ಟ್ರೋಲರ್ಸ್ ಜಗತ್ತಿನ ರಾಣಿ ಎಂದೇ ಹೇಳಬಹುದಾದ “ರಶ್ಮಿಕಾ” ಅವರು ಇದೀಗ ಸಿಡಿದೆದ್ದಿದ್ದಾರೆ. ಈ ಹಿಂದೆ ರಶ್ಮಿಕಾ ಅವರು ಕೆಲವೊಂದು ವಿಚಾರಕ್ಕೆ ಟ್ರೋಲ್ ಆಗುತ್ತಿದ್ದರು.ಆದರೆ ಇದೀಗ ಈ ನಟಿ ಮಾಡಿದ ಕೆಲ್ಸ ಎಲ್ಲವೂ ಕೂಡ ಟ್ರೋಲ್ ಗಳಿಗೆ ಸಿಲುಕುತ್ತಿದೆ.ಈ ನಟಿ ಬಣ್ಣದ ಲೋಕಕ್ಕೆ ಪರಿಚಯಿಸಿಕೊಂಡು ಸರಿಸುಮಾರು 8ವರ್ಷಗಳು ಕಳೆದಿವೆ.ಈ ಎಂಟು ವರ್ಷಗಳಲ್ಲಿ ಈಕೆ ಸಾಕಷ್ಟು ಅವಮಾನಗಳಿಗೆ ಒಳಗಾಗಿದ್ದಾರೆ.ಈ ನಟಿ ಬಣ್ಣ ಹಚ್ಚಿದ್ದು ಕನ್ನಡದ ಹೊಸಬರ ಸಿನಿಮಾ ಎಂದು ಪ್ರಸಿದ್ದಿ ಪಡೆದಿದ್ದ “ಕಿರಿಕ್ ಪಾರ್ಟಿ” ಸಿನಿಮಾ ಮೂಲಕ.ಈ ಸಿನಿಮಾದಲ್ಲಿ ಈ ನಟಿ ಚಿಕ್ಕ ಪತ್ರವಾದರು ಕೊಡ ತಾನು ಇದ್ದಷ್ಟು ಸಮಯದಲ್ಲಿ ಬಹಳ ಗಮನರ್ಹ ನಟನೆಯನ್ನು ಮಾಡಿ ರಾತ್ರೋ ರಾತ್ರಿ “ನ್ಯಾಶಿನಲ್ ಕ್ರಶ್” ಎಂಬ ಬಿರುದು ಕೊಡ ಪಡೆದುಕೊಂಡರು.

ಈ ಸಿನಿಮಾ ಆದ ಬಳಿಕ ಈ ನಟಿಯ ಹಣೆಬರಹ ಬದಲಾಗುತ್ತಾ ಹೋಯಿತು.ಈ ನಟಿಯ ಪ್ರಸಿದ್ದಿ ಹೆಚ್ಚುತ್ತಿದ್ದಂತೆ ಅವಕಾಶಗಳು ಕೂಡ ಹೆಚ್ಚುತ್ತಾ ಹೋಯಿತು.ಪರ ಭಾಷೆಯಿಂದೆಲ್ಲಾ ಅವಕಾಶ ಹುಡುಕಿಕೊಂಡು ಬರಲು ಆರಂಬಿಸಿತು.ಇದಾದ ಬಳಿಕ ಈ ನಟಿ ರಶ್ಮಿಕಾ ಹಾಗೂ “ವಿಜಯ್” ಅವರ ನಟನೆಯ “ಗೀತಾ ಗಿವಿಂದಮ್” ಚಿತ್ರ ಇವರ ಹಣೆಬರಹ ಹಾಗೂ ಅಭಿಪ್ರಾಯಗಳನ್ನು ಸಂಪೂರ್ಣ ಬದಲಾಗುತ್ತಾ ಹೋಯಿತು.ಅದರಲ್ಲೂ ಇವರಿಬ್ಬರ ಲಿಪ್ ಲಾಕ್ ಸಿನ್ ತುಂಬಾ ಹೈಪ್ ಪಡೆದುಕೊಂಡಿತ್ತು.ಇದೇ ಕಾರಣದಿಂದ ರಕ್ಷಿತ್ ಹಾಗೂ ರಶ್ಮಿಕಾ ಅವರ ರಿಲೇಷನ್ ಕೊಡ ಮುರಿದು ಬಿತ್ತು.
ಇದಾದ ಬಳಿಕ ರಶ್ಮಿಕಾ ಅವರಿಗೆ ಎಲ್ಲವೂ ಬದಲಾಗಿತ್ತು.ಕನ್ನಡಿಗರಿಂದಲೇ ಬೆಳೆದು ಬಂದಿದ್ದನ್ನು ಮರೆತು.ಕನ್ನಡವೇ ಗೊತ್ತಿಲ್ಲ ಹಾಗೂ ಪರ ಭಾಷೆ ಎಂದರೆ ಪ್ರಾಣದಂತೆ ಎಲ್ಲರ ಸಮ್ಮುಖದಲ್ಲಿ ನಡೆದುಕೊಳ್ಳುತ್ತಿದ್ದಾರೆ.ಟ್ರೋಲರ್ಸ್ ಗಳು ಹೆಚ್ಚಾಗಿ ಇವರನ್ನೇ ಟ್ರೋಲ್ ಮಾಡುತ್ತಾರೆ ಹೌದು ಆದರೆ ರೀತಿ ಮಾಡುವಂತೆ ವರ್ತನೆ ಮಾಡುವುದು ಈ ನಟಿ ಎಂದರೆ ತಪ್ಪಾಗಲಾರದು. ಇದೀಗ ಕೆಲ ದಿನಗಳ ಹಿಂದೆ ತಮ್ಮ ಮೊದಲ ಚಿತ್ರವಾದ ಕಿರಿಕ್ ಪಾರ್ಟಿ ಸಿನಿಮಾ ಬಗ್ಗೆ ಕೇಳಿದಾಗ ಕೂಡ ದೂರಹಂಕಾರದ ಮಾತನಾಡಿದ್ದಾರೆ.
