ನಟ ದರ್ಶನ್ ಅವರು ರೇಣುಕಾಸ್ವಾಮಿ ಎನ್ನುವ ಚಿತ್ರದುರ್ಗ ಮೂಲದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಡಿಸೆಂಬರ್ ತಿಂಗಳಿನಲ್ಲಿ ದರ್ಶನ್ ಅವರು ಜಾ*ಮೀನು ಪಡೆದು ಹೊರಬಂದಿದ್ದು, ಪತ್ನಿ ಮತ್ತು ಮಗಳ ಜೊತೆಗೆ ಮೈಸೂರಿನ ಫಾರ್ಮ್ ಹೌಸ್ ನಲ್ಲಿದ್ದಾರೆ, ಕುಟುಂಬದ ಜೊತೆಗೆ ಸಂಕ್ರಾಂತಿ ಹಬ್ಬವನ್ನು ಸಹ ಆಚರಿಸಿದ್ದಾರೆ. ದರ್ಶನ್ ಅವರು ಒಂದು ಕಡೆ ಕೇಸ್ ಹಾಗೂ ಇನ್ನೊಂದು ಕಡೆ ಕುಟುಂಬ ಎಂದು ಇದ್ದಾರೆ, ಇದರ ನಡುವೆ ರೇಣುಕಾಸ್ವಾಮಿ ಅವರ ಕುಟುಂಬ ಮತ್ತು ದರ್ಶನ್ ಅವರ ಬಗ್ಗೆ ಹೊಸದೊಂದು ವಿಚಾರ ಕೇಳಿಬಂದಿದ್ದು, ಆ ವಿಚಾರಕ್ಕೆ ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಅವರು ಹೊರಗಡೆ ಬಂದ ನಂತರ ರೇಣುಕಾಸ್ವಾಮಿ ಅವರ ಕುಟುಂಬ ದರ್ಶನ್ ಅವರ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿದ್ದಾರೆ. ಹಾಗೆಯೇ ದರ್ಶನ್ ಅವರಿಂದ ಹಣ ಪಡೆದು ಕೇಸ್ ರಾಜಿ ಮಾಡಿಕೊಂಡಿದ್ದಾರೆ, ಹೊಸದಾಗಿ ಕಾರ್ ಕೂಡ ಬುಕ್ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಮಾಧ್ಯಮದಲ್ಲಿ ಸುದ್ದಿಗಳು ಹರಿದಾಡುತ್ತಿದೆ. ಇದೀಗ ಈ ವಿಷಯದ ಕುರಿತಾಗಿ ರೇಣುಕಾಸ್ವಾಮಿ ಅವರ ತಂದೆ ಚಿತ್ರದುರ್ಗದಲ್ಲಿ ಪ್ರೆಸ್ ಮೀಟ್ ಕರೆಸಿ, ಮಾತನಾಡಿದ್ದಾರೆ. ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿರೋದೇನು ಎಂದು ನೋಡುವುದಾದರೆ..
ದರ್ಶನ್ ಅವರು ಹೊರಗಡೆ ಬಂದ ನಂತರ ಅವರನ್ನು ಭೇಟಿ ಮಾಡಿಲ್ಲ, ಕೇಸ್ ವಿಷಯವಾಗಿ ರಾಜಿ ಮಾಡಿಕೊಂಡಿಲ್ಲ, ಹಾಗೆಯೇ ಕಾರ್ ಕೂಡ ಬುಕ್ ಮಾಡಿಲ್ಲ ಎಂದು ತಿಳಿಸಿದ್ದಾರೆ. ಮನೆಯಲ್ಲಿರುವ ಬೈಕ್ ರಿಪೇರಿ ಮಾಡಿಸೋಕು ಹಣವಿಲ್ಲ ಎಂದಿದ್ದಾರೆ ರೇಣುಕಾಸ್ವಾಮಿ ಅವರ ತಂದೆ. ಹಾಗೆಯೇ ಮಗ ತೀರಿಕೊಂಡ ನೋವು ಕಡಿಮೆ ಆಗಿಲ್ಲ, ಹೈಕೋರ್ಟ್ ನಲ್ಲಿ ನ್ಯಾಯ ಸಿಗಲಿಲ್ಲ ಎಲ್ಲರೂ ಹೊರಗಡೆ ಬಂದರು, ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿರುವುದು ಸಂತೋಷವಾಗಿದೆ, ಆ ಮೂಲಕ ಆದರೂ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ರೇಣುಕಾಸ್ವಾಮಿ ಅವರ ತಂದೆ ಹೇಳಿದ್ದಾರೆ.
ತಮ್ಮ ಸೊಸೆಗೆ ಸರ್ಕಾರಿ ಕೆಲಸ ಕೊಡಬೇಕು, ಅವಳಿಗೆ ಜೀವನ ನಡೆಸುವುದಕ್ಕೆ ಸಹಾಯ ಆಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಸರ್ಕಾರ ಉತ್ತರ ನೀಡಿದ್ದು, ಮಗ ಇಲ್ಲವಾದ ಮೇಲೆ ಸೊಸೆ ಹಾಗೂ ಮಗುವನ್ನು ನೋಡಿಕೊಳ್ಳಲು ಅವಳಿಗೆ ಒಂದು ಕೆಲಸ ಬೇಕೇ ಬೇಕು. ಸರ್ಕಾರ ನಮ್ಮ ಸೊಸೆಗೆ ಕೆಲಸ ಕೊಡುವ ಬಗ್ಗೆ ಇನ್ನೊಮ್ಮೆ ಯೋಚಿಸಿ, ಕೆಲಸ ಕೊಡಬೇಕು ಎಂದಿದ್ದಾರೆ. ಹಾಗೆಯೇ ತಮ್ಮ ಬಗ್ಗೆ ಹಾಗೂ ದರ್ಶನ್ ಅವರ ಬಗ್ಗೆ ಕೇಳಿ ಬರುತ್ತಿರುವ ಎಲ್ಲಾ ವಿಷಯ ಕೂಡ ಸುಳ್ಳು, ಅಂಥ ವದಂತಿಗಳನ್ನು ಯಾರು ಹಬ್ಬಿಸಬಾರದು, ಇದೆಲ್ಲವನ್ನು ಯಾರು ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ರೇಣುಕಾಸ್ವಾಮಿ ಅವರ ಚಿಕ್ಕಪ್ಪ ಕೂಡ ಪ್ರೆಸ್ ಮೀಟ್ ನಲ್ಲಿ ಮಾತನಾಡಿ ಇದೇ ವಿಷಯವನ್ನ ಹೇಳಿದ್ದಾರೆ. ದರ್ಶನ್ ಅವರ ಅಭಿಮಾನಿಗಳು ಅಥವಾ ಇನ್ಯಾರು ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ, ಆದರೆ ಈ ರೀತಿ ಮಾಡಬಾರದು ಎಂದಿದ್ದಾರೆ. ಇತ್ತ ದರ್ಶನ್ ಅವರು ಈಗೀಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಸಂಕ್ರಾಂತಿ ಹಬ್ಬದ ದಿವಸ ಪತ್ನಿ ಹಾಗೂ ಮಗನ ಜೊತೆಗೆ ಸೆಲೆಬ್ರೇಟ್ ಮಾಡಿದ್ದರು. ಬಳಿಕ ಆರತಿ ಉಕ್ಕಡ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ತಮ್ಮ ಸಿನಿಮಾ ಟ್ರೈಲರ್ ಬಗ್ಗೆ ಕೂಡ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಗಳು ವೈರಲ್ ಆಗುತ್ತಿದೆ.