ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟನೆ ಶುರು ಮಾಡಿದವರು ನಟಿ ರಶ್ಮಿಕಾ ಮಂದಣ್ಣ. ಇಂದು ಇವರು ಟಾಲಿವುಡ್, ಬಾಲಿವುಡ್ ಎಂದು ಪ್ಯಾನ್ ಇಂಡಿಯಾ ನಟಿಯಾಗಿ ಹೆಸರು ಮಾಡುತ್ತಿದ್ದಾರೆ. ನಾಳೆ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ2 ಸಿನಿಮಾ ತೆರೆ ಕಾಣುತ್ತಿದೆ. ಈ ಸಿನಿಮಾ ನೋಡೋದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನು ರಶ್ಮಿಕಾ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಕೂಡ ಇದೆ. ರಶ್ಮಿಕಾ ಅವರು ನಾಯಕಿಯಾಗಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿಲ್ಲ, ಆದರೆ ಇವರಿಗೆ ಇರುವ ಬೇಡಿಕೆ ಅಂತೂ ಕಡಿಮೆ ಇಲ್ಲ. ಬಹಳ ಬ್ಯುಸಿ ಇರುವ ರಶ್ಮಿಕಾ ಅವರು, ಎಲ್ಲೇ ಇದ್ದರೂ ಈ ಒಂದು ಕೆಲಸವನ್ನ ಮಿಸ್ ಮಾಡೋದಿಲ್ಲವಂತೆ. ರಶ್ಮಿಕಾ ಅವರಿಗೆ ಅಷ್ಟೊಂದು ಮುಖ್ಯ ಆಗಿರುವಂಥ ಆ ಕೆಲಸ ಏನು ಗೊತ್ತಾ? ನಾವು ಕೂಡ ಹಾಗೆ ಇರಬೇಕು ಕಣ್ರೀ..

ನಟಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಈ ಪಾತ್ರ ಅವರಿಗೆ ಕರ್ನಾಟಕ ಕ್ರಶ್ ಎಂದು ಹೆಸರನ್ನು ಕೂಡ ತಂದುಕೊಟ್ಟಿತು. ಕಿರಿಕ್ ಪಾರ್ಟಿ ನಂತರ ರಶ್ಮಿಕಾ ಎಂಟ್ರಿ ಕೊಟ್ಟಿದ್ದು ತೆಲುಗಿಗೆ. ಚಲೋ ಸಿನಿಮಾ ಮೂಲಕ ತೆಲುಗಿನಲ್ಲಿ ಪ್ರಯಾಣ ಶುರು ಮಾಡಿದ ರಶ್ಮಿಕಾ ಅವರಿಗೆ ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಸಿಕ್ಕಿತ್ತು. ಚಲೋ ನಂತರ ಗೀತಾ ಗೋವಿಂದಮ್ ನಲ್ಲಿ ಅಭಿನಯಿಸಿದರು. ಆ ಸಿನಿಮಾ ಸಹ ಸೂಪರ್ ಹಿಟ್ ಆಯಿತು. ಬಳಿಕ ರಶ್ಮಿಕಾ ಅವರು ತೆಲುಗು ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸಿದರು. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ , ನಟ ದರ್ಶನ್ ಇವರೊಡನೆ ನಟಿಸಿದರು. ನಂತರ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಹಾಗೆಯೇ ಬಾಲಿವುಡ್ ಗೆ ಕೂಡ ಎಂಟ್ರಿ ಕೊಟ್ಟರು.

