು.
ಕೆಜಿಎಫ್2 ನಂತರ ಯಶ್ ಅವರು ಇಡೀ ಭಾರತ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ಭಾರತಾದ್ಯಂತ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಟಾಕ್ಸಿಕ್ ಸಿನಿಮಾದ ಟೀಸರ್ ಸಹ ಬಿಡುಗಡೆಯಾಗಿ, ಜನರಿಂದ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿತು. ಇನ್ನು ಟಾಕ್ಸಿಕ್ ಸಿನಿಮಾ ಈ ವರ್ಷ ಬಿಡುಗಡೆ ಆಗುವ ಹಾಗೆ ಕಾಣುತ್ತಿಲ್ಲ, ಮುಂದಿನ ವರ್ಷ ಬಿಡುಗಡೆ ಅಗಬಹುದು ಎಂದು ಹೇಳಲಾಗುತ್ತಿದೆ. ಹಾಗೆಯೇ ಯಶ್ ಅವರ ಅಭಿಮಾನಿಗಳಿಗೆ ಈಗ ಬಹುದೊಡ್ಡ ಸಂತೋಷದ ಸುದ್ದಿಯೊಂದು ಕೇಳಿಬಂದಿದೆ. ಅದೇನು ಎಂದರೆ, ಯಶ್ ಅವರ ಬಹುದೊಡ್ಡ ಕಟೌಟ್ ಕಂಡುಬಂದಿದೆ, ಆದರೆ ಇದು ಕರ್ನಾಟಕದಲ್ಲಿ ಅಲ್ಲ, ಮುಂಬೈನಲ್ಲಿ ಕಾಣಿಸಿದೆ.

ಹೌದು, ಮುಂಬೈ ಮಹಾನಗರದಲ್ಲಿ ಯಶ್ ಅವರ ಬಹುದೊಡ್ಡ ಕಟೌಟ್ ಎದ್ದು ನಿಂತಿದೆ. ಯಶ್ ಅವರು ನಿಂತಿರುವ ಪೋಸ್ ನಲ್ಲಿ ಈ ಕಟೌಟ್ ಇದ್ದು, ಒಂದು ಕಾಲದಲ್ಲಿ ಯಶ್ ಅವರು, ಗಾಂಧಿನಗರದಲ್ಲಿ ತನ್ಮ ಕಟೌಟ್ ಇರಬೇಕು ಎಂದು ಪಣ ತೊಟ್ಟಿದ್ದರು, ಆದರೆ ಈಗ ಕರ್ನಾಟಕದ ಗಡಿಯನ್ನು ದಾಟಿ ಯಶ್ ಅವರ ಕಟೌಟ್ ಮುಂಬೈನಲ್ಲಿ ನಿಂತಿದೆ. ಈ ಕಟೌಟ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಕಟೌಟ್ ಹೊರಬಂದಿರುವುದಕ್ಕೆ ಕಾರಣ ಏನಿರಬಹುದು ಎಂದು ಅಭಿಮಾನಿಗಳ ನಡುವೆ ಚರ್ಚೆ ಆಗುತ್ತಿದೆ. ಟಾಕ್ಸಿಕ್ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಕೊಡೋದಕ್ಕೆ ಈ ಕಟೌಟ್ ನಿಲ್ಲಿಸಿರಬಹುದಾ ಎನ್ನುವ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿಬರುತ್ತಿದೆ. ಇನ್ನು ಕೆಲವರು ಹೊಸ ಜಾಹೀರಾತಿನ ಕಟೌಟ್ ಇರಬಹುದು ಎನ್ನುತ್ತಿದ್ದಾರೆ..
