ರಿಷಬ್ ಶೆಟ್ಟಿ ಅವರಿಗೆ ಕಾಂತಾರ ಮೂಲಕ ದೊಡ್ಡ ಸಕ್ಸಸ್ ಸಿಕ್ಕಿದೆ. ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರ ಹೆಸರೇ ಈಗ ಒಂದು ಬ್ರಾಂಡ್ ರೀತಿ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ರಿಷಬ್ ಅವರಿಗೆ ಕಾಂತಾರ ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ಹೆಸರು, ಯಶಸ್ಸು, ಕೀರ್ತಿ ಎಲ್ಲವನ್ನು ತಂದುಕೊಟ್ಟಿದೆ. ಕನ್ನಡದಲ್ಲಿ ಬಿಡುಗಡೆಯಾದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕ್ರೇಜ್ ಸೃಷ್ಟಿಸಿಕೊಂಡಿತು. ಈ ಸಿನಿಮಾದ ಪ್ರೀಕ್ವೆಲ್ ಸಹ ತೆರೆಗೆ ಬರಲಿದೆ, ಕಾಂತಾರ ಪ್ರೀಕ್ವೆಲ್ ಕೆಲಸಗಳು ಜೋರಾಗಿ ನಡೆಯುತ್ತಿದೆ ಎನ್ನುವ ವಿಷಯ ಗೊತ್ತೇ ಇದೆ. ಇದರ ನಡುವೆ ಹೊಸ ಸುದ್ದಿಯೊಂದು ಕೇಳಿಬಂದಿದೆ.

ಕಾಂತಾರ ಸಿನಿಮಾ ಕುರಿತ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮುಂದಿನ ವರ್ಷ ಕಾಂತಾರ ಪ್ರೀಕ್ವೆಲ್ ತೆರೆ ಕಾಣಲಿದೆ. ಇದನ್ನು ಹೊರತುಪಡಿಸಿ ರಿಷಬ್ ಶೆಟ್ಟಿ ಅವರ ಇನ್ನು ಎರಡು ಸಿನಿಮಾ ಅನೌನ್ಸ್ ಆಗಿದೆ. ಒಂದು ಹನುಮಾನ್ ಮತ್ತೊಂದು ಛತ್ರಪತಿ ಶಿವಾಜಿ ಮಹಾರಾಜ್. ಹನುಮಾನ್ ಸಿನಿಮಾ ಒಂದು ಮಟ್ಟಕ್ಕೆ ಕ್ರೇಜ್ ಸೃಷ್ಟಿಸಿದೆ. ಇನ್ನು ಶಿವಾಜಿ ಮಹಾರಾಜ್ ಪಾತ್ರದ ಬಗ್ಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ರಿಷಬ್ ಶೆಟ್ಟಿ ಅವರು ಈ ಪಾತ್ರ ಮಾಡುವುದು ಬೇಕಿರಲಿಲ್ಲ, ಕನ್ನಡದ ವಿರೋಧಿಯ ಪಾತ್ರಕ್ಕೆ ರಿಶಬ್ ಅವರು ಒಪ್ಪಿದ್ದು ಯಾಕೆ ಎಂದು ವಿರೋಧ ವ್ಯಕ್ತವಾಗುತ್ತಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇದೆಲ್ಲದರ ನಡುವೆ ಈಗ ರಿಷಬ್ ಶೆಟ್ಟಿ ಅವರ ಹೊಸ ಸಿನಿಮಾ ಬಗ್ಗೆ ಸುಳಿವು ಸಿಕ್ಕಿದೆ. ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾ ಪ್ರಭಾಸ್ ಅವರ ಜೊತೆಗಂತೆ. ಅಂದರೆ ಪ್ರಭಾಸ್ ಅವರ ಮುಂದಿನ ಸಿನಿಮಾಗೆ ಚಿತ್ರಕತೆ ಬರೆಯಲಿದ್ದಾರೆ ರಿಷಬ್ ಶೆಟ್ಟಿ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಜೊತೆಗೆ ಮಾತುಕತೆ ಕೂಡ ನಡೆದಿದೆಯಂತೆ. ಹೌದು, ಪ್ರಭಾಸ್ ಅವರು ಹೊಂಬಾಳೆ ಫಿಲ್ಮ್ಸ್ ಜೊತೆಗೆ ಈಗಾಗಲೇ ಸಲಾರ್ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ, 1000 ಕೋಟಿಗಿಂತ ಹೆಚ್ಚು ಹಣಗಳಿಕೆ ಕೂಡ ಮಾಡಿದೆ. ಜೊತೆಗೆ ಪ್ರಭಾಸ್ ಅವರ ಜೊತೆಗೆ ಇನ್ನು ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಯೋಜನೆ ಹೊಂದಿದೆ ಹೊಂಬಾಳೆ ಸಂಸ್ಥೆ. ಸಲಾರ್2 ಹಾಗೂ ಮತ್ತೊಂದು ಸಿನಿಮಾ ತಯಾರಾಗಲಿದೆ.

ಹೊಂಬಾಳೆ ಫಿಲ್ಮ್ಸ್ ಜೊತೆಗೆ ತಯಾರಾಗಲಿರುವ ಸಿನಿಮಾಗೆ ರಿಷಬ್ ಶೆಟ್ಟಿ ಅವರು ಚಿತ್ರಕಥೆ ಬರೆದು ಕೊಡಬೇಕು ಎಂದು ಹೇಳಲಾಗಿದೆಯಂತೆ. ಹೌದು ರಿಷಬ್ ಅವರು ಎಷ್ಟು ಅದ್ಭುತವಾದ ಕಥೆಗಾರ ಮತ್ತು ಬರಹಗಾರ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಈ ಕಾರಣಕ್ಕೆ ಹೊಂಬಾಳೆ ಸಂಸ್ಥೆ ರಿಷಬ್ ಅವರಿಗೆ ಈ ಒಂದು ಜವಾಬ್ದಾರಿಯನ್ನು ಕೊಟ್ಟಿದ್ದು, ರಿಷಬ್ ಶೆಟ್ಟಿ ಅವರು ಇದಕ್ಕೆ ಒಪ್ಪಿದ್ದಾರಂತೆ. ಹಾಗೆಯೇ ಒಂದು ಕಂಡೀಷನ್ ಕೂಡ ಹಾಕಿದ್ದಾರಂತೆ, ತಾವು ಚಿತ್ರಕಥೆ ಮಾತ್ರ ಬರೆದು ಕೊಡುವುದಾಗಿ ಹೇಳಿದ್ದು, ಸಿನಿಮಾ ನಿರ್ದೇಶನ ಮಾಡುವುದಿಲ್ಲ ಎಂದಿದ್ದಾರಂತೆ ರಿಷಬ್ ಶೆಟ್ಟಿ. ಇದಕ್ಕೆ ಹೊಂಬಾಳೆ ಸಂಸ್ಥೆ ಕೂಡ ಒಪ್ಪಿಗೆ ಕೊಟ್ಟಿದೆಯಂತೆ..

ಈ ಸುದ್ದಿ ಸಧ್ಯಕ್ಕೆ ವೈರಲ್ ಆಗುತ್ತಿದ್ದು, ಹಾಗಿದ್ರೆ ರಿಷಬ್ ಶೆಟ್ಟಿ ಅವರು ಕನ್ನಡದಿಂದ ದೂರ ಉಳಿಯುತ್ತಿದ್ದಾರಾ ಎನ್ನುವ ಪ್ರಶ್ನೆ ಈಗ ಶುರುವಾಗಿದೆ.. ಕಾಂತಾರ ಪ್ರೀಕ್ವೆಲ್ ನಂತರ ರಿಷಬ್ ಅವರು ಅಭಿನಯಿಸುತ್ತಿರುವ ಇನ್ನೆರಡು ಸಿನಿಮಾಗಳು ಬೇರೆ ಭಾಷೆಯವು. ನಂತರ ಸ್ಕ್ರೀನ್ ಪ್ಲೇ ಬರೆಯುತ್ತಿರುವುದು ಪ್ರಭಾಸ್ ಅವರ ತೆಲುಗು ಚಿತ್ರಕ್ಕೆ. ಇದೆಲ್ಲವನ್ನು ನೋಡಿದರೆ ರಿಷಬ್ ಶೆಟ್ಟಿ ಅವರು ಕೆಲವು ವರ್ಷಗಳ ಕಾಲ ಕನ್ನಡದಲ್ಲಿ ಸ್ಟ್ರೇಟ್ ಸಿನಿಮಾ ಮಾಡುವುದು ಸಾಧ್ಯ ಆಗುವುದಿಲ್ಲವೇನೋ ಅನ್ನಿಸುವುದರಲ್ಲಿ ಸಂಶಯವಿಲ್ಲ. ನಮ್ಮ ಕಲಾವಿದರು ಬೇರೆ ಭಾಷೆಯಲ್ಲಿ ಕೆಲಸ ಮಾಡುವ ಬದಲು, ನಮ್ಮಲ್ಲೇ ಮಾಡಬೇಕು ಎನ್ನುವುದು ನಮ್ಮವರ ಆಶಯ