ಕಳೆದ ವರ್ಷ ತೆರೆಕಂಡ ಅನಿಮಲ್ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಹೀಗೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಶ್ಮಿಕಾ ಅವರು ಹೆಸರು ಮಾಡಿದ್ದಾರೆ ಜೊತೆಗೆ ಜನಪ್ರಿಯತೆಯನ್ನು ಕೂಡ ಗಳಿಸಿಕೊಂಡಿದ್ದಾರೆ. ಇನ್ನು ಇವರ ಪುಷ್ಪ2 ಮೇಲೆ ಭಾರಿ ನಿರೀಕ್ಷೆ ಇದೆ, ರಶ್ಮಿಕಾ ಅವರನ್ನು ಶ್ರೀವಲ್ಲಿ ಯಾಗಿ ಮತ್ತೆ ನೋಡುವುದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ವೇಳೆ ರಶ್ಮಿಕಾ ಅವರು ಪರ್ಸನಲ್ ವಿಚಾರದಿಂದ ಹೆಚ್ಚು ಸುದ್ದಿ ಸಹ ಆಗುತ್ತಾರೆ. ವಿಜಯ್ ದೇವರಕೊಂಡ ಅವರೊಡನೆ ರಿಲೇಶನ್ಷಿಪ್ ನಲ್ಲಿರುವ ವಿಚಾರ ಗೊತ್ತೇ ಇದೆ. ಇತ್ತೀಚೆಗೆ ಪುಷ್ಪ2 ಸಿನಿಮಾದ ಪ್ರೀರಿಲೀಸ್ ಈವೆಂಟ್ ನಲ್ಲಿ ರಶ್ಮಿಕಾ ಅವರು ತಾವು ರಿಲೇಶನ್ಷಿಪ್ ನಲ್ಲಿ ಇರುವ ವಿಷಯವನ್ನು ಒಪ್ಪಿಕೊಂಡರು.

ಹಾಗೆಯೇ ವಿಜಯ್ ದೇವರಕೊಂಡ ಅವರು ಸಹ ತಾವು ರಿಲೇಶನ್ಷಿಪ್ ನಲ್ಲಿರುವ ವಿಷಯವನ್ನು ಒಪ್ಪಿದರು, ಅಷ್ಟೇ ಅಲ್ಲದೇ ರೀಸೆಂಟ್ ಆಗಿ ವಿಜಯ್ ರಶ್ಮಿಕಾ ಲಂಚ್ ಡೇಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಫೋಟೋ ಸಹ ವೈರಲ್ ಆಗಿತ್ತು. ಈ ಮೂಲಕ ಇವರು ವಿಜಯ್ ದೇವಡಕೊಂಡ ಅವರೊಡನೆ ಪ್ರೀತಿಯಲ್ಲಿ ಇರುವುದು ಕನ್ಫರ್ಮ್ ಆಗಿದ್ದು, ಮದುವೆ ಯಾವಾಗ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಹಲವು ಕಡೆಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ಇದೆ. ಹಾಗಾಗಿ ಇವರಿಬ್ಬರು ಲವ್ ಮಾಡುತ್ತಿದ್ದಾರೆ, ಮದುವೆ ಆಗೇ ಆಗುತ್ತಾರೆ ಎನ್ನುವ ಗಾಸಿಪ್ ಗಳು ಕೇಳಿಬಂದರು ಸಹ, ರಶ್ಮಿಕಾ ಅವರು ಇನ್ನು ಪೂರ್ತಿ ಸ್ಪಷ್ಟನೆ ಕೊಟ್ಟಿಲ್ಲ. ಪ್ರಸ್ತುತ ರಶ್ಮಿಕಾ ಅವರ ಫೋಕಸ್ ಪೂರ್ತಿಯಾಗಿ ಅವರ ಕೆರಿಯರ್ ಮೇಲೆ ಇದೆ. ಬ್ಯಾಕ್ ಟು ಬ್ಯಾಕ್ ಬಿಗ್ ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ..

ಬಾಲಿವುಡ್ ನ ಸ್ಟಾರ್ ಹೀರೋ ಸಲ್ಮಾನ್ ಖಾನ್ ಅವರೊಡನೆ ನಟಿಸಿರುವ ಸಿಕಂದರ್ ಸಿನಿಮಾ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಈ ಸಿನಿಮಾ ಪ್ರೊಮೋಷನ್ ಗಳಲ್ಲಿ ಬ್ಯುಸಿ ಇದ್ದಾರೆ ರಶ್ಮಿಕಾ. ಸಿನಿಮಾ ಪ್ರೊಮೋಷನ್ ಗಳು ಜೋರಾಗಿಯೇ ಸಾಗುತ್ತಿದೆ. ಬಾಲಿವುಡ್ ನ ಇಷ್ಟು ದೊಡ್ಡ ನಟನ ಜೊತೆಗೆ ರಶ್ಮಿಕಾ ಅವರಿಗೆ ನಟಿಸುವ ಅವಕಾಶ ಸಿಕ್ಕಿರುವುದು ಸಂತೋಷದ ವಿಷಯ. ಇನ್ನು ರಶ್ಮಿಕಾ ಅವರು ಪ್ರಸ್ತುತ ತೆಲುಗಿನಲ್ಲಿ 4 ಸಿನಿಮಾ, ತಮಿಳಿನಲ್ಲಿ 1 ಸಿನಿಮಾ ಹಾಗು ಹಿಂದಿಯಲ್ಲಿ 3 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರಂತೆ. ರಶ್ಮಿಕಾ ಅವರು ಒಂದರ ನಂತರ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಹಾಗೆಯೇ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆಗೆ ಸಹ ಮಾತನಾಡುತ್ತಾ ಇರುತ್ತಾರೆ.

ಇತ್ತೀಚೆಗೆ ರಶ್ಮಿಕಾ ಅವರು ಒಂದು ಆಸಕ್ತಿಕರ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ನಮಗೆಲ್ಲಾ ರಶ್ಮಿಕಾ ಅವರ ಬಗ್ಗೆ ಗೊತ್ತೇ ಇದೆ, ಅವರಿಗೆ ಫಿಟ್ನೆಸ್ ಬಗ್ಗೆ ಬಹಳ ಆಸಕ್ತಿ. ಯಾವಾಗಲೂ ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋಗಳು, ಫೋಟೋಗಳನ್ನು ಶೇರ್ ಮಾಡುವುದನ್ನು ನೋಡಿರುತ್ತೇವೆ. ರಶ್ಮಿಕಾ ಅವರಿಗೆ ವರ್ಕೌಟ್ ಅಂದ್ರೆ ಅಷ್ಟು ಹುಚ್ಚು. ಆದರೆ ರಶ್ಮಿಕಾ ಅವರು ಇತ್ತೀಚೆಗೆ ಜಿಮ್ ನಲ್ಲಿ ವರ್ಕೌಟ್ ಮಾಡುವಾಗಲೇ, ಇಂಜೂರಿ ಆಗಿ ಕಾಲು ಮುರಿದುಕೊಂಡಿದ್ದರು. ಇದರಿಂದ ಅವರಿಗೆ ವರ್ಕೌಟ್ ಮಾಡಲು ಆಗಿರಲಿಲ್ಲ. ತಿಂಗಳ ಗಟ್ಟಲೇ ರೆಸ್ಟ್ ನಲ್ಲಿರಬೇಕಿತ್ತು. ನಡೆಯೋಕೆ ಸಾಧ್ಯ ಆಗದೇ ಇದ್ದಾಗಲು ಕೂಡ ರಶ್ಮಿಕಾ ಸಿನಿಮಾ ಪ್ರೊಮೋಷನ್ ನಲ್ಲಿ ಪಾಲ್ಗೊಂಡಿದ್ದು ಸಹ ಇದೆ.. ಇದೆಲ್ಲವನ್ನು ನಾವೆಲ್ಲರೂ ನೋಡಿದ್ದೇವೇ..