ಇದು ಟಾಕ್ಸಿಕ್ ಸಿನಿಮಾ ಬಗೆಗಿನ ಅಪ್ಡೇಟ್ ಇರಬಹುದಾ ಅಥವಾ ಜಾಹೀರಾತಿನ ಕಟೌಟ್ ಇರಬಹುದಾ ಎಂದು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಈ ಫೋಟೋ ಒಂದು ವೈರಲ್ ಆಗಿದ್ದು, ಅಭಿಮಾನಿಗಳಿಗೆ ಇದನ್ನು ನೋಡಿ ಬಹಳ ಸಂತೋಷ ಅಂತೂ ಆಗಿದೆ. ತಮ್ಮ ಮೆಚ್ಚಿನ ಹೀರೋ ಕಟೌಟ್ ಇಷ್ಟು ದೊಡ್ಡ ಮಟ್ಟದಲ್ಲಿ ಬೇರೆ ರಾಜ್ಯದಲ್ಲಿ ಸುದ್ದಿಯಾದರೆ, ಯಾವ ಅಭಿಮಾನಿಗಳಿಗೆ ತಾನೇ ಸಂತೋಷ ಆಗೋದಿಲ್ಲ ಹೇಳಿ. ಯಶ್ ಅವರ ಫ್ಯಾನ್ಸ್ ಗೆ ಕೂಡ ಅದೇ ರೀತಿ ಆಗಿದೆ. ಇನ್ನು ಟಾಕ್ಸಿಕ್ ಸಿನಿಮಾ ಬಗ್ಗೆ ಹೇಳುವುದಾದರೆ ಮುಂಬೈನಲ್ಲಿ ಒಂದಷ್ಟು ದಿವಸಗಳ ಕಾಲ, ಬೆಂಗಳೂರಿನಲ್ಲಿ ಒಂದಷ್ಟು ದಿವಸಗಳ ಕಾಲ ಟಾಕ್ಸಿಕ್ ಸಿನಿಮಾ ಚಿತ್ರೀಕರಣ ನಡೆದಿದೆ. ನಟಿ ನಯನತಾರ ಸೇರಿದಂತೆ ಬಿಗ್ ಸ್ಟಾರ್ ಗಳು ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೂಡ ಮಾಹಿತಿ ಸಿಕ್ಕಿದೆ. ಅಷ್ಟೇ ಅಲ್ಲದೆ, ಟಾಕ್ಸಿಕ್ ಸಿನಿಮಾ ಗ್ಲೋಬಲ್ ಲವೆಲ್ ನಲ್ಲಿ ಸದ್ದು ಮಾಡುವುದಕ್ಕೆ ಮುಂದಾಗಿದೆ.
ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಯಲ್ಲಿ ಚಿತ್ರೀಕರಣ ಆಗುತ್ತಿರುವ ಸಿನಿಮಾ ಆಗಿದೆ ಟಾಕ್ಸಿಕ್. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ನೀಡಿರುವ ಮಾಹಿತಿಯ ಅನುಸಾರ, ಈ ಸಿನಿಮಾವನ್ನು ಗ್ಲೋಬಲ್ ಆಡಿಯನ್ಸ್ ಗಾಗಿ ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಿನಿಮಾದ ಕ್ವಾಲಿಟಿ ಹೇಗಿದೆ ಅನ್ನೋದು ಸಿನಿಮಾದ ಒಂದು ಟೀಸರ್ ನೋಡಿಯೇ ಗೊತ್ತಾಗಿದೆ. ಇನ್ನು ಯಶ್ ಅವರ ಸಿನಿಮಾ ಬಿಡುಗಡೆ ಅಗೋದಕ್ಕೆ ಒಂದು ವರ್ಷ ಆದರೂ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಸಿನಿಮಾ ಬಿಡುಗಡೆ ಇರದ ಸಮಯದಲ್ಲಿ ಕೂಡ ಯಶ್ ಅವರ ಕಟೌಟ್ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ವಿಚಾರ, ನಿಜಕ್ಕೂ ಕನ್ನಡಿಗರಾಗಿ ನಾವೆಲ್ಲರೂ ಹೆಮ್ಮೆ ಪಡುವಂಥದ್ದು. ಯಶ್ ಅವರು ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ.