ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನ್ಯಾಷನಲ್ ಕ್ರಶ್ ಎನಿಸಿಕೊಂಡ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಪ್ರಮುಖ ನಟಿಯರ ಪೈಕಿ ಒಬ್ಬರು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲೆಯಳಂ ಭಾಷೆಯಲ್ಲಿ ಮಂದಣ್ಣಾಗೆ ಸಕ್ಕತ್ ಬೇಡಿಕೆಯಿದೆ. ಜೊತೆಗೆ ಬಾಲಿವುಡ್ಗೂ ಹಾರಿರುವ ನಟಿ ಅಲ್ಲಿನ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ನಟಿ ರಶ್ಮಿಕಾ ಮಂದಣ್ಣ ಅವರ ಬಾತ್ರೂಂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.

ತಪ್ಪು ತಿಳಿಬೇಡಿ ಬಾತ್ರೂಂ ಫೋಟೋ ಅಂದ್ರೆ ಅದಲ್ಲ. ರಶ್ಮಿಕಾ ಬಾತ್ರೂಂನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಅವುಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ ಅಷ್ಟೇ. ಕೆಂಪು ಬಣ್ಣದ ಡ್ರೆಸ್ ನಲ್ಲಿ ರಶ್ಮಿಕಾ ಸಕ್ಕತ್ ಹಾಟ್&ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.ಜೊತೆಗೆ ವಾಶ್ರೂಂನಲ್ಲಿ ಕ್ರಿಯಾಶೀಲತೆ ಉಕ್ಕಿ ಬಂದರೆ ಹೀಗಾಗುತ್ತದೆ’ ಎಂದು ಫೋಟೋಗಳಿಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
ಆದರೆ ಈ ಫೋಟೋಶೂಟ್ ಮಾಡಿಸಿಕೊಂಡಿದ್ದು ಯಾವುದೋ ಟೈಲ್ಸ್ ಕಂಪೆನಿಯ ಜಾಹಿರಾತಿಗಾಗಿಯೋ ಅಥವಾ ಪರ್ಸನಲ್ ಆಗಿ ಮಾಡಿಕೊಂಡಿದ್ದೋ ತಿಳಿದು ಬಂದಿಲ್ಲ. ಫೋಟೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ. ಸದ್ಯ, ದಕ್ಷಿಣ ಭಾರತದಿಂದ ಬಾಲಿವುಡ್ಗೆ ಲಗ್ಗೆ ಇಟ್ಟಿರುವ ಕನ್ನಡತಿಗೆ ಅಲ್ಲಿ ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿವೆ. ಇಂತಹಾ ಫೋಟೋಶೂಟ್ ಗಳ ಮೂಲಕ ಮಂದಣ್ಣ ಸದ್ಯದಲ್ಲೇ ಹಾಲಿವುಡ್ಗೆ ಎಂಟ್ರಿ ಕೊಟ್ಟರೂ ಅಚ್ಚರಿ ಪಡಬೇಕೆಂದೇನಿಲ್ಲ….