ಇನ್ನು ರಶ್ಮಿಕಾ ಮಂದಣ್ಣ ಅವರು ವರ್ಕೌಟ್ ಮಾಡಲು ಆಗದೇ ಅವರಿಗೆ ಬೇಸರ ಆಗಿತ್ತು. ಆದರೆ ಈಗ ಹುಷಾರಾಗಿ ಮತ್ತೆ ಜಿಮ್ ಗೆ ರೀಎಂಟ್ರಿ ಕೊಟ್ಟಿದ್ದಾರೆ. ವರ್ಕೌಟ್ ಮಾಡುತ್ತಿರುವ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ರಶ್ಮಿಕಾ ಅವರು ಎಲ್ಲೇ ಇರಲಿ, ಹೇಗೆ ಇರಲಿ, ಎಷ್ಟೇ ಬ್ಯುಸಿ ಇರಲಿ ಜಿಮ್ ನಲ್ಲಿ ವರ್ಕೌಟ್ ಮಾಡೋದಕ್ಕೆ ಸಮಯ ಮಾಡಿಕೊಳ್ಳುತ್ತಾರಂತೆ. ಈ ರೇಂಜ್ ಗೆ ವರ್ಕೌಟ್ ಹಾಗೂ ಫಿಟ್ನೆಸ್ ಬಗ್ಗೆ ರಶ್ಮಿಕಾ ಮಂದಣ್ಣ ಅವರಿಗೆ ಆಸಕ್ತಿ ಇದೆ. ಅಭಿಮಾನಿಗಳು ಸಹ ಇದನ್ನು ನೋಡಿ ಸಂತೋಷ ಪಟ್ಟಿದ್ದು, ತಾವು ಕೂಡ ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಎಂದು ಹೇಳುತ್ತಿದ್ದಾರೆ ಫ್ಯಾನ್ಸ್..ರಶ್ಮಿಕಾ ಅವರಿಂದ ಈ ಪೋಸ್ಟ್ ನಿಜಕ್ಕೂ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ರಶ್ಮಿಕಾ ಅವರು ಬೇರೆ ಭಾಷೆಯ ಸಿನಿಮಾಗಳಲ್ಲಿ ತುಂಬಾ ಆಕ್ಟಿವ್. ಆದರೆ ಕನ್ನಡದಲ್ಲಿ ಇವರು ನಟಿಸಿ ಬಹಳ ವರ್ಷಗಳೇ ಕಳೆದು ಹೋಗಿದೆ. ಕನ್ನಡದ ಬಗ್ಗೆ ಇವರು ತಾತ್ಸಾರ ಮಾಡುವುದನ್ನು ನೋಡಿ, ಇಂಥದ್ದೇ ಕೆಲವು ವಿಚಾರಗಳು ಹೊರಗಡೆ ಬಂದ ಬಳಿಕ ಕನ್ನಡ ಜನತೆಗೆ ಕೂಡ ಇವರನ್ನು ಕಂಡರೆ ಅಷ್ಟಕ್ಕಷ್ಟೇ ಎನ್ನುವ ಹಾಗಿದೆ. ಹಾಗಾಗಿ ಕನ್ನಡದವರಿಗೆ ರಶ್ಮಿಕಾ ಅವರನ್ನು ಕಂಡರೆ ಅಷ್ಟಕ್ಕಷ್ಟೇ, ಒಂದೊಳ್ಳೆ ಕನ್ನಡ ಸಿನಿಮಾ ಮಾಡಿ, ಕನ್ನಡದಲ್ಲಿ ಚೆನ್ನಾಗಿ ಮಾತನಾಡಿ, ಕನ್ನಡಕ್ಕೆ ಗೌರವ ಕೊಟ್ಟರೆ, ಈಗಿರುವ ಈ ಅಭಿಪ್ರಾಯಗಳು ಬದಲಾಗಬಹುದೇನೋ.. ರಶ್ಮಿಕಾ ಅವರು ಈ ಪ್ರಯತ್ನ ಮಾಡಿದರೆ, ಸಾಕಷ್ಟು ವಿಚಾರಗಳು ಚೇಂಜ್ ಆಗಬಹುದು..ಇವರಿಗೆ ಒಳ್ಳೆಯದಾಗಲಿ.