ನಾನು ಕಾಲೇಜ್ ನಲ್ಲಿ ಓದುತ್ತಿದ್ದೆ ಆ ಸಮಯದಲ್ಲಿ ನನ್ನ ಕಾಲೇಜ್ ನಲ್ಲಿ ನಡೆದ ಬ್ಯುಟಿ ಕಂಟಸ್ಟ್ ಗಾಗಿ ತೆಗೆದಿದ್ದ ಒಂದು ಕೆಟ್ಟ ಫೋಟೋಗಳನ್ನು ಮೆಚ್ಚಿಕೊಂಡು ನನ್ನ ಹಿಂದೆ ಬಿದ್ದಿತ್ತು ಈ ಚಿತ್ರ ತಂಡ.ಆಗಲು ಕೊಡ ನಾನು ತಿರಸ್ಕರಿಸಿ ಫೋನ್ ಕಟ್ ಮಾಡಿದೆ.ಹೀಗಿದ್ದರೂ ಬೆನ್ನು ಬಿಡದೆ ಪಿಡಿಸಿದ ಕಾರಣಕ್ಕೆ ಮಾತ್ರ ನಾನು ಈ ಚಿತ್ರ ಮಾಡಿದ್ದು.ಎಲ್ಲವಾದಿದ್ದಲ್ಲಿ ನಾನು ಈ ಚಿತ್ರ ತಂಡದ ಕಡೆ ತಿರುಗಿ ಕೂಡ ನೋಡುತ್ತಿರಲಿಲ್ಲಾ ಎಂದು ರಿಷಬ್ ಹಾಗೂ ರಕ್ಷಿತ್ ಅವರ ಹೆಸರು ಹೇಳಲು ಹಿಂಜರಿದು ಕೈ ಯಲ್ಲಿ ಸನ್ನೆ ಮಾಡುವ ಮುಕಂತರ ತಿಳಿಸಿದ್ದರು.
ಆಗ ಕೂಡ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ ನಡೆದು ಬಂದ ಹಾದಿಯನ್ನು ಮರೆತು ಬೆಳೆದ ತಕ್ಷಣ ಎಲ್ಲವನ್ನು ಕಸದ ರೀತಿಯಲ್ಲಿ ನೋಡುತ್ತೀರಾ ಎಂದು ರಶ್ಮಿಕಾ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು.ಆದರೆ ಈ ವಿಚಾರವಾಗಿ ಅಂದು ರಿಷಬ್ ಆಗಲಿ ರಕ್ಷಿತ್ ಆಗಲಿ ಯಾವ ಪ್ರತಿಕ್ರಿಯೆ ಕೂಡ ಹೇಳಿರಲಿಲ್ಲ.ಆದರೆ ಇದೀಗ ಕಾಂತರ ಸಕ್ಸಸ್ ನಲ್ಲಿ ಇರುವ ರಿಷಬ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.ಇದೀಗ ಅದೇ ಪರಭಾಷೆಯ ಚಾನಲ್ ನಲ್ಲಿ ನಡೆದ ಇಂಟರ್ವ್ಯೂ ನಲ್ಲಿ ರಶ್ಮಿಕಾ ಅವರಿಗೆ ತಿರುಗೇಟು ನೀಡಿದ್ದಾರೆ.ಏನೆಂದು ಹೇಳಿದ್ದಾರೆ ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
“ಗುಲ್ಟಿ ಡಾಟ್ ಕಾಮ್” ಯೂಟ್ಯೂಬ್ ಸಂದರ್ಶನದಲ್ಲಿ ರಶ್ಮಿಕಾಗೆ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದಾರೆ. ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಈ 4 ನಟಿಯರಲ್ಲಿ ಯಾರ ನಟನೆ ನಿಮಗೆ ಇಷ್ಟ? ಯಾರೊಟ್ಟಿಗೆ ನಟಿಸ್ತೀರಾ? ಎನ್ನುವ ಪ್ರಶ್ನೆಸಿದಾಗ ರಿಷಬ್ ಉತ್ತರಿಸಿದ್ದಾರೆ. ಸ್ಕ್ರಿಪ್ಟ್ ಮುಗಿದ ಮೇಲೆ ಕಲಾವಿದರ ಬಗ್ಗೆ ನಾನು ಯೋಚಿಸುತ್ತೇನೆ. ಹೊಸ ಕಲಾವಿದರ ಜೊತೆ ನಟಿಸೋಕೆ ಇಷ್ಟಪಡುತ್ತೀನಿ. ನೀವು ಹೇಳಿದ ಹೆಸರುಗಳಲ್ಲಿ ಈ ತರಹದ (ರಶ್ಮಿಕಾ ಸನ್ನೆ ಮಾಡಿ ತೋರಿಸಿದಂತೆ) ನಟಿಯರು ನನಗೆ ಇಷ್ಟ ಇಲ್ಲ’ ಎಂದಿದ್ದಾರೆ. ಇದನ್ನು ನೋಡಿ ರಿಷಬ್ ಶೆಟ್ಟಿ ಸರಿಯಾಗಿ ರಶ್ಮಿಕಾಗೆ ಟಾಂಗ್ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.