ಕನ್ನಡ ಸಿನಿಮಾ ರಂಗದಲ್ಲಿ ದಶಕಗ ಕಾಲ ಮೋಹಕ ತಾರೆಯಾಗಿ ಮರೆದ ರಮ್ಯಾ ಆ ಬಳಿಕ ರಾಜಕೀಯ ಹಾಗೂ ಇತರೆ ಕಾರಣಗಳಿಂದ ಸಿಬಿಮಾ ರಂಗದಿಂದ ದೂರವಾಗಿ ಬಿಟ್ಟರು. ಇದೀಗ ಡಾಲಿ ಧನಂಜಯ್ ಅಭಿನಯದ ಉತ್ತರಕಾಂಡ ಸಿನಿಮಾ ಮೂಲಕ ಮತ್ತೆ ನಟನೆಗೆ ಮರಳಲಿರುವ ರಮ್ಯಾ ಸದ್ಯ, ವಿದೇಶದಲ್ಲಿದ್ದಾರೆ. ತುಂಡುಡುಗೆಯಲ್ಲಿ ತಮ್ಮ ನೆಚ್ಚಿನ ನಟಿಯನ್ನು ಕಂಡು ನೆಟ್ಟಿಗರು ಕರಗಿ ನೀರಾಗಿದ್ದಾರೆ.

ತನ್ನ ಸ್ನೇಹಿತೆ ಜತೆಗೆ ವಿದೇಶದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋವನ್ನು ರಮ್ಯಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಬಿಸಿಲಿಗೆ ಬೋಟ್ನಲ್ಲಿ ಸುತ್ತಾಡುವ ಫೋಟೋ ಸೇರಿದಂತೆ 10 ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಬೀಚ್ನಲ್ಲಿ ಕ್ಲಿಕ್ ಮಾಡಿದ ಫೋಟೋವೊಂದರಲ್ಲಿ ಬ್ಲ್ಯಾಕ್ ಕಲರ್ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ರಮ್ಯಾ ಫೋಟೋ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.
ಡಾಲಿ ಜೊತೆ ರಮ್ಯಾ ಅಭಿನಯದ ಉತ್ತರಾಖಂಡ ಚಿತ್ರದ ಫಸ್ಟ್ ಲುಕ್ ಟೀಸರ್ ವಿಡಿಯೋ ಬಿಡುಗಡೆಯಾಗಿದೆ. ಟೀಸರ್ನಲ್ಲಿ ಡಾಲಿ ಉತ್ತರ ಕರ್ನಾಟಕದ ಕರಾಬು ರೌಡಿ ರೀತಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ರೋಹಿತ್ ಪಡಕಿ ಅವರು ಆ್ಯಕ್ಷನ್ ಕಟ್ ಹೇಳಿದ್ದು, ಕೆಆರ್ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾ ರೆಡಿಯಾಗುತ್ತಿದೆ. ಅಂತೂ-ಇಂತೂ ನಟಿ ರಮ್ಯಾ ದಶಕಗಳ ನಂತರ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.